ಈ ಉರಿ ಬಿಸಿಲಿನಲ್ಲಿ ನಿಮ್ಮ ದೇಹವನ್ನು ತಂಪಾಗಿಡುವುದು ಈ ಪುದೀನಾ ಬಳಸಿ ಮೊಸರು ಬಜ್ಜಿ ತಯಾರಿಸಿ. ಇದು ದೇಹವನ್ನು ತಂಪಾಗಿಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇದಲ್ಲದೇ ಮಧ್ಯಾಹ್ನದ ಊಟಕ್ಕೆ ನೀವು ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾದ ಆಹಾರವನ್ನು ಹುಡುಕುತ್ತಿದ್ದರೆ ಕೇವಲ ಕೆಲವೇ ವಸ್ತುಗಳನ್ನು ಉಪಯೋಗಿಸಿ ನೀವು ಮೊಸರು ಬಜ್ಜಿ ತಯಾರಿಸಬಹುದು. ಇದರಲ್ಲಿ ಮೊಸರು, ಪುದೀನಾ ಹಾಗೂ ಕೆಲವು ಹಸಿ ತರಕಾರಿಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
ಇದನ್ನೂ ಓದಿ: ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?
ಹಂತ 1:
ಪುದೀನಾ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ಹಾಗೆಯೇ ಇಡಿ. ಈ ಹೊತ್ತಿಗೆ ಸೌತೆಕಾಯಿ ಮತ್ತು ಈರುಳ್ಳಿ ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕತ್ತರಿಸಿ.
ಹಂತ 2:
ಬ್ಲೆಂಡರ್ ತೆಗೆದುಕೊಂಡು ಅದಕ್ಕೆ ಈಗಾಗಲೇ ತೊಳೆದಿಟ್ಟ ಪುದೀನಾ ಸೊಪ್ಪನ್ನು ಹಾಕಿ. ಇದರೊಂದಿಗೆ ಹಸಿ ಮೆಣಸಿನಕಾಯಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಇದನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ ಮತ್ತು ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ತುರಿದ ಸೌತೆಕಾಯಿಯನ್ನು ಸೇರಿಸಿ.
ಹಂತ 3:
ಕೊನೆಯದಾಗಿ, ಸ್ವಲ್ಪ ಜೀರಿಗೆ ಪುಡಿ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸಿಂಪಡಿಸಿ. ನಂತರ ಪುದೀನ ಎಲೆಗಳಿಂದ ಅಲಂಕರಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: