ಬೆಂಗಳೂರಿನ ಐತಿಹಾಸಿಕ ತಾಣಗಳು: ವಾರಾಂತ್ಯದಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದ ಸ್ಥಳಗಳು

ಬೆಂಗಳೂರನ್ನು ಐಟಿ ಹಬ್ ಹೈಟೆಕ್ ಸಿಟಿ ಎಂದು ಕರೆಯುತ್ತಾರೆ. ಇಲ್ಲಿ ಗಗನಚುಂಬಿ ಕಟ್ಟಡಗಳು ಮಾತ್ರವಲ್ಲದೇ ಐತಿಹಾಸಿಕ ಕಟ್ಟಡಗಳು, ಸ್ಥಳಗಳೂ ಕೂಡಾ ಇವೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 10, 2023 | 4:04 PM

Best Historical Places in Bangalore

ಬೆಂಗಳೂರನ್ನು ಐಟಿ ಹಬ್ ಹೈಟೆಕ್ ಸಿಟಿ ಎಂದು ಕರೆಯುತ್ತಾರೆ. ಇಲ್ಲಿ ಗಗನಚುಂಬಿ ಕಟ್ಟಡಗಳು ಮಾತ್ರವಲ್ಲದೇ ಐತಿಹಾಸಿಕ ಕಟ್ಟಡಗಳು, ಸ್ಥಳಗಳೂ ಕೂಡಾ ಇವೆ. ಬ್ರಿಟೀಷರು ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ರೂಪುಗೊಂಡ ಸ್ಮಾರಕಗಳಿಂದ ಹಿಡಿದು ರಾಜಮನೆತನದ ಅರಮನೆಗಳವರೆಗೆ ವೈವಿಧ್ಯಮಯವಾದ ಐತಿಹಾಸಿಕ ಸ್ಥಳಗಳು ಬೆಂಗಳೂರಿನಲ್ಲಿವೆ. ಇತಿಹಾಸ ಪ್ರಿಯರು ಮತ್ತು ಕಲಾಪ್ರೇಮಿಗಳು ಭೇಟಿ ನೀಡಬೇಕಾಗಿರುವ ಬೆಂಗಳೂರಿನ ಕೆಲವು ಐತಿಹಾಸಿಕ ಸ್ಥಳಗಳ ಪಟ್ಟಿ ಇಲ್ಲಿವೆ.

1 / 17
Best Historical Places in Bangalore

ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ: ಈ ಸೊಗಸಾದ ರಾಜಮನೆತನವು ಬೆಂಗಳೂರಿನ ಐತಿಹಾಸಿಕ ಸ್ಥಳಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಅರಮನೆಯ ವಾಸ್ತುಶಿಲ್ಪವು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿದೆ. ದೇಶದ ವಿವಿಧ ಭಾಗಗಳಲ್ಲಿನ ಇತರ ಇಂಡೋ-ಇಸ್ಲಾಮಿಕ್ ಕಟ್ಟಡಗಳಂತೆ, ಈ ಅರಮನೆಯ ಛಾವಣಿಗಳು ಮತ್ತು ಗೋಡೆಗಳು ಸುಂದರವಾದ ಹೂವಿನ ಮಾದರಿಗಳನ್ನು ಒಳಗೊಂಡಿದೆ ಮತ್ತು ಕಮಾನುಗಳು ಸಂಕೀರ್ಣವಾದ ವಿನ್ಯಾಸವನ್ನು ಹೊಂದಿವೆ. ಈ ಅರಮನೆಯ ನೆಲಮಹಡಿಯಲ್ಲಿ ವಸ್ತುಸಂಗ್ರಹಾಲಯವಿದ್ದು, ಟಿಪ್ಪು ಸುಲ್ತಾನ ಮತ್ತು ಅವನ ಆಳ್ವಿಕೆಯ ದಿನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಪ್ರವಾಸಿಗರಿಗೆ ಇದು ಉತ್ತಮ ಸ್ಥಳವಾಗಿದೆ. ಚಾಮರಾಜಪೇಟೆಯಲ್ಲಿರುವ ಈ ಅರಮನೆಗೆ ಬೆಳಗ್ಗೆ 8.30 ರಿಂದ ಸಂಜೆ 5.30ರ ವರೆಗೆ ಪ್ರವಾಸಿಗರ ಭೇಟಿಗೆ ಅವಕಾಶವಿದೆ.

