ಕೆಲಸದ ದಣಿವು, ಒತ್ತಡ, ಆರೋಗ್ಯದಲ್ಲಿನ ಏರುಪೇರು ಇವೆಲ್ಲವೂ ಕೂಡಾ ದೇಹದ ಆಯಾಸಕ್ಕೆ ಕಾರಣವಾಗುತ್ತದೆ. ಆಯಾಸವು ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಆಯಾಸವು ನಿಮ್ಮ ಕೆಲವೊಂದು ಅಭ್ಯಾಸಗಳು ಅಥವಾ ದಿನಚರಿಗಳಿಂದ ಉಂಟಾಗುತ್ತದೆ. ದೈಹಿಕ ಪರಿಶ್ರಮ, ಕಳಪೆ ಮಟ್ಟದ ಆಹಾರ ಸೇವನೆ, ಭಾವನಾತ್ಮಕ ಒತ್ತಡ, ನಿದ್ರೆಯ ಕೊರತೆ ಇವೆಲ್ಲವೂ ಆಯಾಸಕ್ಕೆ ಕಾರಣವಾಗಿದೆ. ಇದು ದೇಹದ ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಈ ಆಯಾಸ ನಿಮ್ಮನ್ನು ದೈಹಿಕವಾಗಿ ಕುಗ್ಗಿಸುವುದರ ಜೊತೆಗೆ ನಿಮ್ಮ ಕೆಲಸದ ಚುರುಕುತನವನ್ನು ನಿಧಾನಗೊಳಿಸುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಚರ್ಮದ ಆರೈಕೆಗಾಗಿ ರೋಸ್ ವಾಟರ್ ಬಳಸಿ
ಸರಿಯಾದ ವಿಶ್ರಾಂತಿ ಮತ್ತು ಪೋಷಣೆಯೊಂದಿಗೆ ನಿಮ್ಮ ಆಯಾಸವು ಪರಿಹಾರವಾಗದಿದ್ದರೆ ಅಥವಾ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಯಿಂದ ಉಂಟಾಗುತ್ತದೆ ಎಂದು ನೀವು ಭಾವಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮ ಆಯಾಸದ ಕಾರಣವನ್ನು ಪತ್ತೆ ಹಚ್ಚಲು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಸಹಾಯಕವಾಗಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:55 pm, Thu, 16 March 23