ಆರ್ಥಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಮಹಿಳೆ ಸ್ವಾತಂತ್ರ್ಯವಾಗಿದ್ದಾಳ? ಮಹಿಳೆಯರಿಗೆ ಕಿವಿ ಮಾತು

ಮಹಿಳಾ ಹಕ್ಕು ಮತ್ತು ಜೀವನದಲ್ಲಿ ಮಹಿಳೆಯರು ಎದುರಿಸುವ ಕೆಲವು ಸಮಸ್ಯೆಗಳ ಬಗ್ಗೆ ಯೋಗ ತಜ್ಞೆ ಕಮಲಾ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ.

ಆರ್ಥಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಮಹಿಳೆ ಸ್ವಾತಂತ್ರ್ಯವಾಗಿದ್ದಾಳ? ಮಹಿಳೆಯರಿಗೆ ಕಿವಿ ಮಾತು
Women rightsImage Credit source: vecteezy
Follow us
ನಯನಾ ಎಸ್​ಪಿ
|

Updated on:Mar 16, 2023 | 4:19 PM

ಮಾರ್ಚ್ 8 ರಂದು ನಾವು ಅಂತಾರಾಷ್ಟ್ರೀಯ ಮಹಿಳಾ (International Women’s Day) ದಿನವನ್ನು ಆಚರಿಸುತ್ತೇವೆ. ನಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ (Women) ಸಾಧನೆಗಳನ್ನು ಆಚರಿಸಲು ಈ ದಿನವನ್ನು ವಿಶೇಷವಾಗಿ ಸಮರ್ಪಿಸಲಾಗಿದೆ. ಪ್ರಪಂಚದಾದ್ಯಂತ ಕೆಲವು ಸ್ಥಳಗಳಲ್ಲಿ ಮರೆತುಹೋದ ಮಹಿಳೆಯ ಹಕ್ಕುಗಳು (Women Rights) ಮತ್ತು ಲಿಂಗ ಸಮಾನತೆಯ (Gender Equality) ಕಡೆಗೆ ಗಮನವನ್ನು ತರಲು ಇದು ಸಹಾಯ ಮಾಡುತ್ತದೆ. ಇದೀಗ ಮಹಿಳಾ ಹಕ್ಕು ಮತ್ತು ಜೀವನದಲ್ಲಿ ಮಹಿಳೆಯರು ಎದುರಿಸುವ ಕೆಲವು ಸಮಸ್ಯೆಗಳ ಬಗ್ಗೆ ಯೋಗ ತಜ್ಞೆ ಕಮಲಾ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ.

ಇಂದಿನ ಮಹಿಳೆಗೆ ಏನು ಬೇಕು? ತಂದೆಯು ಕುಟುಂಬದ ಮುಖ್ಯಸ್ಥನಾಗಿದ್ದರೆ, ತಾಯಿ ಏನು ಎಂದು ಹೇಳುವ ಬಹಳ ಪ್ರಸಿದ್ಧವಾದ ಮಾತು ಇದೆ. ತಾಯಿಯನ್ನು ಕುಟುಂಬದ ಕುತ್ತಿಗೆ ಎಂದು ಹೇಳುತ್ತಾರೆ. ಏಕೆಂದರೆ ಕುತ್ತಿಗೆ ತಿರುಗಿದ್ದಂತೆ ತಲೆಯು ತಿರುಗುತ್ತದೆ. ಕುತ್ತಿಗೆಯ ಆಸರೆ ಇಲ್ಲದೆ ತಲೆಗೆ ಏನು ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಆಧುನಿಕ ಕುಟುಂಬಗಳಲ್ಲಿ ನಾವು ಹೆಚ್ಚಾಗಿ ಪಿತೃಪ್ರಭುತ್ವದ ನೀತಿಯನ್ನು ಅನುಸರಿಸುತ್ತಾರೆ ಎಂದು ನಂಬಲಾಗಿದೆ. ಆದರೆ ಪಿತೃಪ್ರಭುತ್ವದ ವ್ಯವಸ್ಥೆಯನ್ನು ನಿಜವಾಗಿಯೂ ಹೆಚ್ಚಿನ ಕುಟುಂಬಗಳು ಅನುಸರಿಸುತ್ತಿಲ್ಲ ಎಂಬುದು ವಾಸ್ತವ. ಒಂದು ಕುಟುಂಬದಲ್ಲಿ ಪುರುಷ ಮತ್ತು ಮಹಿಳೆಯರ ನಡುವೆ ಸಾಕಷ್ಟು ಲಿಂಗ ಸಮಾನತೆ ಇದೆ.

