ನಿಮ್ಮ ಜೀವನದಲ್ಲಿ ನಿಮಗೆ ತುಂಬಾ ಹತ್ತಿರವಾಗಿರುವ ಜನರನ್ನು ಪ್ರಶಂಸಿಸುವ ಮೂಲಕ, ಧನ್ಯವಾದಗಳನ್ನು ಹೇಳುವ ಮೂಲಕ ನೀವು ನಿಮ್ಮ ಸಂಬಂಧಗಳನ್ನು ಬಲಪಡಿಸಿಕೊಳ್ಳಬಹುದು. ಮತ್ತು ಇದು ನಿಮ್ಮಿಬ್ಬರ ಸಂಬಂಧದಲ್ಲಿ ಸಕರಾತ್ಮಕತೆಯ ವಾತಾವರಣವನ್ನು ಸೃಷ್ಟಿಸುತ್ತದೆ. ನಿಮ್ಮ ಜೀವನವನ್ನು ಸುಂದರವನ್ನಾಗಿಸಿದಕ್ಕಾಗಿ, ನೀವು ನಿಮ್ಮ ಜೀವನದಲ್ಲಿ ಸಕರಾತ್ಮಕವಾಗಿರಲು ಕೊಡುಗೆ ನೀಡಿದ ವ್ಯಕ್ತಿಗಳಿಗೆ ಧನ್ಯವಾದಗಳನ್ನು ಹೇಳುವ ಮೂಲಕ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬಹುದು.
ಅದು ನಿಮ್ಮ ಸ್ನೇಹಿತರಾಗಿರಬಹುದು, ಸಂಗಾತಿಗಳಾಗಿರಬಹುದು, ಕುಟುಂಬದವರಾಗಿರಬಹುದು. ನಿಮ್ಮ ಜೀವನ ಸುಂದರವಾಗಿ ರೂಪುಗೊಳ್ಳಲು ಇವರೆಲ್ಲರ ಕೊಡುಗೆ ಇದ್ದೇ ಇರುತ್ತದೆ. ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಹೆಗಲಿಗೆ ಹೆಗಲಾಗಿ ಇವರು ನಿಂತಿರಬಹುದು. ಅವರ ಸಹಾಯಕ್ಕೆ ಮೆಚ್ಚುಗೆಯನ್ನು ಸೂಚಿಸುವ ಮೂಲಕ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಳ್ಳಬಹುದು. ಜನರನ್ನು ಪ್ರಶಂಸಿಸಲು ಮತ್ತು ಧನ್ಯವಾದ ಹೇಳಲು ಕೆಲವೊಂದು ಮಾರ್ಗಗಳಿಗೆ.
ಕೃತಜ್ಞತೆಯನ್ನು ಮೌಖಿಕವಾಗಿ ವ್ಯಕ್ತಪಡಿಸಿ: ಧನ್ಯವಾದಗಳು ಎಂದು ಹೇಳಿ, ನಂತರ ನೀವು ಅವರನ್ನು ಏಕೆ ಮೆಚ್ಚುತ್ತೀರಿ ಎಂಬುದನ್ನು ಅವರಿಗೆ ತಿಳಿಸಿ.
ಧನ್ಯವಾದ ತಿಳಿಸುವ ಪತ್ರ ಬರೆಯಿರಿ: ಕೈಬರಹದ ಪತ್ರವು ಕೃತಜ್ಞತೆಯನ್ನು ವ್ಯಕ್ತಪಡಿಸಲು ಚಿಂತನಶೀಲ ಮತ್ತು ವಿಶಿಷ್ಟ ಮಾರ್ಗವಾಗಿದೆ.
ಒಂದು ಸಣ್ಣ ಉಡುಗೊರೆಯನ್ನು ನೀಡಿ: ಉಡುಗೊರೆಗಳನ್ನು ನೀಡುವ ಮೂಲಕ ಧನ್ಯವಾದ ತಿಳಿಸಬಹುದು. ಇಲ್ಲವಾದರೆ ಕಾಫಿಗೆ ಕರೆದುಕೊಂಡು ಹೋಗುವ ಮೂಲಕವೋ ಅಥವಾ ಡಿನ್ನರ್‌ಗೆ ಕರೆದುಕೊಂಡು ಹೋಗುವ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು.
ಸಹಾಯ ಮಾಡಿ: ನಿಮ್ಮ ಕಷ್ಟ ಕಾಲದಲ್ಲಿ ಸ್ಪಂದಿಸಿದ ಅವರು ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವರು ನಿಮ್ಮ ಬಳಿ ಕೇಳಿಕೊಳ್ಳದಿದ್ದರೂ ಅವರಿಗೆ ಅಗತ್ಯವಿರುವ ಸಹಾಯವನ್ನು ಮಾಡಿ.
ಅವರ ಕೊಡುಗೆಗಳನ್ನು ಸಾರ್ವಜನಿಕವಾಗಿ ಗುರುತಿಸಿ: ಇತರರ ಮುಂದೆ ಅವರನ್ನು ಹೊಗಳಿ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾಧನೆಯನ್ನು ಹಂಚಿಕೊಳ್ಳಿ.
ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯಿರಿ: ಯಾರೊಂದಿಗಾದರೂ ಗುಣಮಟ್ಟದ ಸಮಯವನ್ನು ಕಳೆಯುವುದು ಮತ್ತು ಅವರಿಗೆ ಖುಷಿ ನೀಡುವ ಕೆಲಸವನ್ನು ಮಾಡುವುದು, ಅದು ಅವರಿಗೆ ಗೌರವ ನೀಡಿದಂತೆ ಹಾಗೂ ಅವರನ್ನು ಪ್ರಶಂಸಿಸುತ್ತೀರಿ ಎಂಬುದನ್ನು ತೋರಿಸುತ್ತದೆ.
ಅವರನ್ನು ಅಚ್ಚರಿಗೊಳಿಸಿ: ಅವರಿಗೆ ಸಪ್ರೆಸ್ ನೀಡಿ ಅಥವಾ ಅವರ ನೆಚ್ಚಿನ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಅಥವಾ ಟ್ರಿಪ್‌ಗಳಿಗೆ ಕರೆದುಕೊಂಡು ಹೋಗುವಂತಹ ಅನಿರೀಕ್ಷಿತ ಸಂಗತಿಗಳೊಂದಿಗೆ ಅವರನ್ನು ಆಶ್ಚರ್ಯಗೊಳಿಸಿ.
Published On - 2:47 pm, Thu, 9 March 23