Ayurvedic Tips: ಕಲ್ಲುಸಕ್ಕರೆಯನ್ನು ಈ ಪದಾರ್ಥಗಳ ಜೊತೆ ಬೆರೆಸಿ ತಿನ್ನುವುದರಿಂದ ದೊರೆಯುತ್ತದೆ ಹಲವು ಆರೋಗ್ಯ ಪ್ರಯೋಜನಗಳು
ಆಯುರ್ವೇದದ ಪ್ರಕಾರ ಕಲ್ಲುಸಕ್ಕರೆಯಲ್ಲಿ ಹಲವಾರು ಔಷಧೀಯ ಗುಣಗಳು ಕಂಡು ಬರುತ್ತದೆ. ಆ ಕಾರಣದಿಂದಲೇ ಇದನ್ನು ಅನೇಕ ಕಾಯಿಲೆಗಳನ್ನು ಗುಣಪಡಿಸಲು ಮನೆಮದ್ದಾಗಿ ಉಪಯೋಗಿಸಲಾಗುತ್ತದೆ. ಅದರಲ್ಲೂ ಕೆಲವು ಪದಾರ್ಥಗಳೊಂದಿಗೆ ಕಲ್ಲುಸಕ್ಕರೆಯನ್ನು ಬೆರೆಸಿ ತಿನ್ನುವುದರಿಂದ ಅದರ ದ್ವಿಗುಣ ಪ್ರಯೋಜವನ್ನು ಪಡೆಯುವ ಮೂಲಕ ದೇಹದ ಅನೇಕ ಕಾಯಿಲೆಗಳನ್ನು ದೂರಮಾಡಬಹುದು.
ಕಲ್ಲು ಸಕ್ಕರೆ ರುಚಿಯಲ್ಲಿ ಸಿಹಿಯಾಗಿದ್ದು, ಇದನ್ನು ಆಯುರ್ವೇದಲ್ಲಿ ಮತ್ತು ಮನೆಮದ್ದುಗಳಲ್ಲಿ ಔಷಧೀಯ ರೂಪದಲ್ಲಿ ಉಪಯೋಗಿಸಲಾಗುತ್ತದೆ. ಇಷ್ಟೇ ಅಲ್ಲದೆ ಕಲ್ಲು ಸಕ್ಕರೆಯನ್ನು ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಇದರ ಶುದ್ಧತೆಯ ಕಾರಣದಿಂದಾಗಿ ಕಲ್ಲುಸಕ್ಕರೆಯನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಸಕ್ಕರೆಯ ಹಾಗೆ ಕಲ್ಲುಸಕ್ಕರೆಯನ್ನು ಸಂಸ್ಕರಿಲಾಗುವುದಿಲ್ಲ. ಈ ಕಾರಣದಿಂದಲೇ ಇವುಗಳು ಸಕ್ಕರೆಯಂತೆ ನಮ್ಮ ದೇಹಕ್ಕೆ ಹಾನಿಕಾರಕವಲ್ಲ. ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ. ಇದರ ಪ್ರಯೋಜನಕಾರಿ ಗುಣಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಔಷಧೀಯ ಗುಣಗಳನ್ನು ಹೊಂದಿರುವ ಕಲ್ಲು ಸಕ್ಕರೆಯನ್ನು ಕೆಲವೊಂದು ಪದಾರ್ಥಗಳೊಂದಿಗೆ ಬೆರೆಸಿ ತಿನ್ನುವುದರಿಂದ ಇದರ ದ್ವಿಗುಣ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಈ ಕೆಲವು ಪದಾರ್ಥಗಳ ಜೊತೆಗೆ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ:
ಒಣ ಶುಂಠಿ ಮತ್ತು ಕಲ್ಲು ಸಕ್ಕರೆ:
ಕಲ್ಲು ಸಕ್ಕರೆಯೊಂದಿಗೆ ಒಣ ಶುಂಠಿಯನ್ನು ಬೆರೆಸಿ ತಿನ್ನುವುದರಿಂದ ಇದು ದೇಹದ ಆರೋಗ್ಯ ಸಮಸ್ಯೆಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಎರಡು ವಸ್ತುಗಳನ್ನು ಬೆರೆಸಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಹಸಿವಾಗದಿರುವ ಸಮಸ್ಯೆ ನಿವಾರಣೆಯಾಗುತ್ತದೆ, ಜೀರ್ಣಶಕ್ತಿ ಬಲಗೊಳ್ಳುತ್ತದೆ, ಶೀತ ಮತ್ತು ಕೆಮ್ಮಿನ ಸಮಸ್ಯೆಯಿಂದ ಪರಿಹಾರವನ್ನು ಒಗಿಸುತ್ತದೆ ಮತ್ತು ಇದು ಕಫದ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ.
