Coffee Body Scrub: ಕಾಂತಿಯುತ ತ್ವಚೆಗಾಗಿ ಮನೆಯಲ್ಲೇ ತಯಾರಿಸಿ ಕಾಫಿ ಬಾಡಿ ಸ್ಕ್ರಬ್

ಕಾಂತಿಯುತ ಹಾಗೂ ಕೋಮಲ ತ್ವಚೆಯನ್ನು ಪಡೆಯಬೇಕೆಂದರೆ, ಚರ್ಮದ ಆರೈಕೆಯನ್ನೂ ಸರಿಯಾದ ರೀತಿಯಲ್ಲಿ ಮಾಡಬೇಕಾಗುತ್ತದೆ. ಸ್ಕ್ರಬ್ಬಿಂಗ್ ತ್ವಚೆಯ ಆರೈಕೆಯ ಒಂದು ಹಂತವಾಗಿದ್ದು, ಇದು ದೇಹದಿಂದ ಸತ್ತಜೀವಕೋಶಗಳನ್ನು ಹೊರಹಾಕುವ ಮೂಲಕ ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಕ್ರಬ್ ದುಬಾರಿ ಹಾಗೂ ರಾಸಾಯನಿಕಯುಕ್ತವಾಗಿದೆ ಎಂದು ನೀವು ಭಾವಿಸಿದರೆ, ಮನೆಯಲ್ಲಿಯೇ ಸುಲಭವಾಗಿ ಸ್ಕ್ರಬ್ ತಯಾರಿಸಬಹುದು.

Coffee Body Scrub: ಕಾಂತಿಯುತ ತ್ವಚೆಗಾಗಿ ಮನೆಯಲ್ಲೇ ತಯಾರಿಸಿ ಕಾಫಿ ಬಾಡಿ ಸ್ಕ್ರಬ್
Coffee Body ScrubImage Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Sep 08, 2023 | 2:54 PM

ಒತ್ತಡದ  ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಬಿಟ್ಟಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಮುಖದ ಆರೈಕೆಯ ಬಗ್ಗೆ ಕಾಳಜಿ ವಹಿಸುವಷ್ಟು, ಸಂಪೂರ್ಣದ ದೇಹದ ಆರೈಕೆಯ ಬಗ್ಗೆ ಗಮನ ಕೊಡುವುದಿಲ್ಲ. ಕಾಂತಿಯುತವಾದ ಮುಖವನ್ನು ಪಡೆಯಲು ಜನರು ಅನೇಕ ರೀತಿಯ ಫೇಸ್ ಪ್ಯಾಕ್ ಮತ್ತು ಸ್ಕ್ರಬ್ ಗಳನ್ನು ಬಳಸುತ್ತಾರೆ.  ಸಂಪೂರ್ಣ ತ್ವಚೆಯ ಆರೈಕೆಯನ್ನು ಮಾಡುವಲ್ಲಿ ಗಮನ ನೀಡದೇ, ಬರೀ ಸೋಪ್ ಅಥವಾ ಬಾಡಿ ವಾಶ್ ನಿಂದ ದೇಹವನ್ನು ಸ್ವಚ್ಛಗೊಳಿಸುತ್ತಾರೆ.  ಆದರೆ ನಿಮಗೆ ಗೊತ್ತಾ?, ತ್ವಚೆಯ ಆರೈಕೆಯಲ್ಲಿ ಬಾಡಿ ವಾಶ್ ಮಾತ್ರವಲ್ಲ, ಬಾಡಿ ಸ್ಕ್ರಬ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಸ್ಕ್ರಬ್ಬಿಂಗ್ ತ್ವಚೆಯ ಆರೈಕೆಯ ಒಂದು ಹಂತವಾಗಿದ್ದು, ಇದು ದೇಹವನ್ನು ಸ್ವಚ್ಛವಾಗಿರಿಸುವುದರೊಂದಿಗೆ, ಸತ್ತ ಜೀವಕೋಶಗಳನ್ನು ಹೊರಹಾಕುವ ಮೂಲಕ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ವಾರದಲ್ಲಿ ಒಂದು ಅಥವಾ ಎರಡು ಬಾರಿ ತ್ವಚೆಯನ್ನು ಸ್ಕ್ರಬ್ ಮಾಡುವುದು ಅವಶ್ಯಕ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾಡಿ ಸ್ಕ್ರಬ್ ಗಳು ನಿಮಗೆ ದುಬಾರಿ ಎನಿಸಿದರೆ, ನೀವು ಅದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಕಾಫಿ ಸ್ಕ್ರಬ್:

