IND vs NZ: ಭಾರತದ 8 ಸ್ಥಳಗಳಲ್ಲಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಕ್ರಿಕೆಟ್ ಫೈಟ್
India vs New Zealand: 2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲು ಟೀಂ ಇಂಡಿಯಾ ಸಜ್ಜಾಗಿದೆ. ಬಿಸಿಸಿಐ ಈ ಸರಣಿಗೆ ಜೈಪುರ, ಮೊಹಾಲಿ, ಇಂದೋರ್, ರಾಜ್‌ಕೋಟ್, ಗುವಾಹಟಿ, ಹೈದರಾಬಾದ್, ನಾಗ್ಪುರ ಮತ್ತು ತಿರುವನಂತಪುರಗಳನ್ನು ಆಯ್ಕೆ ಮಾಡಿದೆ. ಈ ಪಂದ್ಯಗಳು 2026ರ ಟಿ20 ವಿಶ್ವಕಪ್‌ಗೆ ಮುನ್ನ ಅಭ್ಯಾಸಕ್ಕೆ ಸಹಕಾರಿಯಾಗಲಿದೆ.

ಟೀಂ ಇಂಡಿಯಾ ಜನವರಿ 2026 ರಲ್ಲಿ ನ್ಯೂಜಿಲೆಂಡ್ (India vs New Zealand) ವಿರುದ್ಧ 5 ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಟಿ20 ವಿಶ್ವಕಪ್ (T20 World Cup) ದೃಷ್ಟಿಯಿಂದ ಈ ವೈಟ್ ಬಾಲ್ ಸರಣಿ ಭಾರತ ತಂಡಕ್ಕೆ ಬಹು ಮುಖ್ಯವಾಗಿದೆ. ಹೀಗಾಗಿ ಬಿಸಿಸಿಐ (BCCI) ಕೂಡ ಈ ಸರಣಿಗಾಗಿ ಈಗಾಗಲೇ 8 ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಮುಂಬೈನ ವಾಂಖೆಡೆ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ, ಚೆನ್ನೈನ ಚೆಪಾಕ್ ಕ್ರೀಡಾಂಗಣ ಮತ್ತು ಬೆಂಗಳೂರಿನ ಎಂಎ ಚಿದಂಬರಂ ಕ್ರೀಡಾಂಗಣದ ಹೆಸರುಗಳು ಈ ಪಟ್ಟಿಯಲ್ಲಿಲ್ಲ. ಈ ಪ್ರಮುಖ ಕ್ರೀಡಾಂಗಳ ಬದಲಿಗೆ ದೇಶದ ಇತರ ಕ್ರೀಡಾಂಗಣಗಳಲ್ಲಿ ಈ ಸರಣಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.
8 ಸ್ಥಳಗಳಲ್ಲಿ ಪಂದ್ಯ ಆಯೋಜನೆ
ಶಾರ್ಟ್‌ಲಿಸ್ಟ್ ಮಾಡಲಾದ ಸ್ಥಳಗಳಲ್ಲಿ ಜೈಪುರ, ಮೊಹಾಲಿ, ಇಂದೋರ್, ರಾಜ್‌ಕೋಟ್, ಗುವಾಹಟಿ, ಹೈದರಾಬಾದ್, ನಾಗ್ಪುರ ಮತ್ತು ತಿರುವನಂತಪುರ ಸೇರಿವೆ. ಈ ಮೈದಾನಗಳಲ್ಲಿ ಈ ಮೊದಲು ಕೂಡ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಈ ಬಿಳಿ ಚೆಂಡಿನ ಸರಣಿಯಲ್ಲಿ, ಮೊದಲು ಎರಡು ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಾಗುತ್ತದೆ. ಆ ನಂತರ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ವಾಸ್ತವವಾಗಿ 2026 ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೂ ಮುನ್ನ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಅಭ್ಯಾಸಕ್ಕೆ ಸಹಕಾರಿಯಾಗಲಿದೆ. ಈ ಸರಣಿಯನ್ನು ಹೊರತುಪಡಿಸಿ ಟೀಂ ಇಂಡಿಯಾ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲಾ ಸ್ವರೂಪಗಳ ಸರಣಿಯನ್ನು ಆಡಲಿದೆ.
ಟೀಂ ಇಂಡಿಯಾ ವೇಳಾಪಟ್ಟಿ
ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಅಹಮದಾಬಾದ್ ಮತ್ತು ನವದೆಹಲಿಯಲ್ಲಿ ನಡೆಯಲಿದೆ. ಇದರ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ನಡೆಯಲಿದೆ. ಆ ಬಳಿಕ ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ರಾಂಚಿ, ರಾಯ್ಪುರ ಮತ್ತು ವೈಜಾಗ್‌ನಲ್ಲಿ ನಡೆಯಲಿವೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಕಟಕ್, ನ್ಯೂ ಚಂಡೀಗಢ, ಧರ್ಮಶಾಲಾ ಮತ್ತು ಲಕ್ನೋದಲ್ಲಿ 4 ಟಿ20 ಪಂದ್ಯಗಳು ನಡೆಯಲಿವೆ.
ಅಹಮದಾಬಾದ್ ವಿಮಾನ ದುರಂತ: ಸಂತಾಪ ಸೂಚಿಸಿದ ಟೀಂ ಇಂಡಿಯಾ; ಡಬ್ಲ್ಯುಟಿಸಿ ಫೈನಲ್ನಲ್ಲಿ 1 ನಿಮಿಷ ಮೌನಾಚರಣೆ
ಪ್ರಸ್ತುತ, ನಾವು ನ್ಯೂಜಿಲೆಂಡ್ ವಿರುದ್ಧದ ಸರಣಿಯ ಬಗ್ಗೆ ಮಾತನಾಡಿದರೆ, ಅದು ಜನವರಿ 2026 ರಲ್ಲಿ ನಡೆಯಲಿದೆ. ಇದರ ನಂತರ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ 2026 ರ ಟಿ20 ವಿಶ್ವಕಪ್ ನಡೆಯಲಿದೆ. ಐಸಿಸಿ ಈವೆಂಟ್ ಮುಗಿದ ನಂತರ ಐಪಿಎಲ್ 2026 ಸಹ ಪ್ರಾರಂಭವಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