2 / 17
Best Historical Places in Bangalore

ಬೆಂಗಳೂರು ಕೋಟೆ: ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರಿಂದ 1537ರಲ್ಲಿ ಸ್ಥಾಪಿಸಲ್ಪಟ್ಟ ಈ ಮಣ್ಣಿನ ಕೋಟೆಯನ್ನು 1761ರಲ್ಲಿ ಹೈದರ್ ಅಲಿ ಪುನರುಜ್ಜೀವನ ನೀಡಿದನು. ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಈ ಕಟ್ಟಡವು ಇತಿಹಾಸ ಪ್ರಿಯರ ನೆಚ್ಚಿನ ತಾಣವಾಗಿದೆ. ಈ ಕೋಟೆಯು ಬೆಂಗಳೂರಿನ ಹೊಸ ತರಗುಪೇಟೆಯಲ್ಲಿದೆ. ಪ್ರವಾಸಿಗರು ಬೆಳಗ್ಗೆ 8.30ರಿಂದ ಸಂಜೆ 5.30 ವರೆಗೆ ಒಳಗೆ ಇಲ್ಲಿಗೆ ಭೇಟಿ ನೀಡಲು ಅವಕಾಶವಿದೆ.

3 / 17
Best Historical Places in Bangalore

ಬೆಂಗಳೂರು ಅರಮನೆ: ಭವ್ಯವಾದ ಬೆಂಗಳೂರು ಅರಮನೆಯನ್ನು 1887ರಲ್ಲಿ ನಿರ್ಮಿಸಲಾಯಿತು. ಇದು 45000 ಚದರ ಅಡಿಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿದೆ. ಟ್ಯೂಡರ್ ಮತ್ತು ಸ್ಕಾಟಿಷ್ ಗೋಥಿಕ್ ವಾಸ್ತುಶಿಲ್ಪದಿಂದ ಪ್ರೇರಿತವಾಗಿ ಗೋಪುರಗಳು ಮತ್ತು ಕಿಟಕಿಗಳನ್ನು ನಿರ್ಮಿಸಲಾಗಿದೆ. ಇವುಗಳು ಅರಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅರಮನೆಯ ಒಳಾಂಗಣವನ್ನು ಮರದಿಂದ ಅದ್ಭುತವಾಗಿ ಕೆತ್ತಲಾಗಿದೆ ಮತ್ತು ಹೂವಿನ ವರ್ಣಚಿತ್ರಗಳಿಂದ ಕೂಡಿದೆ. ಹಾಗೂ ಅರಮನೆಯು ವಿಶಾಲವಾದ ಹಸಿರು ಉದ್ಯಾನವನಗಳಿಂದ ಸುತ್ತುವರೆದಿದೆ. ಈ ಎಲ್ಲ ವಿಶಿಷ್ಟತೆಯ ಕಾರಣದಿಂದ ಬೆಂಗಳೂರು ಅರಮನೆಯು ಬೆಂಗಳೂರಿನ ಅತ್ಯುತ್ತಮ ಸ್ಮಾರಕಗಳಲ್ಲಿ ಒಂದಾಗಿದೆ. ಈ ಅರಮನೆ ಬೆಂಗಳೂರಿನ ವಸಂತ ನಗರದಲ್ಲಿದೆ. ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯ ವರೆಗೆ ಪ್ರವಾಸಿಗರಿಗೆ ಭೆಟಿಯ ಅವಕಾಶ ಕಲ್ಪಿಸಲಾಗಿದೆ.

4 / 17
Best Historical Places in Bangalore

ದೇವನಹಳ್ಳಿ ಕೋಟೆ: ರಾಜ ಯುಗದ ಕಾಲಕ್ಕೆ ನಿಮ್ಮನ್ನು ಕರೆದೊಯ್ಯುವ ಭವ್ಯವಾದ ಕೋಟೆ ಇದಾಗಿದೆ. ಈ ಕೋಟೆಯನ್ನು ಟಿಪ್ಪು ಸುಲ್ತಾನನ ಜನ್ಮ ಸ್ಥಳವೆಂದು ಪರಿಗಣಿಸಲಾಗಿದೆ. ಈ ಭವ್ಯವಾದ ಕೋಟೆಯನ್ನು ಸಾಳುವ ರಾಜವಂಶದ ದೊರೆ ಮಲ್ಲೇವೈರೇಗೌಂಡರು ನಿರ್ಮಿಸಿದ್ದು. 20 ಎಕರೆ ಪ್ರದೇಶಗಳಲ್ಲಿ ವ್ಯಾಪಿಸಿದ ಈ ಕೋಟೆಯನ್ನು ಕಲ್ಲು ಮತ್ತು ಗಾರೆಗಳಿಂದ ನಿರ್ಮಿಸಲಾಗಿದೆ. ಪ್ರವಾಸಿಗರು ಹೆಚ್ಚಾಗಿ ಈ ಸ್ಮಾರಕಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಇದು ಬೆಂಗಳೂರಿನ ಹೈದರಬಾದ್ ಹೆದ್ದಾರಿಯಲ್ಲಿದೆ. ಬೆಳಗ್ಗೆ 7 ರಿಂದ ರಾತ್ರಿ 8.30ರವರೆಗೆ ಇಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶವಿದೆ.

5 / 17
Best Historical Places in Bangalore

ಸೈಂಟ್ ಮೇರಿಸ್ ಬೆಸಿಲಿಕಾ: ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಈ ಚರ್ಚ್​​ನ್ನು 1882ರಲ್ಲಿ ನಿರ್ಮಿಸಲಾಯಿತು. ಇದನ್ನು ಕ್ರಿಶ್ಚಿಯನ್ನರು ಮಾತ್ರವಲ್ಲದೆ ಎಲ್ಲಾ ಧರ್ಮದವರಿಗಾಗಿಯೂ ನಿರ್ಮಿಸಲ್ಪಟ್ಟಿದ್ದು. ಇತಿಹಾಸದ ಜೊತೆಗೆ ಆಧ್ಯಾತ್ಮಿಕತೆಯ ಒಲವು ನಿಮಗಿದ್ದರೆ, ಈ ಐತಿಹಾಸಿಕ ಸ್ಮಾರಕಕ್ಕೆ ನೀವು ಭೇಟಿ ನೀಡಲೇಬೇಕು. ಈ ಚರ್ಚ್​ನ್ನು ವಾಸ್ತುಶಿಲ್ಪ ಗೋಥಿಕ್ ಶೈಲಿಯಲ್ಲಿದೆ. ಹಾಗೂ ಚರ್ಚ್​​ನ್ನು ಒಳಗೆ ಮೇರಿಯ ಪ್ರತಿಮೆ ಮತ್ತು ಬಣ್ಣದ ಗಾಜಿನ ಕಿಟಕಿಗಳಿವೆ. ಇವುಗಳನ್ನು ನೋಡಲೆಂದು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಚರ್ಚ್ ವೀಕ್ಷಣೆಗೆ ಅವಕಾಶವಿದೆ.

6 / 17
Best Historical Places in Bangalore

ಜವಾಹರಲಾಲ್ ನೆಹರು ತಾರಾಲಯ: ನೀವು ವಿಜ್ಞಾನದ ವಿಷಯದಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ಜವಾಹರಲಾಲ್ ತಾರಾಲಯವು ನಿಮ್ಮ ಭೇಟಿಗೆ ಉತ್ತಮ ಸ್ಥಳವಾಗಿದೆ. ಈ ತಾರಾಲಯಕ್ಕೆ ಹೋದರೆ ಅದು ನಿಮ್ಮನ್ನು ಬಾಹ್ಯಾಕಾಶ ಪ್ರವಾಸಕ್ಕೆ ಕರೆದುಕೊಂಡು ಹೋದ ಅನುಭವವಾಗುತ್ತದೆ. ಬಾಹ್ಯಾಕಾಶ, ಜ್ಯೋತಿಷ್ಯ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರು ಈ ತಾರಾಲಯವು ಪ್ರವಾಸಿಗರ ಭೇಟಿಗೆ ಬೆಳಗ್ಗೆ 10.30ರಿಂದ ಸಂಜೆ 5.30ರ ವರೆಗೆ ತೆರೆದಿರುತ್ತದೆ.

