ಬೆಂಗಳೂರಿನಲ್ಲಿ 10 ಕೋಟಿ ರೂ. ಮೌಲ್ಯದ MDMA ಡ್ರಗ್ಸ್ ಜಪ್ತಿ: ಓದಲು ಬಂದವಳು ಪೆಡ್ಲರ್ ಆದಳು
ಇದೇ ವರ್ಷ ಮಾರ್ಚ್ ನಲ್ಲಿ ಕರ್ನಾಟಕದ ಇತಿಹಾಸದಲ್ಲಿ ಅತೀ ದೊಡ್ಡ ಡ್ರಗ್ಸ್ (Drugs) ಕಾರ್ಯಾಚರಣೆ ನಡೆದಿದ್ದು, ಮಂಗಳೂರು ಸಿಸಿಬಿ ಪೊಲೀಸರು (Mangaluru CCB Police) ರಾಜಧಾನಿ ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್ ಜಪ್ತಿ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಓದಲೆಂದು ಭಾರತಕ್ಕೆ ಬಂದಿರುವ ವಿದೇಶಿ ಮಹಿಳೆ ಪೆಡ್ಲರ್ ಆಗಿದ್ದಾಳೆ.

ಬೆಂಗಳೂರು, (ಜೂನ್ 13): ಸಿಸಿಬಿ (CCB Police) ಹಾಗೂ ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರು (chikkajala Police) ಭರ್ಜರಿ ಕಾರ್ಯಾಚರಣೆ ನಡೆಸಿ 10 ಕೋಟಿ ರೂಪಾಯಿ ಮೌಲ್ಯದ 5.325 ಕೆಜಿ ಎಂಡಿಎಂಎ (MDMA Drug) ಜಪ್ತಿ ಮಾಡಿದ್ದಾರೆ. ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಪ್ರಿನ್ಸಸ್ ಎಂಬ ವಿದೇಶಿ ಮಹಿಳೆ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಳು. ಆದ್ರೆ, ಇಂದು(ಜೂನ್ 13) ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ವ್ಯಾಪಾರ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. ಬಂಧಿತ ಪ್ರಿನ್ಸಸ್ ನಿಂದ 10 ಕೋಟಿ ರೂ. ಮೌಲ್ಯದ 5.325 ಕೆಜಿ ಎಂಡಿಎಂಎ ಜಪ್ತಿ ಮಾಡಿದ್ದಾರೆ.
ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಪ್ರಿನ್ಸಸ್, ಆರಂಭದಲ್ಲಿ ನವದೆಹಲಿಯಲ್ಲಿ ವಾಸ ಮಾಡಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ಎಜುಕೇಷನ್ ವೀಸಾ ಪಡೆದಿದ್ದಳು. ಆದ್ರೆ, ಕಾಲೇಜಿಗೆ ದಾಖಲಾಗದೇ ಡ್ರಗ್ ಪೆಡ್ಲಿಂಗ್ ಗೆ ಇಳಿದಿದ್ದಳು. ದೆಹಲಿಯಿಂದ ಬೆಂಗಳೂರಿಗೆ ಬಸ್ ಮೂಲಕ ಡ್ರಗ್ ಸಾಗಾಟ ಮಾಡಿದ್ದು, ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ವ್ಯಾಪಾರ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. ಈ ಸಂಬಂಧ ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಅತೀ ದೊಡ್ಡ ಕಾರ್ಯಾಚರಣೆ: 75 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಮಾರ್ಚ್ ನಲ್ಲಿ ಅಷ್ಟೇ ಮಂಗಳೂರು ಸಿಸಿಬಿ ಪೊಲೀಸರು (Mangaluru CCB Police) ರಾಜಧಾನಿ ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್ ಜಪ್ತಿ ಮಾಡಿ ವಿದೇಶಿ ಪ್ರಜೆಗಳನ್ನು ಬಂಧಿಸಿದ್ದರು. ಸಿಸಿಬಿ ಪೊಲೀಸರು ಕಳೆದ ಐದು ತಿಂಗಳಿಂದ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಜಾಲ ಭೇದಿಸಿದ್ದರು. ಇದು ಕರ್ನಾಟಕದ ಇತಿಹಾಸದಲ್ಲಿ ಅತೀ ದೊಡ್ಡ ಡ್ರಗ್ಸ್ (Drugs) ಕಾರ್ಯಾಚರಣೆಯಾಗಿದೆ.
ಎಂಡಿಎಂಎ ಡ್ರಗ್ಸ್ ದೆಹಲಿಯ ಲ್ಯಾಬ್ನಲ್ಲಿ ನಿತ್ಯ ತಯಾರಾಗುತ್ತಿತ್ತು. ವಾರಕ್ಕೊಮ್ಮೆ ಬೆಂಗಳೂರಿಗೆ ವಿಮಾನದಲ್ಲಿ ಮೂಟೆಗಟ್ಟಲೆ ಬರುತ್ತಿತ್ತು. ವಾರಕ್ಕೆ 15-30 ಕೆಜಿ ಮತ್ತು ತಿಂಗಳಿಗೆ ಕನಿಷ್ಠ 100 ಕೆಜಿ ಎಮ್ಡಿಎಮ್ಎ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಕನಿಷ್ಠ 50-60 ಕೋಟಿ ರೂಪಾಯಿ ಡ್ರಗ್ ವಹಿವಾಟು ನಡೆಯುತ್ತದೆ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು.



