ಸಾಮಾನ್ಯವಾಗಿ ಬಿಸಿಲಿನ ತೀವ್ರತೆ ಮಧ್ಯಾಹ್ನ 11:30 ಇಂದ ಸಾಯಂಕಾಲ 4ರವರೆಗೆ ಹೆಚ್ಚಿರುತ್ತದೆ. ಆದಷ್ಟು ಈ ವೇಳೆಯನ್ನು ಬಿಟ್ಟು ಉಳಿದ ಸಮಯದಲ್ಲಿ ಹೊರಾಂಗಣದ ತಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಆದರೂ ಕೂಡ ಬಿಸಿಲಿನಲ್ಲಿ ಹೋಗಬೇಕಾದ ಸಂದರ್ಭ ಬಂದರೆ ಶುದ್ದ ಹತ್ತಿಬಟ್ಟೆಯ ಟೋಪಿಯನ್ನು ಧರಿಸುವುದು ಉತ್ತಮ. ಟೋಪಿಯ ಬಣ್ಣಗಳ ಕಡೆಗೆ ಗಮನ ಹರಿಸುವ ಅವಶ್ಯಕತೆ ಇರುತ್ತದೆ. ಗಾಢವಾದ ಅಚ್ಚು ಬಣ್ಣದ ಟೋಪಿಕಿಂತ ಬಿಳಿ ಬಣ್ಣದ ಟೋಪಿ ಹೆಚ್ಚು ಸುಖಕರ. ಈ ಪರಿಸ್ಥಿತಿಯಲ್ಲಿ ಅವಶ್ಯವಾಗಿ ನೀರಿನ ಅಥವಾ ದ್ರವಪದಾರ್ಥಗಳ ಸ್ವೀಕಾರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸತ್ತಕದ್ದು. ಸಹಜದ ದಿವಸಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರನ್ನು ಕುಡಿಯಬೇಕು. ಬಿಸಿಲಿಗೆ ಹೋಗುವ ಮೊದಲು ನೀರಿಗೆ ಸಕ್ಕರೆ, ಉಪ್ಪನ್ನು ಸೇರಿಸಿ ಕುಡಿದು ಹೊರಗೆ ಹೋಗುವ ರೂಢಿ ಮಾಡುವುದು ಒಳಿತು. ಒಂದು ವೇಳೆ ಖಚಿತ ಪ್ರಮಾಣವನ್ನು ಉಪಯೋಗಿಸುತ್ತೀರಾ ಆದರೆ 1 ಲೀಟರ್ ನೀರಿಗೆ 6 ಚಮಚ ಸಕ್ಕರೆ ಒಂದು ಚಮಚೆಯಷ್ಟು ಉಪ್ಪು ಸೇರಿಸಿ ಕುಡಿಯಬಹುದು.
