Weight Loss Diet: ಈ ಆರೋಗ್ಯಕ ಅವಲಕ್ಕಿ ಉಪಹಾರದಿಂದ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಬಹುದು? ಇಲ್ಲಿದೆ ಪಾಕ ವಿಧಾನ

ಡಯೆಟಿಷಿಯನ್ ಮನ್‌ಪ್ರೀತ್ ಕಲ್ರಾ ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​​ನಲ್ಲಿ ಆರೋಗ್ಯಕರ ಉಪಹಾರಕ್ಕಾಗಿ ಅವಲಕ್ಕಿ ಪಾಕವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದರ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ಹೇಳಿದ್ದಾರೆ.

Weight Loss Diet: ಈ ಆರೋಗ್ಯಕ ಅವಲಕ್ಕಿ ಉಪಹಾರದಿಂದ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಬಹುದು? ಇಲ್ಲಿದೆ ಪಾಕ ವಿಧಾನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 10, 2023 | 5:33 PM

ನೀವು ತೂಕವನ್ನು ಕಳೆದುಕೊಳ್ಳಲು ಅಥವಾ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ, ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸಬೇಕಾಗುತ್ತದೆ. ಇತ್ತೀಚಿಗೆ ಇನ್ಟಾಗ್ರಾಮ್‌ನಲ್ಲಿ ಪೌಷ್ಟಿಕತಜ್ಞೆ ಮನ್‌ಪ್ರೀತ್ ಕಲ್ರಾ ಅವರು ಹೆಚ್ಚಿನ ಪ್ರೋಟಿನ್ ಹೊಂದಿರುವ ಅವಲಕ್ಕಿ ಪಾಕವಿಧಾನವಾದ ‘ಪವರ್ ಪ್ರೋಟೀನ್ ಪೋಹಾ’ದ ಬಗ್ಗೆ ಹಂಚಿಕೊಂಡಿದ್ದಾರೆ. ಅನೇಕ ಜನರು ಅವಲಕ್ಕಿಯನ್ನು ಸೇವನೆ ಮಾಡುವುದನ್ನು ತಪ್ಪಿಸುತ್ತಾರೆ ಏಕೆಂದರೆ ಅದರ ಕಾರ್ಬೋಹೈಡ್ರೇಟ್ ಅಂಶವು ತೂಕವನ್ನು ಹೆಚ್ಚಿಸುತ್ತದೆ ಎಂಬುದು ಅವರ ಭಾವನೆ ಎಂದು ಮನ್‌ಪ್ರೀತ್ ಕಲ್ರಾ ಹೇಳುತ್ತಾರೆ.

ಪವರ್ ಪ್ರೋಟೀನ್ ಅವಲಕ್ಕಿಯ ಪ್ರಯೋಜನಗಳು: ಪೌಷ್ಟಿಕ ತಜ್ಞರ ಪ್ರಕಾರ ಅವಲಕ್ಕಿಯು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳು, ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ಮತ್ತು ಪ್ರಮುಖ ಖನಿಜಾಂಶಗಳ ಉತ್ತಮ ಮೂಲವಾಗಿದೆ. ಮತ್ತು ಇವುಗಳಿಗೆ ಮೊಳಕೆ ಕಟ್ಟಿದ ಕಾಳುಗಳನ್ನು ಸೇರಿಸುವುದರಿಂದ ಅದು ಧೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಈ ಅವಲಕ್ಕಿ ರೆಸಿಪಿ ನಿಮಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಒಳಗೊಂಡಿರುವುದರಿಂದ ಬೆಳಗ್ಗೆ ಆರೋಗ್ಯಕರ ಉಪಹಾರವನ್ನು ಸೇವಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ಮನ್‌ಪ್ರೀತ್ ಹೇಳುತ್ತಾರೆ.

ಇದನ್ನೂ ಓದಿ: Weight Loss Diets: ತೂಕ ಇಳಿಸಲು ಇಲ್ಲಿವೆ 5 ಉತ್ತಮ ಡಯಟ್ ಪ್ಲಾನ್

ಪವರ್ ಪ್ರೋಟೀನ್ ಅವಲಕ್ಕಿಯನ್ನು ಹೇಗೆ ತಯಾರಿಸುವುದು

ಬೇಕಾಗುವ ಪದಾರ್ಥಗಳು: ಅವಲಕ್ಕಿ 15 ಗ್ರಾಂ, ಓಟ್ಸ್ ಹೊಟ್ಟು 10 ಗ್ರಾಂ, ಬಟಾಣಿ- ಒಂದು ಮುಷ್ಟಿಯಷ್ಟು, ಅಣಬೆ 2 ರಿಂದ ಮೂರು (ಐಚ್ಛಿಕ), ಒಂದು ಸಣ್ಣ ಈರುಳ್ಳಿ, ಒಂದು ಸಣ್ಣ ಕ್ಯಾಪ್ಸಿಕಮ್, 2- ಕ್ಯಾರೆಟ್, ಸಾಸಿವೆ- 1/2 ಅರ್ಧ ಟೀ ಸ್ಪೂನ್, ಕರಿಬೇವಿನ ಎಲೆ 4 ರಿಂದ 5, ಹಸಿ ಮೆಣಸಿನಕಾಯಿ-1, ತುಪ್ಪ 1/2 ಅರ್ಧ ಟೀ ಸ್ಪೂನ್, ಮೊಳಕೆ ಕಟ್ಟಿದ ಕಾಳುಗಳು- 2 ಚಮಚ, ಕಡಲೆಕಾಯಿ ಸ್ವಲ್ಪ.

ವಿಧಾನ: ಮೊದಲಿಗೆ ಅವಲಕ್ಕಿ ಮತ್ತು ಓಟ್ಸ್ ಹೊಟ್ಟನ್ನು ಒಂದು ಸಣ್ಣ ಪಾತ್ರೆಯಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ಒಂದು ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಬಟಾಣಿ ಕ್ಯಾರೆಟ್, ಅಣಬೆ ಮತ್ತು ಕ್ಯಾಪ್ಸಿಕಮ್‌ನ್ನು ಸೇರಿಸಿ ಅವುಗಳನ್ನು ಒಟ್ಟಿಗೆ ಬೇಯಿಸಿಕೊಳ್ಳಿ ಬಳಿಕ ಅವಲಕ್ಕಿ ಮತ್ತು ಓಟ್ಸ್ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಶಿನ ಮತ್ತು ಇತರ ಪದಾರ್ಥಗಳನ್ನು ಸೇರಿಸಿ ನಂತರ ಮೊಳಕೆ ಕಾಳುಗಳು ಮತ್ತು ಕಡಲೆಬೀಜನಗಲನ್ನು ಸೇರಿಸಿ 8 ನಿಮಿಷಗಳ ಕಾಲ ಬೇಯಲು ಬಿಡಿ. ಇದು ಬೆಂದ ಬಳಿಕ ಸ್ವಲ್ಪ ನಿಂಬೆ ರಸ ಹಿಂಡಿ ಬಿಸಿಬಿಸಿಯಾಗಿ ಬಡಿಸಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