Toxic Friendship: ನಿಮ್ಮ ಸ್ನೇಹಿತರಲ್ಲಿ ಈ ವರ್ತನೆಗಳಿದ್ದರೆ ಅವರು ದ್ರೋಹ ಮಾಡುತ್ತಿದ್ದಾರೆ ಎಂದರ್ಥ?
ನಿರಂತರ ಟೀಕೆಗಳಿಂದ ಹಿಡಿದು ನಿಮ್ಮ ನಡವಳಿಕೆಗಳನ್ನು ನಿಯಂತ್ರಿಸುವವರೆಗೆ, ಕೆಲವೊಂದು ಅಂಶಗಳು ಅಪಾಯಕಾರಿ ಸ್ನೇಹವನ್ನು ಗುರುತಿಸಲು ಮತ್ತು ನಿಮ್ಮ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಅಗತ್ಯ ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ.
ಸ್ನೇಹ, ಸ್ನೇಹಿತರು ಎಂದರೆ ನಮ್ಮ ನಗು, ಮತ್ತು ಸಂತೋಷ ಸಮಯದಲ್ಲಿ ಜೊತೆಗಿರುವುದು ಮಾತ್ರವಲ್ಲದೆ ನಮ್ಮ ಕಷ್ಟದ ಸಮಯದಲ್ಲೂ ನಮ್ಮ ಜೊತೆಗಿದ್ದು ನಮ್ಮ ನೋವಿಗೆ ಅವರು ಸ್ಪಂದಿಸುತ್ತಾರೆ. ನೋವು ನಲಿವುಗಳನ್ನು ಒಟ್ಟಾಗಿ ಅನುಭವಿಸುವುದೇ ಸ್ನೇಹ. ಸ್ನೇಹ ನಮಗೆ ಭಾವನಾತ್ಮಕ ಮತ್ತು ಮಾನಸಿಕ ಬೆಂಬಲವನ್ನು ನೀಡುತ್ತದೆ. ಆದರೆ ಇಬ್ಬರ ನಡುವಿನ ಸ್ನೇಹವು ಅಪಾಯಕಾರಿ ತಿರುವನ್ನು ಪಡೆದರೆ ಮಾನಸಿಕ ನೆಮ್ಮದಿಯೇ ಹಾಳಾಗಿಬಿಡುತ್ತದೆ. ಈ ಅಪಾಯಕಾರಿ ಸ್ನೇಹದ ಕೆಲವೊಂದು ಎಚ್ಚರಿಕಾ ಕ್ರಮಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ.
ಸೈಕೋಥೆರಪಿಸ್ಟ್ ಜಿಂಜರ್ ಡೀನ್ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅಪಾಯಕಾರಿ ಸ್ನೇಹವನ್ನು ಸೂಚಿಸುವ ಕೆಲವು ಚಿಹ್ನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮೊಂದಿಗೆ ಸ್ಪರ್ಧಿಸುವುದು ಅವರ ಮನಸ್ಸಿನಲ್ಲಿದ್ದರೂ ಸಹ, ನಿಮ್ಮಿಬ್ಬರ ಮಧ್ಯೆ ಹೋಲಿಕೆಯನ್ನು ಮಾಡುವ ಅವರ ಭಾವನೆಯು ನಿಮ್ಮ ಗೆಳೆತನದಲ್ಲಿ ಅನಾರೋಗ್ಯಕರ ಕ್ರಿಯಾತ್ಮಕತೆಯನ್ನು ಸೃಷ್ಟಿಸುತ್ತದೆ. ಈ ಕಾರಣದಿಂದ ಅವರು ತಮ್ಮನ್ನು ತಾವು ಸಾಬೀತು ಪಡಿಸಲು ಅಥವಾ ನಿಮಗಿಂತ ಎತ್ತರವಾಗಿ ಬೆಳೆಯಲು ನಿಮ್ಮನ್ನು ಕುಗಿಸುವಂತಹ ಕೆಲಸಗಳನ್ನು ಮಾಡಬಹುದು.
ಅವರು ಬೇರೆಯವರ ಗಮನ ಸೆಳೆಯಲು ಮತ್ತು ಇನ್ನೊಬ್ಬರಿಂದ ಮನ್ನಣೆ ಗಳಿಸುವ ಉದ್ದೇಶದಿಂದ, ನಿಮ್ಮ ನಡವಳಿಕೆ ಅಥವಾ ಇನ್ಯಾರದೊ ನಡವಳಿಕೆಗಳನ್ನು ಅವರು ಅನುಸರಿಸಲು ಪ್ರಯತ್ನಿಸುತ್ತಾರೆ. ಅಪಹಾಸ್ಯ ಅಥವಾ ಕೂಹಕದ ನಗು ಅಪಾಯಕಾರಿ ಸ್ನೇಹದ ಲಕ್ಷಣಗಳಲ್ಲಿ ಒಂದಾಗಿದೆ. ನಿಮ್ಮ ಜೀವನದ ವಿವಿಧ ಅಂಶಗಳ ಬಗ್ಗೆ ಅಪಹಾಸ್ಯ ಮಾಡಿ ನಿಮ್ಮ ಕೆಳಗಿಳಿಸುವುದು, ಅದು ನಿಮ್ಮಲ್ಲಿ ಅಸಮತೋಲನ ಮತ್ತು ಅಸುರಕ್ಷಿತ ಭಾವನೆಯನ್ನು ಉಂಟುಮಾಡಬಹುದು. ಕೆಲವೊಬ್ಬರು ನಿಮ್ಮ ಯಶಸ್ಸು ಅಥವಾ ಸಂತೋಷದ ಬಗ್ಗೆ ಅತೀ ಉತ್ಸುಹಕರಾಗಿರುತ್ತಾರೆ. ಅಂತವರನ್ನು ನೋಡಿದಾಗ ಅದು ಅವರ ನಿಜವಾದ ಸಂತೋಷ ಅಲ್ಲ ಎಂದು ನಮಗೆ ಅನಿಸಿಬಿಡುತ್ತದೆ. ಅವರ ಅಸೂಯೆಯ ನೈಜ ಭಾವನೆಗಳನ್ನು ಮರೆಮಾಚಲು ಈ ರೀತಿಯ ನಕಲಿ ಸಂತೋಷವನ್ನು ತೋರ್ಪಡಿಸುತ್ತಾರೆ.
ಇದನ್ನೂ ಓದಿ; Friendship: ನಿಮ್ಮ ಸ್ನೇಹ ಎಷ್ಟು ಆಳವಾಗಿದೆ ಎಂದು ತಿಳಿಯುವುದು ಹೇಗೆ?
ನಿಮ್ಮ ಬಗ್ಗೆ ಇತರರೊಂದಿಗೆ ಗಾಸಿಪ್ ಮಾಡುತ್ತಾರೆ. ಇದು ಕೂಡಾ ಅಪಾಯಕಾರಿ ಸ್ನೇಹದ ಲಕ್ಷಣಗಳಲ್ಲಿ ಒಂದು. ಇನ್ನೊಬ್ಬರ ಬಳಿ ನಿಮ್ಮ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಅವರ ಕಿವಿಗೆ ತುಂಬುತ್ತಾರೆ. ನಿಮ್ಮ ಮುಂದೆ ಒಳ್ಳೆಯವರಂತೆ ನಟಿಸಿ, ನಿಮ್ಮ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುತ್ತಾರೆ. ಈ ರೀತಿಯ ಸ್ನೇಹಿತರಿಂದ ಆದಷ್ಟು ದೂರವಿರಬೇಕಾಗುತ್ತದೆ.