ಆದರೆ ಮಹಿಳೆಯು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿಯೂ ಕೆಲಸ ಮಾಡಬೇಕು ಎಂಬ ನಿರೀಕ್ಷೆಯಿರುವುದರಿಂದ ನಾವು ಇಂದಿಗೂ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ಎರಡರ ಜವಾಬ್ದಾರಿಯನ್ನುಆಕೆ ಹೊರುವುದರ ಜೊತೆಗೆ ಮಹಿಳೆಗೆ ಎದುರಾಗುವ ಮತ್ತೊಂದು ದೊಡ್ಡ ಜವಾಬ್ದಾರಿ ಎಂದರೆ ಮಗುವಿಗೆ ಜನ್ಮ ನೀಡುವುದು. ಜೀವನದ ಈ ಹಂತಗಳು ಅವಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ತೀವ್ರ ಪರಿಣಾಮ ಬೀರುತ್ತವೆ.

ಮಹಿಳೆಯ ಆರ್ಥಿಕ ಸ್ಥಿತಿಯನ್ನು ಸಹ ನಾವು ಮರೆಯಬಾರದು. ಹಣಕಾಸಿನ ವಿಚಾರದಲ್ಲಿ ಕೂಡ ಮಹಿಳೆ ಕಷ್ಟಗಳನ್ನು ಎದುರಿಸುತ್ತಾಳೆ. ಈ ವಿಚಾರದಲ್ಲಿ ತನ್ನ ಗೌರವ ಮತ್ತು ಘನತೆಯನ್ನು ಕಳೆದುಕೊಳ್ಳದಿರುವುದು ಆಕೆಯ ಮುಖ್ಯ ಉದ್ದೇಶವಾಗಿರುತ್ತದೆ. ಇಂದು ಮಹಿಳೆ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಆರೋಗ್ಯವಾಗಿರಲು ಕೆಲವು ಮುಖ್ಯವಾದ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು.

  • ಸ್ವತಂತ್ರವಾಗಿರಬೇಕು

ಆರ್ಥಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಮಹಿಳೆ ಸ್ವಾತಂತ್ರ್ಯವಾಗಿರಬೇಕು. ಒಬ್ಬ ವ್ಯಕ್ತಿಯು ನಿಮ್ಮ ಭಾವನಾತ್ಮಕ ಸಂತೋಷವನ್ನು ನೀಡಬೇಕೆಂದು ನೀವು ಯಾವಾಗಲೂ ನಿರೀಕ್ಷಿಸುತ್ತಿದ್ದರೆ ಬಹುಶಃ ಆತನ ಮೇಲೆ ಭಾವನಾತ್ಮಕವಾಗಿ ಅವಲಂಬಿತರಾಗಿದ್ದೀರಿ ಎಂದು ಹೇಳಬಹುದು. ನಿಮ್ಮ ವಾಹನವನ್ನು ನೀವು ಚಲಾಯಿಸಿದರೆ ಮಾತ್ರ ನಿಮ್ಮ ಗುರಿಯನ್ನು ನೀವು ತಲುಪಬಹುದು. ಹಾಗೆಯೆ ನಿಮ್ಮ ಜೀವನದ ಮುಖ್ಯ ಪಾತ್ರ ನೀವಾಗಿರಬೇಕು, ಬೇರೆಯವರ ಮೇಲೆ ಅವಲಂಬಿತರಾದರೆ ನೀವೆಂದೂ ಸಂತೋಷದಿಂದಿರಲು ಸಾಧ್ಯವಿಲ್ಲ. ನಿಮ್ಮ ಸಂತೋಷಕ್ಕೆ ನೀವು ಯಾವ ಹೇಜೆಯನ್ನು ಬೇಕಾದರೂ ಇಡಲು ಸಿದ್ಧರಿರಬೇಕು.