ಇದರ ನಂತರದ ಸುಲಭದ ಉಪಾಯ ಅಂದರೆ ಲಾವಂಚ (ಮಡಿವಾಳ ಬೇರು), ಹಿಂದಿಯಲ್ಲಿ ಖಸ್. ಇದು ಹುಲ್ಲಿನಂತಹ ಒಂದು ಜಾತಿಯ ವನಸ್ಪತಿ ಇದರ ಬೇರನ್ನು ಔಷಧಿಯಾಗಿ ಉಪಯೋಗಿಸುತ್ತಾರೆ ಈ ಬೇರನ್ನು ಸ್ವಚ್ಛವಾಗಿ ತೊಳೆದು ಕುಡಿಯುವ ನೀರಿನ ಡ್ರಂನಲ್ಲಿ ಹಾಕಿಡಬೇಕು. ಒಮ್ಮೆ ಬಳಸಿದ ಈ ಬೇರು ಮೂರರಿಂದ ನಾಲ್ಕು ದಿನಗಳವರೆಗೆ ಪುನಹ ಬಳಸಬಹುದು. ತೂಕದಲ್ಲಿ ಇದು ಅತ್ಯಂತ ಹಗುರವಾಗಿರುವುದರಿಂದ ಸಾಮಾನ್ಯ ಒಂದು ಅಡಿಕೆಯ ಗಾತ್ರದ ದಷ್ಟು ಬೇರನ್ನು ಚೆನ್ನಾಗಿ ತೊಳೆದು ಕಟ್ಟಿ ಕುಡಿಯುವ ನೀರಿನ ಸಂಗ್ರಹದಲ್ಲಿ ಹಾಕಿಡಬೇಕು. ಹೀಗೆ ಈ ವನಸ್ಪತಿ ಹಾಕಿದಂತಹ ನೀರು ಬಿಸಿಲಿನ ಧಗೆಯಲ್ಲಿ ಸಮಾಧಾನವನ್ನು ಒದಗಿಸುತ್ತದೆ. ಬೇರನ್ನು ನೀರಿನಲ್ಲಿ ಹಾಕುವ ಮೊದಲು ಸ್ವಚ್ಛ ,ಮಣ್ಣು ರಹಿತವಾಗಿ ಶುಚಿಗೊಳಿಸಬೇಕು.
ಒಂದು ಲೀಟರ್ ನೀರಿಗೆ 20 ಗ್ರಾಂನಷ್ಟು ಹವೀಜ(ಕೊತ್ತಂಬರಿ ಬೀಜ,ಧನಿಯಾ) ಪುಡಿಯನ್ನು ಹಾಕಿ 15ರಿಂದ 20 ನಿಮಿಷಗಳವರೆಗೆ ಕುದಿಸಿ, ಅದಕ್ಕೆ 6 ಚಮಚ ಸಕ್ಕರೆ 2 ಚಮಚೆಯಷ್ಟು ಉಪ್ಪನ್ನು ಹಾಕಿ ಇದನ್ನ ಆಗಾಗ ಸೇವಿಸಬಹುದು.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವ ಅಭ್ಯಾಸ ನಿಮಗಿದೆಯೇ?
ಈ ಉಪಾಯವನ್ನು ಮುಖ್ಯವಾಗಿ ಬೇರೆಯ ಊರುಗಳಿಗೆ ಪ್ರವಾಸ ಹೋಗುವಾಗ ಬಳಸಲು ಉಪಯೋಗ ಏಕೆಂದರೆ 3-4 ಬಾಟಲಿ ನೀರು ತೆಗೆದುಕೊಂಡು ಹೋಗುವುದು ತಪ್ಪಿ 2 ಲೀಟರ್ ನಿಂದ ಅವಶ್ಯಕತೆಯನ್ನು ಪೂರೈಸುವಂತೆ ಮಾಡುತ್ತದೆ. ಇದು ಮಾಡುವ ವಿಧಾನವನ್ನು ಯೂಟ್ಯೂಬ್ನಲ್ಲಿ ಡಾ ರವಿ ಪಟವರ್ಧನ್ ಓಆರೆಸ್ ಎಂದು ಹುಡುಕಿದಾಗ ಮಾಹಿತಿ ಲಭ್ಯವಿದೆ. ರಕ್ತದೊತ್ತಡವಿದ್ದವರು ,ಮಧುಮೇಹದ ರೋಗಿಗಳು ಅದರ ತಕ್ಕಹಾಗೆ ಸೂಕ್ತ ಜಾಗ್ರತೆಯನ್ನು ಯೋಚಿಸಿ ಈ ಮೇಲಿನ ಉಪಾಯಗಳನ್ನು ವೈದ್ಯರ ಸಲಹೆ ಮೇರೆಗೆ ಉಪಯೋಗಿಸಿ.
– ಡಾ ರವಿಕಿರಣ ಪಟವರ್ಧನ ಶಿರಸಿ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:33 pm, Thu, 9 March 23