ನೆಲ್ಲಿಕಾಯಿ ಮತ್ತು ಒಣಶುಂಠಿ:
ಕೂದಲು ಉದುರುವ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಕಲ್ಲು ಸಕ್ಕರೆಯೊಂದಿಗೆ ಸಮ ಪ್ರಮಾಣದಲ್ಲಿ ನೆಲ್ಲಿಕಾಯಿ ಪುಡಿ ಮತ್ತು ದೇಸಿ ತುಪ್ಪವನ್ನು ಬೆರೆಸಿ ತಿನ್ನಿ. ಇದು ಕೂದಲು ಉದುರುವ ಸಮಸ್ಯೆಯಿಂದ ನಿಮಗೆ ಪರಿಹಾರವನ್ನು ಒದಗಿಸುತ್ತದೆ.
ತ್ರಿಫಲ ಚೂರ್ಣ ಮತ್ತು ಕಲ್ಲು ಸಕ್ಕರೆ:
ತ್ರಿಫಲ ಪುಡಿಯನ್ನು ಆಯುರ್ವೇದದಲ್ಲಿ ಕಣ್ಣುಗಳಿಗೆ ಅತ್ಯಂತ ಪರಿಣಾಮಕಾರಿ ಔಷಧಿ ಎಂದು ಹೇಳಲಾಗಿದೆ. ಇದನ್ನು ತಿನ್ನುವುದರಿಂದ ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದ. ತ್ರಿಫಲ ಚೂರ್ಣವನ್ನು ಕಲ್ಲು ಸಕ್ಕರೆ ಮತ್ತು ದೇಸಿ ತುಪ್ಪದೊಂದಿಗೆ ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಕಣ್ಣಿನ ದೃಷ್ಟಿ ತೀಕ್ಷ್ಣವಾಗುತ್ತದೆ.
ಕರಿಮೆಣಸು ಮತ್ತು ಕಲ್ಲು ಸಕ್ಕರೆ:
ಕಲ್ಲುಸಕ್ಕರೆಯನ್ನು ಶೀತ ಮತ್ತು ಕೆಮ್ಮು ಸಮಸ್ಯೆಗೆ ಅತ್ಯಂತ ಪ್ರಯೋಜನಕಾರಿ ಔಷಧಿ ಎಂದು ಪರಿಗಣಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ಕರಿಮೆಣಸಿನ ಜೊತೆಗೆ ಕಲ್ಲುಸಕ್ಕರೆಯನ್ನು ಬೆರೆಸಿ ತಿನ್ನುವುದರಿಂದ ಕೆಮ್ಮು, ನೆಗಡಿ ಮತ್ತು ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
ಸೋಂಪು ಮತ್ತು ಕಲ್ಲು ಸಕ್ಕರೆ:
ಸೋಂಪು ಕಾಳಿನ ಜೊತೆಗೆ ಕಲ್ಲುಸಕ್ಕರೆಯನ್ನು ಬೆರೆಸಿ ತಿನ್ನುವುದರಿಂದ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: ಕಾಂತಿಯುತ ತ್ವಚೆಗಾಗಿ ಮನೆಯಲ್ಲೇ ತಯಾರಿಸಿ ಕಾಫಿ ಬಾಡಿ ಸ್ಕ್ರಬ್
ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಲಭಿಸುವ ಇತರ ಪ್ರಯೋಜನಗಳು:
- ಕಲ್ಲು ಸಕ್ಕರೆ ತಿನ್ನುವುದರಿಂದ ಆಯಾಸ ನಿವಾರಣೆಯಾಗುತ್ತದೆ.
- ಇದು ಪುರುಷರ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.
- ವಾಂತಿ ಮಮತ್ತು ವಾಕರಿಕೆಯ ಸಮಯದಲ್ಲಿ ಕಲ್ಲು ಸಕ್ಕರೆಯನ್ನು ತಿನ್ನುವ ಮೂಲಕ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
- ಕಲ್ಲು ಸಕ್ಕರೆ ತಿನ್ನುವುದರಿಂದ ಗಂಟಲು ನೋವಿನ ಸಮಸ್ಯೆ ದೂರವಾಗುತ್ತದೆ.
- ಒತ್ತಡ ಮತ್ತು ಆತಂಕದ ಸಮಸ್ಯಯನ್ನು ನಿವಾರಿಸಲು ಸಹಕಾರಿ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: