ಸಣ್ಣ ವಯಸ್ಸಿನಲ್ಲಿಯೇ ಮುಖದಲ್ಲಿ ವಯಸ್ಸಾಗುವಿಕೆಯ ಲಕ್ಷಣ ಗೋಚರಿಸುತ್ತಿವೆಯೇ? ಹಾಗಾದರೆ ಈ ಆಹಾರಗಳಿಂದ ದೂರವಿರಿ

ಪ್ರತಿಯೊಬ್ಬರೂ ತಮ್ಮ ತ್ವಚೆಯು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ ಅನುಸರಿಸುವ ಕೆಲವೊಂದು ಆಹಾರ ಕ್ರಮವು ತ್ವಚೆಯಲ್ಲಿ ಅಕಾಲಿಕ ವಯಸ್ಸಾಗುವಿಕೆಯ ಲಕ್ಷಣ ಗೋಚರಿಸಲು ಕಾರಣವಾಗುತ್ತದೆ. ಈ ಕಾರಣದಿಂದ ತ್ವಚೆಯಲ್ಲಿ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ ಕೆಲವು ಆಹಾರಗಳ ಸೇವನೆಯನ್ನು ತಪ್ಪಿಸಬೇಕು.

ಸಣ್ಣ ವಯಸ್ಸಿನಲ್ಲಿಯೇ ಮುಖದಲ್ಲಿ ವಯಸ್ಸಾಗುವಿಕೆಯ ಲಕ್ಷಣ ಗೋಚರಿಸುತ್ತಿವೆಯೇ? ಹಾಗಾದರೆ ಈ ಆಹಾರಗಳಿಂದ ದೂರವಿರಿ
ಮುಖದಲ್ಲಿ ವಯಸ್ಸಾಗುವಿಕೆಯ ಲಕ್ಷಣImage Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Sep 08, 2023 | 12:40 PM

ಪ್ರತಿಯೊಬ್ಬರೂ ತಮ್ಮ ಮುಖವು ಸುಂದರವಾಗಿ ಕಾಂತಿಯುತವಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಆದರೆ ಕಳಪೆ ಮಟ್ಟದ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಒತ್ತಡ, ನಿದ್ರೆಯ ಕೊರತೆ ಇತ್ಯಾದಿ ಕಾರಣಗಳಿಂದಾಗಿ ಮುಖದ ಮೇಲೆ ಸುಕ್ಕುಗಳು ಮತ್ತು ಅಕಾಲಿಕ ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯನ್ನು ಹೆಚ್ಚಿನ ಜನರು ಎದುರಿಸುತ್ತಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಕೆಲವು ಆಹಾರ ಪದಾರ್ಥಗಳು ಚರ್ಮದ ಅಕಾಲಿಕ ವಯಸ್ಸಾಗುವಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸುತ್ತಾರೆ.  ಹಾಗಾಗಿ ಆರೋಗ್ಯಕರ ಮತ್ತು ಕಾಂತಿಯುತ ತ್ವಚೆ ನಿಮ್ಮದಾಗಬೇಕೇಂದು ಬಯಸಿದರೆ, ಈ ಕೆಲವು ಆಹಾರಗಳ ಸೇವನೆಯನ್ನು ತಪ್ಪಿಸಬೇಕು.

ಮುಖದ ಮೇಲೆ ವಯಸ್ಸಾಗುವಿಕೆಯ ಲಕ್ಷಣಗಳು ಗೋಚರವಾಗಲು ಕಾರಣವಾಗುವ ಆಹಾರಗಳು:

ಊರಿಯೂತವನ್ನು ಉಂಟು ಮಾಡುವ ಆಹಾರ ಪದಾರ್ಥಗಳು: 

ಸಕ್ಕರೆ, ಅನಾರೋಗ್ಯಕರ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳಲ್ಲಿ ಅಧಿಕವಾಗಿರುವ ಆಹಾರ ಪದಾರ್ಥಗಳು ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಈ ಉರಿಯೂತವು ಚರ್ಮದ ವಯಸ್ಸಾಗುವಿಕೆಯ ಲಕ್ಷಣವನ್ನು ವೇಗಗೊಳಿಸುತ್ತದೆ, ಇದರ ಪರಿಣಾಮವಾಗಿ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ.

ಫ್ರೆಂಚ್ ಫ್ರೈಸ್:

ಫ್ರೆಂಚ್ ಫ್ರೈಸ್ ತಿನ್ನಲು ತುಂಬಾ ರುಚಿಯಾಗಿರುತ್ತವೆ ಆದರೆ ಅವುಗಳು ಬಹಳಷ್ಟು ಉಪ್ಪು ಮತ್ತು ಎಣ್ಣೆಯನ್ನು ಹೊಂದಿರುತ್ತವೆ. ಅಲ್ಲದೆ ಇದನ್ನು ಹೆಚ್ಚಿನ ತಾಪಮಾನದಲ್ಲಿ ತಯಾರಿಸಲಾಗುತ್ತದೆ. ಇದು ದೇಹದ ಫ್ರೀ ರಾಡಿಕಲ್ ಗಳನ್ನು ಹೊರತೆಗೆಯುತ್ತದೆ . ಈ ಕಾರಣದಿಂದಾಗಿ ಚರ್ಮವು ಹಾನಿಗೊಳಗಾಗುತ್ತದೆ. ಹಾಗೂ ಫ್ರೀ ರಾಡಿಕಲ್ ಗಳು ವಯಸ್ಸಾಗುವಿಕೆಯ ಲಕ್ಷಣವನ್ನು ವೇಗಗೊಳಿಸುತ್ತವೆ. ಹೆಚ್ಚು ಉಪ್ಪು ತಿನ್ನುವುದರಿಂದ ದೇಹದಲ್ಲಿ ನಿರ್ಜಲೀಕರಣವಯ ಉಂಟಾಗುತ್ತದೆ. ಈ ಕಾರಣದಿಂದಾಗಿ ಚರ್ಮವು ಸಡಿಲಗೊಳ್ಳುತ್ತವೆ ಮತ್ತು ತ್ವಚೆಯಲ್ಲಿ ಸುಕ್ಕುಗಳು ತ್ವರಿತವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಸಕ್ಕರೆಯುಕ್ತ ಆಹಾರಗಳು:

ಮೊಡವೆಗಳಂತಹ ಚರ್ಮದ ಸಮಸ್ಯೆಗಳಿಗೆ ಹೆಚ್ಚಿನ ಪ್ರಮಾಣದ ಸಕ್ಕರೆಯ ಸೇವನೇ ಕಾರಣವಾಗಿದೆ. ಸಕ್ಕರೆಯು ಕಾಲಜನ್ ನ್ನು ಹಾನಿ ಮಾಡುವ ಗ್ಲೈಕೇಶನ್ ನ್ನು ಉತ್ಪಾದಿಸುತ್ತದೆ. ದೇಹದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾದಾಗ ವಯಸ್ಸಾಗುವಿಕೆಯ ಲಕ್ಷಣಗಳು ವೇಗವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ನೀವು ಸಿಹಿ ತಿನ್ನಲು ಇಷ್ಟಪಡುತ್ತಿದ್ದರೆ, ಸಕ್ಕರೆಯಿಂದ ಮಾಡಿದ ಆಹಾರ ಪದಾರ್ಥಗಳ ಬದಲಿಗೆ ಸಿಹಿ ಹಣ್ಣುಗಳನ್ನು ಸೇವನೆ ಮಾಡಿ. ಇದರಿಂದ ನಿಮ್ಮ ತ್ವಚೆಯೂ ಆರೋಗ್ಯಕರವಾಗಿರುತ್ತದೆ.

ಇದನ್ನೂ ಓದಿ: ತೆಂಗಿನ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳು

ಸೋಡಾ ಮತ್ತು ಕಾಫಿ:

ಸೋಡಾ ಮತ್ತು ಕಾಫಿಯಲ್ಲಿ ಬಹಳಷ್ಟು ಕೆಫೀನ್ ಅಂಶ ಕಂಡುಬರುತ್ತದೆ. ಹಾಗಾಗಿ ಇದರ ಸೇವನೆಯಿಂದ ಸರಿಯಾಗಿ ನಿದ್ದೆ ಬರುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಕಡಿಮೆ ನಿದ್ರೆಯು ಚರ್ಮದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಸರಿಯಾಗಿ ನಿದ್ದೆ ಮಾಡದ ಕಾರಣ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಮತ್ತು ಸುಕ್ಕುಗಳು ಉಂಟಾಗುತ್ತವೆ. ಹಾಗಾಗಿ ಸೋಡಾ ಮತ್ತು ಕಾಫಿಗಳನ್ನು ಕುಡಿಯುವುದನ್ನು ಕಡಿಮೆ ಮಾಡಿ. ಕಾಫಿಯ ಬದಲು ಅರಶಿನ ಹಾಲನ್ನು ಕುಡಿಯಿರಿ. ಇದು ಆಂಟಿಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿದೆ. ಅಲ್ಲದೆ ಇದು ವಯಸ್ಸಾಗುವಿಕೆಯ ವಿರೋಧಿ ಲಕ್ಷಣಗಳನ್ನು ಹೊಂದಿದೆ.

ಮಧ್ಯಪಾನ:

ಆಲ್ಕೋಹಾಲ್ ನಿಂದಾಗಿ ಚರ್ಮ ಕೆಂಪಾಗುವುದು, ಸುಕ್ಕುಗಳು, ಊತ, ಕಾಲಜನ್ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಆಲ್ಕೋಹಾಲ್ ದೇಹದಿಂದ ಪೋಷಕಾಂಶಗಳು ಮತ್ತು ವಿಟಮಿನ್ ಎ ಜೀವಸತ್ವವನ್ನು ತೆಗೆದುಹಾಕುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇವೆಲ್ಲದರ ಕಾರಣ ಮುಖದಲ್ಲಿ ಸುಕ್ಕುಗಳು ಹೆಚ್ಚಾಗುತ್ತವೆ. ಹಾಗಾಗಿ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

ಸಂಸ್ಕರಿಸಿದ ಆಹಾರಗಳು:

ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ಪ್ರಮಾಣವು ತುಂಬಾ ಹೆಚ್ಚಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಂತಹ ಆಹಾರಗಳನ್ನು ಹೆಚ್ಚು ತಿನ್ನುವುದು ತಪ್ಪಿಸಬೇಕು. ಏಕೆಂದರೆ ಅದು ನಮ್ಮ ಹೊಟ್ಟೆ ಕೆಡಿಸುವುದು ಮಾತ್ರವಲ್ಲದೆ ತ್ವಚೆಗೂ ಹಾನಿಯನ್ನುಂಟುಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್