7 / 17
Best Historical Places in Bangalore

ಲಾಲ್ ಬಾಗ್: ಈ ಲಾಲ್‌ಬಾಗ್ ಉದ್ಯಾನವನವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಇದರ ಮೂಲವು ಹೈದರ್ ಅಲಿ ಯುಗಕ್ಕಿಂತಲೂ ಹಿಂದಿನದು. ಇದನ್ನು ಅವರು 1760ರಲ್ಲಿ 40 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದರು. ನಂತರ ಆತನ ಮಗ ಟಿಪ್ಪು ಸುಲ್ತಾನ್ ಅದನ್ನು 240 ಎಕರೆಗಳ ವರೆಗೆ ವಿಸ್ತರಿಸಿದ. ಇಲ್ಲಿ ಹೇರಳವಾಗಿ ಕಂಡು ಬರುವ ಕೆಂಪು ಗುಲಾಬಿಗಳ ಕಾರಣದಿಂದ ಇದಕ್ಕೆ ಲಾಲ್ ಬಾಗ್ ಅಥವಾ ರೆಡ್ ಗಾರ್ಡನ್ ಎಂಬ ಹೆಸರು ಬಂದಿದ್ದು. ಈ ಉದ್ಯಾನವನದಲ್ಲಿ ಸುಂದರವಾದ ಗಾಜಿನ ಮನೆ, ಪುರಾತನ ಮರಗಳ ಅಪರೂಪ ಸಂಗ್ರಹ ಹಾಗೂ ಕೆಲವು ವಿಶಿಷ್ಟವಾದ ಉಷ್ಣವಲಯದ ಸಸ್ಯರಾಶಿಗಳನ್ನು ಇಲ್ಲಿ ಕಾಣಬಹುದು. ಬೆಂಗಳೂರಿನ ಮಾವಳ್ಳಿಯಲ್ಲಿರುವ ಈ ಉದ್ಯಾನವನವು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಉದ್ಯಾನವನವು ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.

8 / 17
Best Historical Places in Bangalore

ವಿಧಾನ ಸೌಧ: ನೀವು ಬೆಂಗಳೂರಿನ ಐತಿಹಾಸಿಕ ಸ್ಥಳಗಳು ಮತ್ತು ಅವುಗಳ ವಾಸ್ತುಶಿಲ್ಪಗಳ ಬಗ್ಗೆ ಅನ್ವೇಷಿಸಲು ಹೊರಟಿದ್ದರೆ, ವಿಧಾನ ಸೌಧಕ್ಕೆ ನೀವು ಭೇಟಿ ನೀಡಲೆಬೇಕಾಗುತ್ತದೆ. ನವ ದ್ರಾವಿಡ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಈ ಭವ್ಯವಾದ ಸೌಧವನ್ನು 1956ರಲ್ಲಿ ನಿರ್ಮಿಸಲಾಗಿದೆ. ಈ ಸೌಧದ ವಿನ್ಯಾಸದಲ್ಲಿ ಬ್ರಿಟೀಷ್, ಇಂಡೋ ಇಸ್ಲಾಮಿಕ್ ಮತ್ತು ದ್ರಾವಿಡ ವಾಸ್ತುಶಿಲ್ಪದ ಅಂಶಗಳನ್ನು ಕಾಣಬಹುದು. 60 ಎಕರೆ ಪ್ರದೇಶದಲ್ಲಿ ಹರಡಿರುವ ಈ ಭವ್ಯವಾದ ಸೌಧವು ಒಟ್ಟು 300 ಕೊಠಡಿಗಳನ್ನು ಒಳಗೊಂಡಿದೆ. ಸಂಪಂಗಿ ರಾಮನಗರದಲ್ಲಿರುವ ಈ ವಿಧಾನಸೌದಕ್ಕೆ ಭೇಟಿ ನೀಡಬೇಕೆಂದರೆ ಪೂರ್ನಾನುಮತಿಯ ಅಗತ್ಯವಿದೆ. ಹಾಗೂ ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಭೇಟಿಗೆ ಅವಕಾಶವಿದೆ.

9 / 17
Best Historical Places in Bangalore

ಬೆಂಗಳೂರು ಹೈಕೋರ್ಟ್ (ಅತ್ತಾರ ಕಛೇರಿ): ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ 1864 ಮತ್ತು 1868ರ ನಡುವೆ ನಿರ್ಮಿಸಲಾದ ಅಟ್ಟಾರ ಕಛೇರಿಯು ಆರಂಭದಲ್ಲಿ ವಿವಿಧ ಸಾರ್ವಜನಿಕ ಕಛೇರಿಗಳನ್ನು ಒಳಗೊಂಡಿತ್ತು. ಗೋಥಿಕ್ ವಾಸ್ತುಶಿಲ್ಪದಲ್ಲಿ ವಿನ್ಯಾಸಗೊಳಿಸಲಾದ ಕೆಂಪು ಬಣ್ಣದ ಈ ಕಟ್ಟಡವು ಪ್ರಸ್ತುತ ಹೈಕೋರ್ಟ್ ಆಗಿದೆ. ವಿಧಾನ ಸೌಧದ ಎದುರುಗಡೆಯಲ್ಲಿಯೇ ಈ ಕಟ್ಟಡ ಇದೆ. ಆದರೆ ಇದು ಸಾರ್ವಜನಿಕರ ಭೇಟಿಗೆ ಮುಕ್ತವಾಗಿಲ್ಲ, ಪ್ರವಾಸಿಗರು ಹೊರಗಿನಿಂದಲೇ ಇದರ ಸೌಂದರ್ಯ ಸವಿಯಬಹುದು.

10 / 17
Best Historical Places in Bangalore

ಶೇಷಾದ್ರಿ ಅಯ್ಯರ್ ಸ್ಮಾರಕ ಭವನ: ಇತಿಹಾಸ ಪ್ರೇಮಿಗಳಿಂದ ಅಪಾರ ಮೆಚ್ಚುಗೆಯನ್ನು ಪಡೆದ ಬೆಂಗಳೂರಿನ ಐತಿಹಾಸಿಕ ಸ್ಥಳಗಳಲ್ಲಿ ಈ ಶೇಷಾದ್ರಿ ಅಯ್ಯರ್ ಸ್ಮಾರಕ ಭವನ ಸ್ಮಾರಕವೂ ಒಂದಾಗಿದೆ. ಯುರೋಪಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ಕಟ್ಟಡವನ್ನು 1915 ರಲ್ಲಿ ಮೈಸೂರಿನ ದಿವಾನ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಸ್ಮರಣೆಗಾಗಿ ನಿರ್ಮಿಸಲಾಯಿತು. ಈ ಕಟ್ಟಡವು ಪ್ರಸ್ತುತ ರಾಜ್ಯದ ಕೇಂದ್ರ ಗ್ರಂಥಾಲಯವಾಗಿದ್ದು ಸರಿಸುಮಾರು 2,65,000 ಪುಸ್ತಕಗಳನ್ನು ಹೊಂದಿದೆ. ಕಬ್ಬನ್ ಪಾರ್ಕ್ ಬಳಿ ಇರುವ ಈ ಸ್ಥಳಕ್ಕೆ ಪ್ರವಾಸಿಗರಿಗೆ ಬೆಳಗ್ಗೆ 8.30 ರಿಂದ ಸಂಜೆ 7.30ರ ವರೆಗೆ ಭೇಟಿಗೆ ಅವಕಾಶವಿದೆ.

11 / 17
Best Historical Places in Bangalore

ಗವಿ ಗಂಗಾಧರೇಶ್ವರ ದೇವಸ್ಥಾನ: ಹಿಂದೂಗಳ ಪವಿತ್ರ ಧಾರ್ಮಿಕ ತಾಣ ಮಾತ್ರವಲ್ಲದೆ ಈ ದೇವಾಲಯವು ಬೆಂಗಳೂರಿನ ಅತ್ಯಂತ ಆಸಕ್ತಿದಾಯಕ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಅದ್ಭುತವಾಗಿ ನಿರ್ಮಿಸಲಾದ ಈ ಪ್ರಾಚಿನ ಗುಹೆ ದೇವಾಲಯವು ರಾಕ್ ಕಟ್ ವಾಸ್ತುಶಿಲ್ಪ ಮಾದರಿಯಲ್ಲಿದೆ. ಶಿವ ದೇವರ ಈ ದೇವಾಲಯದ ಇತಿಹಾಸ 9ನೇ ಶತಮಾನಕ್ಕೂ ಹಿಂದಿನದು ಎಂದು ಅಧ್ಯಯನಗಳು ಹೇಳುತ್ತವೆ. ಇಲ್ಲಿ ಬಂಡೆಗಳ ಮೇಲೆ ಅನೆಕ ವಿನ್ಯಾಸದ ಕೆತ್ತನೆಯನ್ನು ಕಾಣಬಹುದು. ಆಧ್ಯಾತ್ಮಿಕ ತಾಣದ ಜೊತೆಗೆ ಇತಿಹಾಸದ ಹಿನ್ನೆಯನ್ನು ಹೊಂದಿರು ಗವಿ ಗಂಗಾಧರೇಶ್ವರ ದೇವಾಲಯ ಬೆಂಗಳೂರಿನ ಗವಿಪುರದಲ್ಲಿದೆ. ಬೆಳಗ್ಗೆ 6 ರಿಂದ ರಾತ್ರಿ 8 ರ ವರೆಗೆ ಭಕ್ತರಿಗೆ ಇಲ್ಲಿ ಭೇಟಿಗೆ ಅವಕಾಶವಿದೆ.

