AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips: ನಿಂಬೆ ಹಣ್ಣು ಬೇಗ ಹಾಳಾಗದಿರಲು ಈ ಟಿಪ್ಸ್​​ ಫಾಲೋ ಮಾಡಿ

ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯ ಗುಣವನ್ನು ಹೊಂದಿರುವುದರಿಂದ ಸರಿಯಾಗಿ ಮತ್ತು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ ಮತ್ತು ಬೇಗ ಒಣಗಿಹೋಗುತ್ತದೆ.

Kitchen Tips: ನಿಂಬೆ ಹಣ್ಣು ಬೇಗ ಹಾಳಾಗದಿರಲು ಈ ಟಿಪ್ಸ್​​ ಫಾಲೋ ಮಾಡಿ
ನಿಂಬೆ ಹಣ್ಣು ಸಂಗ್ರಹಿಸಿಡುವ ಸರಿಯಾದ ಕ್ರಮImage Credit source: iStock
ಅಕ್ಷತಾ ವರ್ಕಾಡಿ
|

Updated on:Mar 09, 2023 | 7:02 PM

Share

ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯ ಗುಣವನ್ನು ಹೊಂದಿರುವುದರಿಂದ ಸರಿಯಾಗಿ ಮತ್ತು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ ಮತ್ತು ಬೇಗ ಒಣಗಿಹೋಗುತ್ತದೆ. ಸಾಮಾನ್ಯವಾಗಿ, ನೀವು ಅಡುಗೆಮನೆಯಲ್ಲಿ ಮಧ್ಯಮ ಕೋಣೆಯ ಉಷ್ಣಾಂಶದಲ್ಲಿ ನಿಂಬೆಹಣ್ಣುಗಳನ್ನು ಸಂಗ್ರಹಿಸುತ್ತೀರಿ. ಆದರೆ ಅನೇಕರಿಗೆ ತಿಳಿದಿರದ ವಿಷಯವೆಂದರೆ ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಕಾಲ ನಿಂಬೆಹಣ್ಣುಗಳನ್ನು ಇಡುವುದರಿಂದ ಅದು ಗಟ್ಟಿಯಾಗುತ್ತವೆ. ಇದನ್ನು ತಪ್ಪಿಸಲು, ನೀವು ಮನೆಯಲ್ಲಿಯೇ ಅನುಸರಿಸಬಹುದಾದ ಕೆಲವು ಸರಳ ಸಲಹೆಗಳು ಇಲ್ಲಿವೆ.

ಗಾಜಿನ ಜಾರ್:

ನಿಂಬೆಹಣ್ಣನ್ನು ನೀರು ತುಂಬಿಸಿಟ್ಟ ಗಾಜಿನ ಜಾರ್​​ ಒಳಗಡೆ ಸಂಗ್ರಹಿಸಿಡಿ. ಇದು ದೀರ್ಘಕಾಲದ ವರೆಗೆ ತಾಜಾವಾಗಿರಿಸುತ್ತದೆ. ಎಲ್ಲಾ ನಿಂಬೆಹಣ್ಣುಗಳನ್ನು ನೀರಿನಿಂದ ತುಂಬಿದ ಜಾರ್​ನಲ್ಲಿ ಇಟ್ಟು, ರೆಫ್ರಿಜರೇಟರ್ನಲ್ಲಿ ಇರಿಸಿ. ಇದು ತುಂಬಾ ದಿನಗಳವರೆಗೆ ತಾಜಾ ಮತ್ತು ರಸಭರಿತವಾಗಿರಿಸುತ್ತದೆ.

ಈ ಹಣ್ಣಿನೊಂದಿಗೆ ಇಡಬೇಡಿ:

ಸೇಬು ಮತ್ತು ಬಾಳೆಹಣ್ಣಿನೊಂದಿಗೆ ಎಂದಿಗೂ ನಿಂಬೆಯನ್ನು ಸಂಗ್ರಹಿಸಿ ಇಡಬೇಡಿ. ಸೇಬು ಹಾಗೂ ಬಾಳೆಹಣ್ಣಿನಲ್ಲಿ ಎಥಿಲೀನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವುದರಿಂದ ಇದು ಆಮ್ಲೀಯ ಹಣ್ಣುಗಳು ಬೇಗ ಹಾಳಾಗಲು ಕಾರಣವಾಗುತ್ತದೆ.

ಇದನ್ನೂಓದಿ: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವ ಅಭ್ಯಾಸ ನಿಮಗಿದೆಯೇ?

ಗಾಳಿಯಾಡದ ಚೀಲ ಬಳಸಿ:

ನಿಂಬೆಹಣ್ಣುಗಳನ್ನು ಹಾಳಾಗದಂತೆ ಸಂಗ್ರಹಿಸಿಡಲು ಸೀಲ್ ಮಾಡಿದ ಅಥವಾ ಗಾಳಿಯಾಡದ ಚೀಲದೊಳಗೆ ಇರಿಸಿ. ಇದರಿಂದಾಗಿ ನಿಂಬೆಹಣ್ಣುಗಳು ರಸ ಮತ್ತು ಪರಿಮಳವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪ್ಲಾಸ್ಟಿಕ್ ಕಂಟೈನರ್ ಬಳಸಿ:

ನಿಂಬೆಹಣ್ಣನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿ ಗಾಳಿಯಾಡದ ಕಂಟೇನರ್‌ನಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ. ಇದು ದೀರ್ಘಕಾಲದ ವರೆಗೆ ನಿಂಬೆಹಣ್ಣನ್ನು ತಾಜಾವಾಗಿರಿಸುತ್ತದೆ.

ಅಲ್ಯೂಮಿನಿಯಂ ಫಾಯಿಲ್:

ನಿಂಬೆಹಣ್ಣುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಸಂಗ್ರಹಿಸಿಡುವುದರಿಂದ ಅವುಗಳ ತಾಜಾತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಯೂಮಿನಿಯಂ ಫಾಯಿಲ್ ಬಳಸಿ ಪ್ರತಿಯೊಂದು ನಿಂಬೆಯನ್ನು ಪ್ರತ್ಯೇಕವಾಗಿ ಸುತ್ತಿಕೊಳ್ಳುವುದು ಉತ್ತಮ. ಇದು ನಿಂಬೆಹಣ್ಣಿನ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಒಣಗುವುದನ್ನು ಮತ್ತು ಗಟ್ಟಿಯಾಗುವುದನ್ನು ತಡೆಯುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 6:59 pm, Thu, 9 March 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್