ಪ್ರತ್ಯೇಕತೆಯ ಆತಂಕವನ್ನು ಹೆಚ್ಚಿಸುವ ಕಾರಣಗಳು ಹಾಗೂ ಅದರಿಂದ ಹೊರ ಬರುವ ಉಪಾಯಗಳ ತಿಳಿಯಿರಿ

ಇಬ್ಬರು ಪ್ರೀತಿಯಲ್ಲಿದ್ದಾಗ ಪರಸ್ಪರ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಾರೆ. ಒಟ್ಟಿಗೆ ತಿನ್ನುವುದು, ಕುಡಿಯುವುದು, ಸುತ್ತಾಡುವುದು ಹೀಗೆ ಒಟ್ಟಿಗೆ ಇರಲು ಬಯಸುತ್ತಾರೆ. ಹತ್ತಿರವಿದ್ದಾಕ್ಷಣ ಪ್ರೀತಿ ಉಕ್ಕುತ್ತದೆ, ದೂರವಿದ್ದಾಕ್ಷಣ ಪ್ರೀತಿ ಕಡಿಮೆಯಾಗುತ್ತದೆ ಎಂಬುದೆಲ್ಲಾ ಭ್ರಮೆ. ಪ್ರೀತಿಗೆ ಹತ್ತಿರ, ದೂರವೆನ್ನುವ ಭೇದ ಭಾವವಿಲ್ಲ.  ಸದಾ ಸಂಗಾತಿಯ ಗುಂಗಲ್ಲೇ ಇರುವವರು ಹಾಗೂ ತಮ್ಮ ಸಂಬಂಧದ ಮೇಲೆ ಭಯ ಇರುವವರಿಗೆ  ಪ್ರತ್ಯೇಕತೆಯ ಆತಂಕ ಹೆಚ್ಚಿರುತ್ತದೆ, ಸಂಗಾತಿಯಿಂದ ದೂರವಿದ್ದರೆ ನಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದೇ ಎನ್ನುವ ಭಯದಲ್ಲಿರುತ್ತಾರೆ.

ಪ್ರತ್ಯೇಕತೆಯ ಆತಂಕವನ್ನು ಹೆಚ್ಚಿಸುವ ಕಾರಣಗಳು ಹಾಗೂ ಅದರಿಂದ ಹೊರ ಬರುವ ಉಪಾಯಗಳ ತಿಳಿಯಿರಿ
Relationship
Follow us
ನಯನಾ ರಾಜೀವ್
|

Updated on: Sep 08, 2023 | 3:23 PM

ಇಬ್ಬರು ಪ್ರೀತಿಯಲ್ಲಿದ್ದಾಗ ಪರಸ್ಪರ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಾರೆ. ಒಟ್ಟಿಗೆ ತಿನ್ನುವುದು, ಕುಡಿಯುವುದು, ಸುತ್ತಾಡುವುದು ಹೀಗೆ ಒಟ್ಟಿಗೆ ಇರಲು ಬಯಸುತ್ತಾರೆ. ಹತ್ತಿರವಿದ್ದಾಕ್ಷಣ ಪ್ರೀತಿ ಉಕ್ಕುತ್ತದೆ, ದೂರವಿದ್ದಾಕ್ಷಣ ಪ್ರೀತಿ ಕಡಿಮೆಯಾಗುತ್ತದೆ ಎಂಬುದೆಲ್ಲಾ ಭ್ರಮೆ. ಪ್ರೀತಿಗೆ ಹತ್ತಿರ, ದೂರವೆನ್ನುವ ಭೇದ ಭಾವವಿಲ್ಲ.  ಸದಾ ಸಂಗಾತಿಯ ಗುಂಗಲ್ಲೇ ಇರುವವರು ಹಾಗೂ ತಮ್ಮ ಸಂಬಂಧದ ಮೇಲೆ ಭಯ ಇರುವವರಿಗೆ  ಪ್ರತ್ಯೇಕತೆಯ ಭಾವ ಕಾಡುತ್ತದೆ., ಸಂಗಾತಿಯಿಂದ ದೂರವಿದ್ದರೆ ನಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದೇ ಎನ್ನುವ ಭಯದಲ್ಲಿರುತ್ತಾರೆ. ಇದು ಸಂಬಂಧದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪ್ರತ್ಯೇಕತೆಯ ಆತಂಕವನ್ನು ಹೆಚ್ಚಿಸುವ ಕಾರಣಗಳನ್ನು ಮತ್ತು ಅದರಿಂದ ಹೊರಬರುವ ಮಾರ್ಗಗಳನ್ನು ತಿಳಿಯಿರಿ (ಬೇರ್ಪಡಿಸುವ ಆತಂಕವನ್ನು ಎದುರಿಸಲು ಸಲಹೆಗಳು ಇಲ್ಲಿವೆ.

ಪ್ರತ್ಯೇಕತೆಯ ಆತಂಕ ನಿಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದಿದ್ದರೂ ಬೇರ್ಪಡುವಿಕೆಯ ಆತಂಕ ಕಾಡುತ್ತಿರುತ್ತದೆ. ನೀವು ಎಲ್ಲಾ ಸಮಯದಲ್ಲೂ ಆತಂಕ ಮತ್ತು ಚಿಂತೆಯನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.

ಇದರಲ್ಲಿ ನೀವು ಸದಾ ಏಕಾಂಗಿಯಾಗಿರಲು ಬಯಸುತ್ತೀರಿ. ಹೀಗಾಗಿ ಪದೇ ಪದೇ ಸಂಗಾತಿಗೆ ಕರೆ ಮಾಡುವುದು ಸದಾ ಮಾತನಾಡುತ್ತಲೇ ಇರು ಎನ್ನುವುದು, ಮೆಸೇಜ್ ಮಾಡುತ್ತಲೇ ಇರುವುದು ಹೀಗೆ ಸ್ವಲ್ಪ ಮಾನಸಿಕ ಅಸ್ವಸ್ಥರಂತೆ ರಿಯಾಕ್ಟ್​ ಮಾಡುತ್ತೀರಿ. ಆಗ ಸಂಗಾತಿಗೆ ಉಸಿರುಗಟ್ಟಿದಂಥಾ ಅನುಭವವಾಗುತ್ತದೆ.

ಪ್ರತ್ಯೇಕತೆಯ ಆತಂಕದ ಲಕ್ಷಣಗಳನ್ನು ತಿಳಿಯಿರಿ ಚಿಂತೆ ಸುಮ್ಮನೆ ಕಿರಿಕಿರಿಯುಂಟುಮಾಡುವುದು ಸಂಗಾತಿಯಿಂದ ದೂರವಿರಲು ಭಯಪಡುವುದು ಕರೆಗಳು ಅಥವಾ ಸಂದೇಶಗಳ ಮೂಲಕ ಸಂಪರ್ಕದಲ್ಲಿರುವುದು ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದರೆ ಅಸಮಾಧಾನಗೊಳ್ಳುವುದು

ಪ್ರತ್ಯೇಕತೆ ಭಯದಿಂದ ಹೊರಬರುವುದು ಹೇಗೆ?

1. ಬೆಳಗ್ಗೆ ವಾಕಿಂಗ್​ಗೆ ಹೋಗಿ ಮನಸ್ಸನ್ನು ನಿರಾಳವಾಗಿಡಲು, ಪ್ರಕೃತಿಯ ಬಳಿ ಸ್ವಲ್ಪ ಸಮಯ ಕಳೆಯುವುದು ಬಹಳ ಮುಖ್ಯ. ಬೆಳಗ್ಗೆ ಬೇಗ ಎದ್ದು ಸುತ್ತಾಡಲು ಹೋಗಿ ಪ್ರತಿದಿನ ಹೊಸ ಮಾರ್ಗವನ್ನು ಆರಿಸಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ. ಇದಲ್ಲದೆ, ನೀವು ಪ್ರತಿದಿನ ಹೊಸ ದೃಶ್ಯಗಳನ್ನು ಆನಂದಿಸಲು ಸಾಧ್ಯವಾಗುತ್ತದೆ, ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2. ಇಷ್ಟದ ಚಟುವಟಿಕೆಗಳು ನಿಮ್ಮ ನೆಚ್ಚಿನ ಚಟುವಟಿಕೆಯನ್ನು ನಿಮ್ಮ ಜೀವನದ ಭಾಗವಾಗಿಸಿ. ಇದಕ್ಕಾಗಿ, ನೀವು ಇಷ್ಟಪಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ, ಅದಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ.

