Travel: ಸಫಾರಿ ಮಾಡಲು ಈ ರಾಷ್ಟ್ರೀಯ ಉದ್ಯಾನವನಗಳು ಉತ್ತಮ

ನೀವು ವನ್ಯಜೀವಿ ಸಫಾರಿ ಅಥವಾ ರಮಣೀಯ ಟ್ರೆಕಿಂಗ್‌ಗಳಿಗಾಗಿ ಅತ್ಯುತ್ತಮ ಸ್ಥಳವನ್ನು ಹುಡುಕುತ್ತಿದ್ದರೆ, ನಾವಿಂದು ಪ್ರಪಂಚದಾದ್ಯಂತ ಇರುವ ಈ ಕೆಲವು ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ತಿಳಿಸಿಕೊಡುತ್ತೇವೆ.

Travel: ಸಫಾರಿ ಮಾಡಲು ಈ ರಾಷ್ಟ್ರೀಯ ಉದ್ಯಾನವನಗಳು ಉತ್ತಮ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 10, 2023 | 1:10 PM

ನೀವು ವನ್ಯಜೀವಿ ಸಫಾರಿ ಅಥವಾ ರಮಣೀಯ ಟ್ರೆಕಿಂಗ್‌ಗಳಿಗಾಗಿ ಅತ್ಯುತ್ತಮ ಸ್ಥಳವನ್ನು ಹುಡುಕುತ್ತಿದ್ದರೆ, ನಾವಿಂದು ಪ್ರಪಂಚದಾದ್ಯಂತ ಇರುವ ಈ ಕೆಲವು ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ತಿಳಿಸಿಕೊಡುತ್ತೇವೆ. ಪ್ರಕೃತಿಯ ಸೌಂದರ್ಯವನ್ನು ಅನ್ವೇಷಿಸುತ್ತಾ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವಂತಹದ್ದು ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಪ್ರಕೃತಿಯ ಜೊತೆಗೆ ತಮ್ಮ ಸಮಯವನ್ನು ಕಳೆಯಲು ಬಯಸುತ್ತಾರೆ. ಪ್ರಕೃತಿಯ ಜೊತೆ, ವನ್ಯಜೀವಿಗಳನ್ನು ನೋಡುತ್ತಾ ನಿಮ್ಮ ಪ್ರವಾಸದ ಅದ್ಭುತ ಕ್ಷಣಗಳನ್ನು ಕಳೆಯಲು ಪ್ರಪಂಚದಾದ್ಯಂತ ಇರುವ ಬೇರೆ ಬೇರೆ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಬಹುದು. ಯುನೈಟೆಡ್ ಸ್ಟೇಟ್‌ನಿಂದ ಹಿಡಿದು ಆಫ್ರಿಕಾದವರೆಗೆ ನೀವು ಭೇಟಿ ನೀಡಲೇಬೇಕಾದ 10 ರಾಷ್ಟ್ರೀಯ ಉದ್ಯಾನವನಗಳು ಇಲ್ಲಿವೆ. ಯೆಲ್ಲೊ ಸ್ಟೋನ್ ರಾಷ್ಟ್ರೀಯ ಉದ್ಯಾನವನ ಅಮೇರಿಕಾ: ವಿಶ್ವದ ಮೊದಲ ರಾಷ್ಟ್ರೀಯ ಉದ್ಯಾನವನವಾದ ಯೆಲ್ಲೊ ಸ್ಟೋನ್ ರಾಷ್ಟ್ರೀಯ ಉದ್ಯಾನವನವು ಪ್ರಕೃತಿ ಪ್ರಿಯರಿಗೆ ಪ್ರವಾಸ ಕೈಗೊಳ್ಳಲು ಅದ್ಭುತ ತಾಣವಾಗಿದೆ. ಹಚ್ಚ ಹಸಿರಿನ ಮರಗಳಿಂದ ಹಿಡಿದು ವಿವಿಧ ಬಗೆಯ ವನ್ಯಜೀವಿಗಳನ್ನು ಇಲ್ಲಿ ನೀವು ಅನ್ವೇಷಿಸಬಹುದು.

ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನ, ತಾಂಜಾನಿಯಾ: ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನವು ಸಿಂಹಗಳು, ಆನೆಗಳು ಮತ್ತು ಕಾಡಾನೆಗಳು ಸೇರಿದಂತೆ ವಿಶ್ವದ ಅತಿದೊಡ್ಡ ಪ್ರಾಣಿಗಳ ವಲಸೆಗೆ ನೆಲೆಯಾಗಿದೆ. ಇಲ್ಲಿ ನೀವು ಬೆರಗುಗೊಳಿಸುವ ಭೂದೃಶ್ಯಗಳನ್ನು ಕಾಣಬಹುದು ಹಾಗೂ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು ಇದು ಪರಿಪೂರ್ಣ ಸ್ಥಳವಾಗಿದೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನ, ದಕ್ಷಿಣ ಆಫ್ರಿಕಾ: ಕ್ರುಗರ್ ರಾಷ್ಟ್ರೀಯ ಉದ್ಯಾನವನವು ಆಫ್ರಿಕಾದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ಇದು ವಿವಿಧ ರೀತಿಯ ವನ್ಯ ಜೀವಿಗಳಿಗೆ ನೆಲೆಯಾಗಿದೆ. ಇಲ್ಲಿ ಪ್ರವಾಸಿಗರು ಸಫಾರಿಯ ಮೂಲಕ ಉದ್ಯಾನವನವನ್ನು ಅನ್ವೇಷಿಸಬಹುದು ಹಾಗೂ ಪಕ್ಷಿ ವೀಕ್ಷಣೆ ಹಾಗೂ ಗೇಮ್ ಡ್ರೆವ್‌ಗಳಂತಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನ ಅಮೆರಿಕ: ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನವು ಕ್ಯಾಲಿಫೋರ್ನಿಯಾದ ಒಂದು ಅದ್ಭುತವಾದ ಅರಣ್ಯ ಪ್ರದೇಶವಾಗಿದೆ. ಎತ್ತರದ ಗ್ರಾನೈಟ್ ಬಂಡೆಗಳಿಂದ ಹಿಡಿದು ಧುಮ್ಮಿಕ್ಕಿ ಹರಿಯುವ ಜಲಪಾತಗಳ ರಮಣೀಯ ದೃಶ್ಯಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಹಾಗೂ ಈ ಉದ್ಯಾನವನವು ಕಪ್ಪು ಕರಡಿಗಳು, ಹೇಸರಗತ್ತೆ ಸೇರಿದಂತೆ ವಿವಿಧ ವನ್ಯಜೀವಿಗಳ ನೆಲೆಯಾಗಿದೆ.

ಗ್ಲೇಸಿಯರ್ ನ್ಯಾಶನಲ್ ಪಾರ್ಕ್ ಅಮೆರಿಕ: ಗ್ಲೇಸಿಯರ್ ನ್ಯಾಶನಲ್ ಪಾರ್ಕ್ ಮೊಂಟಾನಾದ ರಾಕಿ ಮೌಂಟೇನ್ಸ್ನಲ್ಲಿದೆ. ಪರ್ವತ ಆಡುಗಳು, ನಿಗಾರ್ನ್ ಕುರಿಗಳು ಮತ್ತು ಗ್ರಿಜ್ಲಿ ಕರಡಿ ಸೇರಿದಂತೆ ವಿವಿಧ ಬಗೆಯ ವನ್ಯಜೀವಿಗಳು ಇಲ್ಲಿ ಕಾಣಸಿಗುತ್ತವೆ. ಇದು ಹೈಕಿಂಗ್ ಮಾಡುವವರಿಗೆ ಹಾಗೂ ಕ್ಯಾಂಪ್ ಮಾಡುವವರಿಗೆ ಪ್ರಿಯವಾದ ತಾಣವಾಗಿದೆ.