12 / 17
Best Historical Places in Bangalore

ವೆಂಕಪ್ಪ ಆರ್ಟ್ ಗ್ಯಾಲರಿ: ಈ ಹೆಸರೇ ಸೂಚಿಸುವಂತೆ, ಭಾರತದ ಅತ್ಯಂತ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರಾದ ಕೆ. ವೆಂಕಪ್ಪ ಅವರ ಕಲೆಯನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಜೊತೆಗೆ ಇಲ್ಲಿ ವಿವಿಧ ಕಲಾವಿದರ ವರ್ಣಚಿತ್ರಗಳು, ಸಂಗೀತ ಉಪಕರಣಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ವಸ್ತು ಸಂಗ್ರಹಾಲಯವು ಪ್ರವಾಸಿಗರಿಗೆ ಪ್ರಾಚೀನ ಕಾಲದ ಕರಕುಶಲತೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ನೀಡುತ್ತದೆ. ಇಲ್ಲಿ ವಿವಿಧ ಶಿಲ್ಪಗಳು, ಸೊಗಸಾದ ಮರದ ಕೆತ್ತನೆಗಳು, ಹರಪ್ಪಾ ನಾಗರಿಕತೆಯ ಪ್ರಾಚೀನ ವಸ್ತುಗಳು ಇನ್ನೂ ಹೆಚ್ಚಿನ ಕರಕುಶಲತೆಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಪ್ರವಾಸಿಗರ ಭೇಟಿಗೆ ಅವಕಾಶವಿದೆ.

13 / 17
Best Historical Places in Bangalore

ಇಂದಿರಾ ಗಾಂಧಿ ಮ್ಯೂಸಿಕಲ್ ಫೌಂಟೇನ್ ಪಾರ್ಕ್: ಮೂಲಭೂತವಾಗಿ ಐತಿಹಾಸಿಕ ಸ್ಥಳವಲ್ಲದಿದ್ದರೂ, 1995ರಲ್ಲಿ ನಿರ್ಮಿಸಲಾದ ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್ ಪ್ರಸಾಸಿಗರ ಭೇಟಿಗೆ ಉತ್ತಮ ಸ್ಥಳವಾಗಿದೆ. ಈ ಉದ್ಯಾನವನದ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ ದೀಪಗಳು, ಸಂಗೀತ ಮತ್ತು ಕಾರಂಜಿಗಳನ್ನು ಒಳಗೊಂಡಿರುವ ನೃತ್ಯ ಸಂಯೋಜನೆಯ ಪ್ರದರ್ಶನವಾಗಿದೆ. ಬೆಂಗಳೂರಿನ ಚೌಡಯ್ಯ ರಸ್ತೆಯಲ್ಲಿರುವ ಈ ಉದ್ಯಾನವನಕ್ಕೆ ಬೆಳಗ್ಗೆ 10 ರಿಂದ ರಾತ್ರಿ 8.30 ರ ವರೆಗೆ ಪ್ರವಾಸಿಗರು ಭೇಟಿ ನೀಡಲು ಅವಕಾಶವಿದೆ.

