Rose Water for Skin: ಬೇಸಿಗೆಯಲ್ಲಿ ಚರ್ಮದ ಆರೈಕೆಗಾಗಿ ರೋಸ್ ವಾಟರ್ ಬಳಸಿ

ರೋಸ್ ವಾಟರ್ ಅತ್ಯುತ್ತಮ ಹೈಡ್ರೇಟರ್ ಮತ್ತು ಟೋನರ್ ಆಗಿದ್ದು ನಿಮ್ಮ ತ್ವಚೆಯನ್ನು ಉತ್ತಮವಾಗಿ ಆರೈಕೆ ಮಾಡುತ್ತದೆ. ರೋಸ್ ವಾಟರ್‌ನಿಂದ ಸಿಗುವ ತ್ವಚೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ.

Rose Water for Skin: ಬೇಸಿಗೆಯಲ್ಲಿ ಚರ್ಮದ ಆರೈಕೆಗಾಗಿ ರೋಸ್ ವಾಟರ್ ಬಳಸಿ
ಚರ್ಮದ ಆರೈಕೆಗಾಗಿ ರೋಸ್ ವಾಟರ್
Follow us
ಅಕ್ಷತಾ ವರ್ಕಾಡಿ
|

Updated on: Mar 16, 2023 | 3:00 PM

ರೋಸ್ ವಾಟರ್‌ನ್ನು ಗುಲಾಬಿ ಸಾರಗಳಿಂದ ತಯಾರಿಸಲಾಗುತ್ತದೆ. ಇದು ಅದ್ಭುತ ಸುಗಂಧವನ್ನು ಹೊಂದಿರುವುದರ ಜೊತೆಗೆ ನಿಮ್ಮ ತ್ವಚೆಯನ್ನು ಉತ್ತಮವಾಗಿ ಆರೈಕೆ ಮಾಡುತ್ತದೆ. ಇದು ಹೈಡ್ರೇಟರ್ ಮತ್ತು ಟೋನರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ರೋಸ್ ವಾಟರ್ ಎಲ್ಲಾ ಪ್ರಕಾರದ ಚರ್ಮಗಳಿಗೂ ಸೂಕ್ತವಾಗಿದ್ದು, ಚರ್ಮವನ್ನು ಹೈಡ್ರೇಟಿಕರಿಸಿ ತ್ವಚೆಗೆ ಹೊಳಪನ್ನು ನೀಡುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುವುದರೊಂದಿಗೆ ತಲೆ ಸ್ನಾನ ಮಾಡಿದ ನಂತರ ರೋಸ್ ವಾಟರ್‌ನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಹೊರ ಪೊರೆಯನ್ನು ಮುಚ್ಚಲು ಸಹಾಯ ಮಾಡುತ್ತದೆ ಹಾಗೂ ಕೂದಲಿಗೆ ಹೊಳಪನ್ನು ನೀಡುತ್ತದೆ.

ತ್ವಚೆಯ ಆರೈಕೆಗಾಗಿ ರೋಸ್ ವಾಟರ್‌ನ ಪ್ರಯೋಜನಗಳು:

ಮೇಕಪ್ ರಿಮೂವರ್:

ರೋಸ್ ವಾಟರ್‌ನ್ನು ಮೇಕಪ್ ರಿಮೂವರ್ ಆಗಿ ಕೂಡಾ ಬಳಸಲಾಗುತ್ತದೆ. ರೋಸ್ ವಾಟರ್‌ನ ನೈಸರ್ಗಿಕ ಸಂಕೋಚಕ ಗುಣಲಕ್ಷಣಗಳು ಮತ್ತು ಅದರ ಪೋಷಣೆ ಮತ್ತು ಜಲಸಂಚಯನ ಗುಣಲಕ್ಷಣಗಳು ವಿಶೇಷವಾಗಿ ಒಣಚರ್ಮದ ಮೇಕಪ್‌ನ್ನು ನಿಧಾನವಾಗಿ ಮತ್ತು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಹೈಡ್ರೇಷನ್ ಮತ್ತು ನೈಸರ್ಗಿಕ ಟೋನರ್:

