ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರ ಮಹತ್ವಾಕಾಂಕ್ಷೆ ಮಾತ್ರವಲ್ಲದೆ ಮಕ್ಕಳ ಮೇಲೆ ಭಾರವಾದ ಶಾಲಾ ಬ್ಯಾಗ್ಗಳ ಹೊರೆಯೂ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ ಸುಸ್ತಾಗಿ ನಿದ್ದೆಗೆ ಜಾರುತ್ತಾರೆ. ಅಲ್ಲದೆ ಭಾರವಾದ ಶಾಲಾ ಬ್ಯಾಗ್ಗಳ ಹೊರೆ, ಮಕ್ಕಳ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ ಭಾರವಾದ ಶಾಲಾ ಚೀಲಗಳನ್ನು ಹೊತ್ತೊಯ್ಯುವುದು ಮಕ್ಕಳ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅಲ್ಲದೆ ಇದು ಮಕ್ಕಳಲ್ಲಿ ಒತ್ತಡದ ಸಮಸ್ಯೆಯನ್ನು ಹೆಚ್ಚಿಸಬಹುದು. ವೈದ್ಯರ ಪ್ರಕಾರ, ದಿನನಿತ್ಯ ಭಾರವಾದ ಶಾಲಾ ಬ್ಯಾಗ್ಗಳನ್ನು ಹೊರುವುದರಿಂದ ಮಕ್ಕಳಲ್ಲಿ ಸ್ಪಾಂಡಿಲೈಟಿಸ್, ಬಾಗಿದ ಬೆನ್ನು ಮತ್ತು ಅನೇಕ ರೀತಿಯ ಬೆನ್ನಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು. ವೈದ್ಯಕೀಯ ವಿಜ್ಞಾನದ ಪ್ರಕಾರ ಮಗುವಿನ ತೂಕದ ಶೇಕಡಾ 10 ರಷ್ಟು ಮಾತ್ರ ಮಕ್ಕಳು ಬ್ಯಾಗ್ಗಳನ್ನು ಹೊರಬೇಕು. ಇದಕ್ಕಿಂತ ಹೆಚ್ಚಿನ ತೂಕವನ್ನು ಹೊತ್ತುಕೊಂಡರೆ ಅದು ಮಕ್ಕಳ ಎತ್ತರದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ತೋಳು, ಕಾಲು, ಭುಜಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
• 5 ವರ್ಷ ವಯಸ್ಸಿನ ಮಗು 1 ಕೆಜಿ
• 6 ವರ್ಷ ವಯಸ್ಸಿನ ಮಗು 2 ಕೆಜೆಗಿಂತ ಕಡಿಮೆ
• 7 ವರ್ಷ ವಯಸ್ಸಿನ ಮಗು 2 ಕೆಜಿ
• 8 ವರ್ಷ ವಯಸ್ಸಿನ ಮಗು 2.5 ಕೆಜಿ
• 9 ವರ್ಷ ವಯಸ್ಸಿನ ಮಗು 2.5 ಕೆಜಿಗಿಂತ ಹೆಚ್ಚು 3 ಕೆಜಿಗಿಂತ ಕಡಿಮೆ
• 10 ವರ್ಷ ವಯಸ್ಸಿನ ಮಗು 3 ಕೆಜಿ
• 11 ರಿಂದ 12 ವರ್ಷ ವಯಸ್ಸಿನ ಮಗು 4 ಕೆಜಿ ಗಿಂತ ಕಡಿಮೆ
ಭಾರವಾದ ಶಾಲಾ ಬ್ಯಾಗ್ಗಳ ಹೊರೆಯಿಂದ ಮಕ್ಕಳ ಬೆನ್ನು ಬಾಗಬಹುದು ಮತ್ತು ವಕ್ರವಾಗುವ ಸಾಧ್ಯತೆ ಇದೆ. ಇದರಿಂದಾಗಿ ಮಗು ಮುಂದಕ್ಕೆ ವಾಲಲು ಪ್ರಾರಂಭಿಸುತ್ತದೆ. ಮಕ್ಕಳಲ್ಲಿ ಬೆನ್ನು ನೋವಿನ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.
ಮನಶಾಸ್ತ್ರಜ್ಞರ ಪ್ರಕಾರ ಈ ಬ್ಯಾಗಿನ ಭಾರ ಹೊರುವುದು ಮಕ್ಕಳ ಮಾನಸಿಕ ಆರೋಗ್ಯವು ಕೂಡ ಕುಂಠಿತವಾಗಬಹುದು. ಭಾರವಾದ ಬ್ಯಾಗ್ನ ಹೊರೆ ಮಕ್ಕಳಲ್ಲಿ ಒತ್ತಡವನ್ನು ಉಂಟುಮಾಡಬಹುದು.
ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಸೋಯಾ ಪ್ಯಾನ್ ಕೇಕ್
ಇದರಿಂದ ಮಗುವಿನ ಭುಜಗಳಲ್ಲಿ ನೋವು ಉಂಟಾಗುತ್ತದೆ. ಅನೇಕ ಬಾರಿ ಈ ನೋವನ್ನು ತಾಳಲಾರದೆ ಮಕ್ಕಳು ಬ್ಯಾಗ್ಗಳನ್ನು ಒಂದು ಭುಜದಿಂದ ಇನ್ನೊಂದು ಭುಜಕ್ಕೆ ಪರ್ಯಾಯವಾಗಿ ನೇತು ಹಾಕುತ್ತಾರೆ.
ಇನ್ನು ಈ ಭಾರ ಹೊರುವುದರಿಂದ ಅವರಲ್ಲಿ ಸ್ಪಾಂಡಿಲೈಟಿಸ್ ಮತ್ತು ಸ್ಕೋಲಿಯೋಸಿಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
• ಮಗು ತನ್ನ ಶಾಲಾ ಬ್ಯಾಗ್ ನಲ್ಲಿ ಆಯಾ ದಿನಕ್ಕೆ ಅಗತ್ಯವಿರುವ ವಸ್ತು ಹಾಗೂ ಪುಸ್ತಕಗಳನ್ನು ಮಾತ್ರ ತೆಗೆದುಕೊಂಡು ಹೋಗುವಂತೆ ನೋಡಿಕೊಳ್ಳಿ.
• ಮಕ್ಕಳಿಗೆ ಬಾಲ್ಯದಿಂದಲೇ ವ್ಯಾಯಾಮ ಮತ್ತು ಯೋಗದ ಅಭ್ಯಾಸವನ್ನು ರೂಢಿಸಿಕೊಳ್ಳಿ.
• ಶಾಲಾಬ್ಯಾಗ್ ಗಳನ್ನು ಖರೀದಿಸುವಾಗ ಯಾವಾಗಲೂ ಭುಜದ ಪಟ್ಟಿಗಳು ಮತ್ತು ಪ್ಯಾಡ್ ಗಳನ್ನು ಹೊಂದಿರುವ ಬ್ಯಾಗ್ ಗಳನ್ನು ಖರೀದಿಸಿ. ಇದು ಕುತ್ತಿಗೆ ಮತ್ತ ಭುಜದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
Published On - 3:34 pm, Fri, 18 August 23