14 / 17
Best Historical Places in Bangalore

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ: ಈ ವಸ್ತು ಸಂಗ್ರಹಾಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅದ್ಭುತಗಳನ್ನು ಕಾಣಬಹುದು. ಈ ಸಂಗ್ರಹಾಲಯವು ಫನ್ ಸೈನ್ಸ್ ಗ್ಯಾಲರಿ, ಇಂಜಿನ್ ಹಾಲ್, ಎಲೆಕ್ಟೊಟೆಕ್ನಿಕ್ ಗ್ಯಾಲರಿ, ಸ್ಪೇಸ್ ಗ್ಯಾಲರಿ ಮತ್ತು ಡೈನೋಸಾರ್ ಎನ್‌ಕ್ಲೇವ್‌ನಂತಹ ವಿವಿದ ಸಂವಾದಾತ್ಮಕ ವಿಭಾಗಗಳನ್ನು ಹೊಂದಿದೆ. ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿರು ಈ ವಸ್ತು ಸಂಗ್ರಹಾಲಯಕ್ಕೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಭೇಟಿಗೆ ಅವಕಾಶವಿದೆ.

15 / 17
Best Historical Places in Bangalore

ದೊಡ್ಡ ಬಸವನಗುಡಿ ದೇವಾಲಯ: ಈ ದೇವಾಲಯವು ಭಾರತದ ಅತೀದೊಡ್ಡ ಮತ್ತು ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯ ಶಿವ ಭಕ್ತ ನಂದಿಗೆ ಅಪಿತವಾಗಿದೆ. ಒಂದೇ ಗ್ರಾನೈಟ್ ಬಂಡೆಯ ಮೇಲೆ ಕೆತ್ತಿದ ಅಗಾಧವಾದ ಪ್ರತಿಮೆಯ ಕಲಾಕೃತಿಯನ್ನು ಇಲ್ಲಿ ಕಾಣಬಹುದು. ನಂದಿಯ ಭವ್ಯವಾದ ಪ್ರತಿಮೆ 6 ಮೀ ಉದ್ದ ಮತ್ತು 4.5ಮೀ ಎತ್ತರದಲ್ಲಿದೆ. ಆಸಕ್ತಿದಾಯಕ ಹಿನ್ನೆಲೆಯನ್ನು ಹೊಂದಿರುವ ಈ ದೇವಾಲಯವು ಇತಿಹಾಸ ಪ್ರಿಯರಿಗೆ, ವಾಸ್ತುಶಿಲ್ಪ ಮತ್ತು ಪುರಾತತ್ವದ ಶಾಸ್ರ್ತದ ಅದ್ಭುತಗಳನ್ನು ಆನಂದಿಸುವವರಿಗೆ ಅತ್ಯುತ್ತಮ ತಾಣವಾಗಿದೆ.

16 / 17
Best Historical Places in Bangalore

ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ಬೆಂಗಳೂರು: ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ಬೆಂಗಳೂರು 2009 ರಲ್ಲಿ ಉದ್ಘಾಟನೆಗೊಂಡಿತು. ಇದು ರವೀಂದ್ರನಾಥ ಟಾಗೋರ್, ಜಾಮಿನಿ ರಾಯ್, ರವಿ ವರ್ಮ ಮತ್ತು ಇನ್ನೂ ಅನೇಕ ಪ್ರಸಿದ್ಧ ಕಲಾವಿದರಿಂದ 14,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿದೆ. ಈ ಆರ್ಟ್ ಗ್ಯಾಲರಿಯು ಭಾರತವನ್ನು ಪ್ರತಿನಿಧಿಸುವ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅನೆಕ ಕಾರ್ಯಗಾರಗಳು, ಶೈಕ್ಷಣಿಕ ಪ್ರವಾಸಗಳು, ಸೆಮಿನಾರ್‌ಗಳನ್ನು ಆಯೋಜಿಸುತ್ತದೆ. ಇತಿಹಾಸ ಪ್ರಿಯರಿಗೆ ಮತ್ತು ಕಲಾಪ್ರೇಮಿಗಳಿಗೆ ಭೇಟಿ ನೀಡಲು ಉತ್ತಮ ಐತಿಹಾಸಿಕ ಸ್ಥಳವಾಗಿದೆ. ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಇಲ್ಲಿ ಭೇಟಿಗೆ ಅವಕಾಶವಿರುತ್ತದೆ.

17 / 17

Published On - 3:49 pm, Fri, 10 March 23

Follow us
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