ನೀವು ನಿಮ್ಮ ಸಂತೋಷವನ್ನು ಬೇರೆ ಯವರ ಕೈಯಲ್ಲಿಟ್ಟರೆ, ನೀವು ನಿರಾಶರಾಗುವುದು ಖಂಡಿತ. ಇದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀಳುತ್ತದೆ. ಹಾಗೆಯೆ ನೀವು ನಿಮ್ಮ ಪತಿ, ತಂದೆ ಅಥವಾ ಸಹೋದರನನ್ನು ನೂರು ಜನರ ಹತ್ತಿರ ದೂಷಿಸಿದರೆ ನಿಮ್ಮ ಮನಸ್ಸಿಗೆ ಆದ ನೋವು ಸರಿ ಹೋಗುವುದೇ? ಅಥವಾ ನಿಮಗೆ ಆದ ನೋವನ್ನು ನೀವಾಗಿ ನೀವು ಹೇಳದಿದ್ದರೆ ಅದು ನೋವುಂಟು ಮಾಡಿದವರಿಗೆ ಹೇಗೆ ಅರ್ಥವಾಗುತ್ತದೆ? ಹಾಗಾಗಿ ನಿಮ್ಮ ಮಾತಿನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಡಿ, ನಿಮಗೆ ಅನಿಸಿದ್ದನ್ನು ಮುಕ್ತವಾಗಿ ಮಾತನಾಡಿ.

  • ಪರಸ್ಪರ ಅವಲಂಬಿತರಾಗಿ

ನಾವು ಮಹಿಳೆಯರು ತಾಯಿ, ಮಡದಿ, ಸಹೋದರಿ, ಮಗಳು ಹೀಗೆ ಹಲವು ಪತ್ರಗಳನ್ನು ನಿಭಾಯಿಸುತ್ತೇವೆ. ನಾವು ಖಂಡಿತವಾಗಿಯೂ ನಮ್ಮ ಜೀವನದಲ್ಲಿರುವ ಪುರುಷರ ಬೆಳವಣಿಗೆ ಕಂಡು ಸಂತೋಷಪಡುತ್ತೇವೆ. ಬಹುಷಃ ತನ್ನ ಬೆಳವಣಿಗೆಯನ್ನು ನೋಡಿ ಒಬ್ಬ ಪುರುಷ ಸಂತೋಷ ಪಡುವುದಕ್ಕಿಂತ ಹೆಚ್ಚು ನಾವು ಮಹಿಳೆಯರು ಅವರನ್ನು ಗೌರವಿಸುತ್ತೇವೆ ಹಾಗು ಸಂಭ್ರಮಿಸುತ್ತೇವೆ. ಹಾಗಾಗಿ ನಾವು ಪುರುಷರೊಂದಿಗೆ ಸ್ಪರ್ಧಿಸುವ ಅವಶ್ಯಕತೆಯಿಲ್ಲ. ಇಂದಿನ ಪೀಳಿಗೆಯು ಹೆಚ್ಚಾಗಿ ಸ್ಪರ್ಧೆಯ ಮೇಲೆ ಕೇಂದ್ರೀಕರಿಸುತ್ತಿದೆ, ಇದು ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ, ಆದ್ದರಿಂದ ಪುರುಷ ಮತ್ತು ಮಹಿಳೆ ಪರಸ್ಪರ ಅವಲಂಬಿತರಾಗಿರುವುದು ಸುಖ ಜೀವನದ ಪ್ರಮುಖ ಅಂಶವಾಗಿದೆ.