ಇದರಿಂದ ನೀವು ಹೊಸದನ್ನು ಕಲಿಯಲು ಸಾಧ್ಯವಾಗುತ್ತದೆ, ಆದರೆ ನಿಮ್ಮ ಮನಸ್ಸು ಕೂಡ ಇನ್ನೊಂದು ಕಡೆಗೆ ತಿರುಗಲು ಪ್ರಾರಂಭಿಸುತ್ತದೆ. ನೀವು ಬಯಸಿದರೆ, ನೀವು ಚಿತ್ರಕಲೆ, ಹಾಡುಗಾರಿಕೆ ಮತ್ತು ನೃತ್ಯದಲ್ಲಿ ಭಾಗವಹಿಸಬಹುದು. ಇದಲ್ಲದೇ ಯಾವುದೇ ವೃತ್ತಿಪರ ಕೋರ್ಸ್ ಕೂಡ ಮಾಡಬಹುದು.

3. ಮಾತನಾಡಲು ಸಮಯ ಮಾಡಿಕೊಳ್ಳಿ ಈ ಸಮಸ್ಯೆಯಿಂದ ಹೊರಬರಲು, ಪರಸ್ಪರ ಸ್ವಲ್ಪ ಸಮಯವನ್ನು ನಿಗದಿಪಡಿಸಿ. ಇದರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಬ್ಬರಿಗೊಬ್ಬರು ಸಮಯವನ್ನು ನೀಡಬಹುದು. ನೀವು ದೂರದ ಡಿಸ್ಟೆಂಟ್ ರಿಲೇಶನ್​ಶಿಪ್​ನಲ್ಲಿದ್ದರೆ ವಿಡಿಯೋ ಕಾಲ್ ಮೂಲಕ ಮಾತನಾಡಿ, ನೀವು ಒಂದೇ ಕಚೇರಿ ಅಥವಾ ಮನೆಯ ಸಮೀಪದಲ್ಲಿದ್ದರೆ, ದಿನವಿಡೀ ಪರಸ್ಪರ ಸ್ವಲ್ಪ ಸಮಯವನ್ನು ನೀಡಿ. ಇದು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

4. ಪದೇ ಪದೇ ಕರೆ ಮಾಡುವುದನ್ನು ಅಥವಾ ಸಂದೇಶ ಕಳುಹಿಸುವುದನ್ನು ತಪ್ಪಿಸಿ ನೀವು ದಿನವಿಡೀ ದೀರ್ಘಕಾಲ ಪರಸ್ಪರ ಸಂಪರ್ಕದಲ್ಲಿದ್ದರೆ, ಸಂಬಂಧದಲ್ಲಿ ತಪ್ಪು ತಿಳಿವಳಿಕೆ ಹೆಚ್ಚಾಗುವ ಅಪಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಸಮಯದಲ್ಲೂ ಪರಸ್ಪರ ಸಂದೇಶ ಕಳುಹಿಸುವುದನ್ನು ಮತ್ತು ಕರೆ ಮಾಡುವುದನ್ನು ನಿಲ್ಲಿಸಿ. ಇದರಿಂದ ನಿಮ್ಮೊಳಗೆ ಮಾನಸಿಕ ಒತ್ತಡ ಹೆಚ್ಚಾಗತೊಡಗುತ್ತದೆ .

5. ಸ್ನೇಹಿತರಿಗಾಗಿ ಸ್ವಲ್ಪ ಸಮಯ ಕಳೆಯಿರಿ ನೀವು ಒತ್ತಡವನ್ನು ಅನುಭವಿಸುತ್ತಿದ್ದರೆ ಮತ್ತು ನಿಮ್ಮ ಸಂಗಾತಿಯ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತಿದ್ದರೆ, ಈ ಸಮಸ್ಯೆಯಿಂದ ಹೊರಬರಲು ನಿಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಅವರೊಂದಿಗೆ ಪ್ರವಾಸವನ್ನು ಯೋಜಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