ರೋಸ್ ವಾಟರ್ ತ್ವಚೆಯನ್ನು ಹೈಡ್ರೇಟಿಕರಿಸುತ್ತದೆ ಮತ್ತು ತ್ವಚೆಯ ಆರೈಕೆಗಾಗಿ ಇದನ್ನು ಸೀರಮ್ ಮತ್ತು ಟೋನರ್ ರೂಪದಲ್ಲೂ ಬಳಸಲಾಗುತ್ತದೆ. ಇದು ಚರ್ಮದಿಂದ ಹೆಚ್ಚುವರಿ ಎಣ್ಣೆ ಮತ್ತು ಕೊಳೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ ಹಾಗೂ ತ್ವಚೆಯನ್ನು ನಯವಾಗಿ ಆರೋಗ್ಯಕರವನ್ನಾಗಿ ಮಾಡುತ್ತದೆ.

ಚರ್ಮವನ್ನು ರಕ್ಷಣೆ ಮಾಡುತ್ತದೆ:

ರೋಸ್ ವಾಟರ್ ಚರ್ಮದ ತಡೆಗೋಡೆಯನ್ನು ಬಲಪಡಿಸುತ್ತದೆ ಮತ್ತು ಧೂಳು ಹಾಗೂ ಮಾಲಿನ್ಯಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

ಚರ್ಮದ ಕಿರಿಕಿರಿಯನ್ನು ಶಮನಗೊಳಿಸುತ್ತದೆ:

ರೋಸ್ ವಾಟರ್ ಉರಿಯೂತ ವಿರೋಧಿ ಲಕ್ಷಣವನ್ನು ಹೊಂದಿದೆ. ಇದರ ರೋಸಾಸಿಯಾ ಅಂಶ ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ವಯಸ್ಸಿನ ಆಧಾರದ ಮೇಲೆ ಬಾಯಿಯ ಆರೋಗ್ಯ ಕಾಪಾಡಲು ತಜ್ಞರು ನೀಡಿರುವ ಸಲಹೆ ಇಲ್ಲಿದೆ

ವಯಸ್ಸಾಗುವಿಕೆಯ ವಿರೋಧಿ ಗುಣಲಕ್ಷಣಗಳು:

ರೋಸ್ ವಾಟರ್‌ನ್ನು ಹಲವಾರು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ರೊಸ್ ವಾಟರ್ ಮೊಡವೆಗಳು, ಕಪ್ಪು ಕಲೆಗಳು, ಸುಕ್ಕುಗಳನ್ನು ಹಾಗೂ ತ್ವಚೆಯನ್ನು ವಯಸ್ಸಾದಂತೆ ಕಾಣುವುದನ್ನು ತಡೆಗಟ್ಟುತ್ತದೆ.

ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ:

ರೋಸ್ ವಾಟರ್ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದ ಗಾಯಗಳನ್ನು ವೇಗವಾಗಿ ವಾಸಿ ಮಾಡಲು ಸಹಾಯ ಮಾಡುತ್ತದೆ.

ಒತ್ತಡವನ್ನು ಶಮನ ಮಾಡುತ್ತದೆ:

ನಿಮ್ಮ ಮನಸ್ಸು ಮತ್ತು ದೇಹದಲ್ಲಿ ಉಂಟಾಗುವ ಎಲ್ಲಾ ಒತ್ತಡ ಮತ್ತು ಉದ್ವೇಗಗಳನ್ನು ತಡೆಯಲು ರೋಸ್ ವಾಟರ್ ಬಳಸಬಹುದು. ರೋಸ್ ವಾಟರನ್ನು ಕುತ್ತಿಗೆ, ಮಣಿಕಟ್ಟು, ಕಿವಿಯ ಹಿಂದೆ ಸಿಂಪಡಿಸುವ ಮೂಲಕ ಅದರ ಸಿಹಿ ಸುಗಂಧವು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