AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಜಗಳ , ಖರ್ಚಿಗೆ ಹಣವಿಲ್ಲ ಎಂದು ಖೋಟಾ ನೋಟ್ ಪ್ರಿಂಟ್ ಮಾಡಿದ ಯುವಕ

ಶ್ರೀಮಂತನೋರ್ವ ಹಣ ಇದೆ ಎಂದು ಹೇಗೆ ಬೇಕೋ ಹಾಗೇ ಖರ್ಚು ಮಾಡಿ ಮಜಾ ಉಡಾಯಿಸುತ್ತಾರೆ. ಟ್ರಿಪ್, ಪಾರ್ಟಿ ಅಂತೆಲ್ಲಾ ನಾನಾ ರೀತಿಯಲ್ಲಿ ಎಂಜಾಯ್ ಮಾಡುತ್ತಾನೆ. ಆದ್ರೆ, ಅದೇ ವ್ಯಕ್ತಿಯ ಕೈಯಲ್ಲಿ ಏಕಾಏಕಿ ಹಣ ಇಲ್ಲವಾದಗ ಹುಚ್ಚನಾಗುತ್ತಾನೆ. ಹಣಕ್ಕಾಗಿ ಹಪಹಪಿಸುತ್ತಾನೆ. ಆ ಸಮಯದಲ್ಲಿ ಹಣಕ್ಕಾಗಿ ಏನು ಮಾಡಲು ಸಿದ್ಧನಿರುತ್ತಾನೆ. ಅದರಂತೆ ಬೆಂಗಳೂರಿನಲ್ಲಿ ಉದ್ಯಮಿ ಪತ್ರ ಮನೆಯಲ್ಲಿ ಜಗಳ ಮಾಡಿಕೊಂಡಿದ್ದು, ಖರ್ಚಿಗೆ ಹಣವಿಲ್ಲದಿದ್ದಾಗ ಖೋಟಾ ನೋಟ್ ಪ್ರಿಂಟ್ ಮಾಡಿದ್ದಾನೆ.

ಮನೆಯಲ್ಲಿ ಜಗಳ , ಖರ್ಚಿಗೆ ಹಣವಿಲ್ಲ ಎಂದು ಖೋಟಾ ನೋಟ್ ಪ್ರಿಂಟ್ ಮಾಡಿದ ಯುವಕ
Krish Maali
ರಾಚಪ್ಪಾಜಿ ನಾಯ್ಕ್
| Edited By: |

Updated on:Jun 13, 2025 | 8:20 PM

Share

ಬೆಂಗಳೂರು, (ಜೂನ್ 13): ಖರ್ಚಿಗೆ ಹಣ ಇಲ್ಲ ಎಂದು ಟೆಕ್ಸ್​​ಟೈಲ್ಸ್​ ಉದ್ಯಮಿ ಪುತ್ರನೋರ್ವ ಖೋಟಾ ನೋಟು ಪ್ರಿಂಟ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ನಕಲಿ ನೋಟು ಪ್ರಿಂಟ್ ಮಾಡಿ ಕ್ರಿಷ್ ಮಾಲಿ (23) ಎನ್ನುವ ಯುವಕ ಇದೀಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಅತಿಥಿಯಾಗಿದ್ದಾನೆ. ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಪುತ್ರನಾಗಿರುವ ಕ್ರಿಷ್ ಮಾಲಿ ಖೋಟಾ ನೋಟು ಪ್ರಿಂಟ್ ಮಾಡಲೆಂದೇ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದ. ಹೊಟೇಲ್ ಗೆ ಬರುವಾಗ ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ಗಳನ್ನ ತಂದಿದ್ದು, ಹೋಟೆಲ್‌ನಲ್ಲಿ ಕುಳಿತೇ 500 ರೂಪಾಯಿ ಮುಖಬೆಲೆಯ ನಕಲಿ ನೋಟು ಪ್ರಿಂಟ್ ಮಾಡಿದ್ದಾನೆ. ಬಳಿಕ ರೂಮ್​ ಬಾಯ್​ ಕ್ಲೀನ್ ಮಾಡಲು ಬಂದಾಗ ವಿಚಾರ ಬೆಳಕಿಗೆ ಬಂದಿದೆ.

ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿರುವ ಕ್ರಿಷ್ ಮಾಲಿ, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡಿದ್ದ. ಬಳಿಕ ತನ್ನ ಬಳಿಯಿರುವ ಹಣ ಸಾಕಾಗುವುದಿಲ್ಲ ಎಂದು ಯೋಚಿಸಿ ತಾನೇ ಖೋಟ ನೋಟ್ ಪ್ರಿಂಟ್ ಮಾಡುವ ಪ್ಲಾನ್ ಹಾಕಿದ್ದ. ಹೀಗಾಗಿ ಆನ್‌ಲೈನ್‌ ಮೂಲಕ ರೂಮ್ ಬುಕ್ ಮಾಡಿದ್ದ. ಜೂನ್ 1 ರಂದು ರೂಮ್ ಬುಕ್ ಮಾಡಿಕೊಂಡು ಮೂರು ದಿನ ಅಲ್ಲೇ ತಂಗಿದ್ದಾನೆ. ಬಳಿಕ ಜೂನ್ 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿ ಮಾಡಿದ್ದಾನೆ.

ಇದನ್ನೂ ಓದಿ: 50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್

ರೂಂ ಕ್ಲೀನ್ ಮಾಡುವಾಗ ಆತನ ರೂಂ ಡೆಸ್ಟ್ ಬಿನ್ ನಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿದ್ದು, ಕೂಡಲೇ ರೂಮ್ ಬಾಯ್​ ಹೋಟೆಲ್ ಮ್ಯಾನೇಜರ್ ಗೆ ಈ ವಿಚಾರ ತಿಳಿಸಿದ್ದಾನೆ. ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ಕ್ರಿಷ್ ಮಾಲಿ ನೀಡಿದ್ದ ಹಣವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ನೋಟು ಎನ್ನುವುದು ಗೊತ್ತಾಗಿದೆ.

ಅವು ನಕಲಿ ಎಂದು ತಿಳಿದು ಆತ ತಂಗಿದ್ದ ರೂಮ್‌ನಲ್ಲಿ ಪರಿಶೀಲನೆ ಮಾಡಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟಿನ ಚೂರುಗಳು ಪತ್ತೆಯಾಗಿವೆ. ಬಳಿಕ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ರೂಮ್ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ .ಕ್ರಿಷ್ ಮಾಲಿನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Fri, 13 June 25