ಆಯಾಸ ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಕಾಫಿ ಪರಿಣಾಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ತ್ವರಿತ ಶಕ್ತಿಯನ್ನು ಪಡೆಯಲು ಜನರು ಕಾಫಿಯನ್ನು ಕುಡಿಯುತ್ತಾರೆ. ಮಾತ್ರವಲ್ಲದೆ ಕಾಫಿ ಚರ್ಮಕ್ಕೂ ತುಂಬಾ ಪ್ರಯೋಜಕಾರಿಯಾಗಿದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕಾಫಿ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ. ಅಲ್ಲದೆ ಇದು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದ್ದು, ಇದು ತ್ವಚೆಯ ಸುಕ್ಕುಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಬಾಡಿ ಸ್ಕ್ರಬ್ ಮಾಡಲು ಬೇಕಾಗುವ ಸಾಮಾಗ್ರಿಗಳು:

  • 1 ಕಪ್ ಸಕ್ಕರೆ
  • 1 ಕಪ್ ಕಾಫಿ ಪುಡಿ
  • 1 ಚಮಚ ತೆಂಗಿನೆಣ್ಣೆ
  • 1 ಚಮಚ ಬಾಡಿ ವಾಶ್
  • 1 ಚಮಚ ಜೇನುತುಪ್ಪ

ಈ ಎಲ್ಲಾ ವಸ್ತುಗಳನ್ನು ಒಂದು ಗಾಜಿನ ಬೌಲ್ ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಬಾಡಿ ಸ್ಕ್ರಬ್ ನಿಂದ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಿದರೆ ತ್ವಚೆಯು ಕಾಂತಿಯುತವಾಗಿ ಕಾಣಿಸಲು ಪ್ರಾರಂಭಿಸುತ್ತದೆ.

ತ್ವಚೆಗೆ ಸ್ಕ್ರಬ್ ಅನ್ವಯಿಸುವುದಿಂದ ದೊರೆಯುವ ಪ್ರಯೋಜನಗಳು:

  • ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಮತ್ತು ಇದರಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ.
  • ಸ್ಕ್ರಬ್ ಮಾಡುವುದರಿಂದ ದೇಹದಲ್ಲಿನ ಸತ್ತ ಚರ್ಮವನ್ನು ಸುಲಭವಾಗಿ ತೆಗೆದುಹಾಕಬಹುದು. ಇದರಿಂದಾಗಿ ಚರ್ಮವು ನೈಸರ್ಗಿಕ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.
  • ಬಿಸಿಲಿನಿಂದ ಉಂಟಾಗುವ ಕೈಕಾಲು ಹಾಗೂ ದೇಹದ ಮೇಲಿನ ಟ್ಯಾನಿಂಗ್ ಹೋಗಲಾಡಿಸಲು ಸಹಕಾರಿಯಾಗಿದೆ.
  • ತ್ವಚೆಯಲ್ಲಿ ಉಂಟಾಗುವ ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
  • ಸ್ಕ್ರಬ್ ಮಾಡುವುದರಿಂದ ರಕ್ತ ಪರಿಚಲನೆಯು ಉತ್ತಮವಾಗುತ್ತದೆ. ಇದರಿಂದಾಗಿ ಚರ್ಮವು ಬಿಗಿಯಾಗುತ್ತವೆ ಮತ್ತು ತ್ವಚೆಯಲ್ಲಿಅಕಾಲಿಕ ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.
  • ತ್ವಚೆಯನ್ನು ಮೃದುಗೊಳಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್