ದುಬಾರಿ ಪ್ರೋಟೀನ್ ಪೌಡರ್ ಬದಲು ಮನೆಯಲ್ಲೇ ಇವುಗಳನ್ನು ಬಳಸಿ

|

Updated on: Oct 25, 2023 | 4:53 PM

ನಿಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ ಪಡೆಯಲು, ನೀವು ದುಬಾರಿ ಪ್ರೋಟೀನ್ ಪೌಡರ್ ಬಳಸಬೇಕಾಗಿಲ್ಲ; ಅದರ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಪಡೆಯಬಹುದು. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ದುಬಾರಿ ಪ್ರೋಟೀನ್ ಪೌಡರ್ ಬದಲು ಮನೆಯಲ್ಲೇ ಇವುಗಳನ್ನು ಬಳಸಿ
ಪ್ರೋಟೀನ್ ಹೆಚ್ಚಾಗಿರುವ ಆಹಾರ
Image Credit source: iStock
Follow us on

ಮನುಷ್ಯನ ದೇಹದ ಪ್ರತಿಯೊಂದು ಜೀವಕೋಶದಲ್ಲಿಯೂ ಪ್ರೋಟೀನ್ ಇದೆ. ಪ್ರೋಟೀನ್​ಗಳು ಪೆಪ್ಟೈಡ್ ಬಂಧಗಳಿಂದ ಜೋಡಿಸಲಾದ ಅಮೈನೋ ಆ್ಯಸಿಡ್​ನ ಅವಶೇಷಗಳಿಂದ ಮಾಡಲ್ಪಟ್ಟಿದೆ. ನಿಮ್ಮ ದೇಹವು ಜೀವಕೋಶಗಳನ್ನು ಸರಿಪಡಿಸಲು ಮತ್ತು ಹೊಸ ಕೋಶಗಳನ್ನು ರೂಪಿಸಲು ನಿಮ್ಮ ಆಹಾರದಲ್ಲಿರುವ ಪ್ರೋಟೀನ್ ಸಹಾಯ ಮಾಡುತ್ತದೆ. ಮಕ್ಕಳು, ಹದಿಹರೆಯದವರು ಮತ್ತು ಗರ್ಭಿಣಿ ಮಹಿಳೆಯರಿಗೆ ಪ್ರೋಟೀನ್ ಅಗತ್ಯ ಹೆಚ್ಚಾಗಿರುತ್ತದೆ.

ಸ್ನಾಯುಗಳು, ಮೂಳೆಗಳು ಮತ್ತು ನಿಮ್ಮ ದೇಹದ ಉಳಿದ ಭಾಗಗಳಿಗೆ ಪ್ರೋಟೀನ್ ಮುಖ್ಯವಾಗಿದೆ. ಆದರೆ, ಜನರು ಸಾಮಾನ್ಯವಾಗಿ ಸ್ನಾಯುಗಳನ್ನು ಗಟ್ಟಿಗೊಳಿಸಲು ಮತ್ತು ದೇಹವನ್ನು ಸದೃಢಗೊಳಿಸಲು ಪ್ರೋಟೀನ್ ಪೌಡರ್ ಬಳಸುತ್ತಾರೆ. ಈ ಪ್ರೋಟೀನ್ ಪೌಡರ್ ಬಹಳ ದುಬಾರಿಯಾದುದು. ಆದರೆ ನಿಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ ಪಡೆಯಲು, ನೀವು ದುಬಾರಿ ಪ್ರೋಟೀನ್ ಪೌಡರ್ ಬಳಸಬೇಕಾಗಿಲ್ಲ; ಅದರ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಪಡೆಯಬಹುದು. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Bone Health: ಸಾಫ್ಟ್​ ಡ್ರಿಂಕ್ ಸೇವನೆಯಿಂದ ಮೂಳೆಗಳ ಆರೋಗ್ಯಕ್ಕೆ ಅಪಾಯ

ಶೇಂಗಾ:

ಶೇಂಗಾದಲ್ಲಿ ಬೇರೆ ಎಲ್ಲ ಕಾಯಿಗಳಿಗಿಂತ ಹೆಚ್ಚು ಪ್ರೋಟೀನ್ ಇದೆ. ಶೇಂಗಾಗಳು ಎಲ್ಲಾ 20 ಅಮೈನೋ ಆಮ್ಲಗಳನ್ನು ವಿವಿಧ ಪ್ರಮಾಣದಲ್ಲಿ ಹೊಂದಿರುತ್ತವೆ. ಇದಲ್ಲದೆ, ಇದು ಅರ್ಜಿನೈನ್ ಎಂಬ ಪ್ರೋಟೀನ್‌ನ ಅತಿದೊಡ್ಡ ಮೂಲವಾಗಿದೆ.

ನ್ಯಾಚುರಲ್ ಪ್ರೋಟೀನ್ ಚೀಸ್ (ಪನೀರ್):

ಪನೀರ್ ಅಥವಾ ಕಾಟೇಜ್ ಚೀಸ್​ನಿಂದ ನಿಮ್ಮ ದೇಹಕ್ಕೆ ಬೇಕಾದಷ್ಟು ಪ್ರೋಟೀನ್ ಅನ್ನು ಧಾರಾಳವಾಗಿ ಪಡೆಯಬಹುದು. ಇದು ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಪ್ರಾಣಿ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ.

ಹೆಸರು ಕಾಳು:

ಹೆಸರುಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಶ್ವದ ಅತ್ಯುತ್ತಮ ಸಸ್ಯ ಆಧಾರಿತ ಪ್ರೋಟೀನ್ ಮೂಲಗಳಲ್ಲಿ ಹೆಸರುಕಾಳು ಕೂಡ ಒಂದಾಗಿದೆ. ಇದರಲ್ಲಿ ಫೆನೈಲಾಲನೈನ್, ಲ್ಯುಸಿನ್, ಐಸೊಲ್ಯೂಸಿನ್, ವ್ಯಾಲೈನ್, ಲೈಸಿನ್ ಮತ್ತು ಅರ್ಜಿನೈನ್ ನಂತಹ ಅಗತ್ಯವಾದ ಅಮೈನೋ ಆಮ್ಲಗಳಿವೆ.

ಇದನ್ನೂ ಓದಿ: ಮೂಳೆಗಳು ಗಟ್ಟಿಯಾಗಿರಲು ನಿಮ್ಮ ಡಯೆಟ್​ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಲು ಮರೆಯದಿರಿ

ಅಮರಂಥ್ ಪಫ್ಸ್:

ಅಮರಂಥ್ ಪಫ್ಸ್ ಪ್ರೋಟೀನ್ ಮತ್ತು ನಿಮ್ಮ ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲಗಳ ಸಮೃದ್ಧ ಮೂಲವಾಗಿದೆ.

ಚನ್ನಾ:

ಚನ್ನಾ ಹೇರಳವಾದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಸಸ್ಯಾಹಾರಿ ಆಹಾರದಲ್ಲಿ ಮಾಂಸದ ಕೊರತೆಯನ್ನು ಸರಿದೂಗಿಸುತ್ತದೆ. ಹೀಗಾಗಿ, ನಿಮ್ಮ ಆಹಾರದಲ್ಲಿ ಚನ್ನಾವನ್ನು ನಿಮಗೆ ಬೇಕಾದ ರೂಪದಲ್ಲಿ ಬಳಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