ಇದನ್ನೂ ಓದಿ: Travel: ಬೆಂಗಳೂರಿನ ಈ ಎರಡು ಸ್ಥಳಕ್ಕೆ ನೀವು ಹೋಗಿರಲು ಸಾಧ್ಯವೇ ಇಲ್ಲ? ಈ ವಿಕೇಂಡ್​ನಲ್ಲಿ ಹೋಗಿ ಬನ್ನಿ

ಗ್ಯಾಲಪಗೋಸ್ ರಾಷ್ಟ್ರೀಯ ಉದ್ಯಾನವನ, ಈಕ್ವೆಡಾರ್: ಗ್ಯಾಲಪಗೋಸ್ ರಾಷ್ಟ್ರೀಯ ಉದ್ಯಾನವನವು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ತಾಣವಾಗಿದೆ. ಈ ಉದ್ಯಾನವನವು ಸಮುದ್ರ ಸಿಂಹಗಳು, ದೈತ್ಯ ಆಮೆಗಳು ಮತ್ತು ನೀಲಿ ಪಾದದ ಬೂಬಿಗಳು ಸೇರಿದಂತೆ ವಿವಿದ ವನ್ಯಜೀವಿಗಳಿಗೆ ನೆಲೆಯಾಗಿದೆ. ಇದು ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್‌ಗೆ ಉತ್ತಮ ಸ್ಥಳವಾಗಿದೆ.

ಟೊರೆಸ್ ಡೆಲ್ ಪೈನ್ ರಾಷ್ಟ್ರೀಯ ಉದ್ಯಾನವನ, ಚಿಲಿ: ಈ ಉದ್ಯಾನವನವು ಗ್ವಾನಾಕೋ, ಪೂಮಾ, ದೈತ್ಯ ರಣಹದ್ದು ಸೇರಿದಂತೆ ವಿವಿಧ ವನ್ಯ ಜೀವಿಗಳ ನೆಲೆಯಾಗಿದೆ. ಹೈಕಿಂಗ್ ಮಾಡಲು ಈ ಸ್ಥಳ ಉತ್ತಮವಾಗಿದೆ. ಹಾಗೂ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ.

ಕೊಮೊಡೊ ರಾಷ್ಟ್ರೀಯ ಉದ್ಯಾನವನ ಇಂಡೋನೇಷ್ಯಾ: ಈ ಉದ್ಯಾನವನವು ಕೊಮೊಡೊ ಡ್ರ್ಯಾಗನ್‌ಗಳ ನೆಲೆಯಾಗಿದೆ. ಜೊತೆಗೆ ಇಲ್ಲಿ ಆಮೆಗಳು, ಡಾಲ್ಫಿನ್‌ಗಳು ಸೇರಿದಂತೆ ವಿವಿಧ ವನ್ಯ ಜೀವಿಗಳನ್ನು ನೋಡಬಹುದು. ಉಲುರು-ಕಟಾ ಟ್ಜುಟಾ ರಾಷ್ಟ್ರೀಯ ಉದ್ಯಾನವನ, ಆಸ್ಟೆಲಿಯಾ: ಈ ಉದ್ಯಾನವನವು ಡಿಂಗೊಗಳು, ಕಾಂಗರೂಗಳು ಮತ್ತು ಎಮುಗಳು ಸೇರಿದಂತೆ ವಿವಿಧ ವನ್ಯಜೀವಿಗಳ ನೆಲೆಯಾಗಿದೆ. ಇದು ಹೈಕಿಂಗ್ ಮಾಡುವವರ ಮತ್ತು ವಾನ್ಯಜೀವಿ ಛಾಯಗ್ರಾಹಹಕರ ನೆಚ್ಚಿನ ತಾಣವಾಗಿದೆ.

‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?