  • ಆರ್ಥಿಕ ಸುರಕ್ಷತೆ

ನಿಮ್ಮ ಹೆಸರಿನಲ್ಲಿ ಆಸ್ತಿ ಇದೆಯೇ? ಮ್ಯೂಚುವಲ್ ಫಂಡ್ ಇದೆಯೇ? ನೀವು ಈ ಲೈಫ್ ಇಂಶೂರೆನ್ಸ್, ವೈದ್ಯಕೀಯ ಇಂಶೂರೆನ್ಸ್ ಅನ್ನು ಹೊಂದಿದ್ದೀರಾ? ನಿಮ್ಮ ಹೆಸರಿನಲ್ಲಿ ಪಿಂಚಣಿ ಇದೆಯೇ? ಹೆಚ್ಚಿನ ಮಹಿಳೆಯರಿಗೆ ಇವುಗಳ ಬಗ್ಗೆ ಏನು ತಿಳಿದಿರುವುದಿಲ್ಲ. ನಿಮ್ಮ ಸ್ವಂತ ತೆರಿಗೆಗಳನ್ನು ನೀವು ಸಲ್ಲಿಸುತ್ತೀರಾ? ರಿಟರ್ನ್ ಕ್ಲೈಮ್ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದೆಯೇ? ಈ ಪ್ರಶ್ನೆಗಳಿಗೆ ನಿಮಗೆ ಉತ್ತರ ತಿಳಿದಿಲ್ಲವೆಂದರೆ, ಇದರ ಅರ್ಥ ನೀವು ನಿಮ್ಮ ಜೀವನವನ್ನು ಆರ್ಥಿಕವಾಗಿ ಚೆನ್ನಾಗಿ ಯೋಜಿಸಿಲ್ಲ ಮತ್ತು ನೀವು ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಭವಿಷ್ಯದ ಯೋಜನೆಗಳಿಗಾಗಿ ಒಬ್ಬ ಪುರುಷನ ಮೇಲೆ ಅವಲಂಬಿತರಾಗಿರುತ್ತೀರಿ. ಮಹಿಳೆಯಾಗಿ, ನೀವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಆರ್ಥಿಕವಾಗಿ ಸುರಕ್ಷಿತರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ನೀವು ಹತ್ತರಿಂದ ಹದಿನೈದು ಲಿಸ್ಟ್ ತಯಾರಿಸಿ, ನಿಮ್ಮ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸಿ. ನಿಮ್ಮ ಜೀವನವನ್ನು ನಿಮ್ಮ ಕೈಯಲ್ಲಿರುವುದು ಅಂದರೆ ಏನು ಎಂಬುದನ್ನು ಅನುಭವಿಸಿ.

ಇದನ್ನು ಓದಿ: ಟ್ರಾವೆಲ್ ಮಾಡುವಾಗ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತದೆಯೇ? ಇದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ

  • ಸ್ಪಷ್ಟವಾದ ಗುರಿ

ಸ್ಪಷ್ಟವಾದ ಜೀವನದ ಗುರಿ ನಿಮ್ಮದಾಗಲಿ. ಮಹಿಳೆಯಾಗಿ ನೀವು ಜೀವನದ ಗುರಿಗಳನ್ನು ಹೊಂದಿರಬೇಕು. ನಿಮ್ಮ ಅಲ್ಪಾವಧಿಯ ಗುರಿಯು ನೀವು ತ್ವರಿತವಾಗಿ ಸಾಧಿಸುವಂತದ್ದಾಗಿರಬೇಕು. ಇದು ನಿಮ್ಮ ದೇಹ, ಮನಸ್ಸು, ವೃತ್ತಿ ಅಥವಾ ವಯಕ್ತಿಕ ಸಂಭಂಧಗಳಿಗೆ ಸಂಬಂಧಪಟ್ಟ ಗುರಿಗಳಾಗಿರಬಹುದು. ನಿಮ್ಮ ದೀರ್ಘಾವಧಿಯ ಗುರಿಗಳ ಪಟ್ಟಿಯಲ್ಲಿ, ನಿಮ್ಮ ಜೀವನದ ಉದ್ದೇಶವೇನು, ನಿಮಗೆ ಯಾವುದರಿಂದ ಸಂತೋಷ ಸಿಗುತ್ತದೆ, ಇತ್ಯಾದಿ. ನಿಮ್ಮ ಜೀವನದ ಗುರಿಗಳನ್ನು ನೀವು ಯಾವಾಗಲೂ ಸ್ಪಷ್ಟವಾಗಿ ತಿಳಿದಿರುವಾಗ. ಈ ಪಟ್ಟಿಯನ್ನು ಗೋಡೆಯ ಮೇಲೆ ಅಂಟಿಸಿ ಪ್ರತಿ ದಿನ ಅದನ್ನು ನೋಡಿ ಮಾತು ಅನುಸರಿಸಲು ಪ್ರಯತ್ನಿಸಿ. ನೀವು ಆರೋಗ್ಯವಾಗಿರಬೇಕು ಎಂಬ ಗುರಿಯನ್ನು ಹೊಂದಿದ್ದರೆ ಯೋಗ ಮಾಡಿ. ಹೆಚ್ಚು ಸೇವ್ ಮಾಡಬೇಕು ಅಂದುಕೊಂಡರೆ ಖರ್ಚು ಕಡಿಮೆ ಮಾಡಿ. ಇವುಗಳು ನೀವೇ ಸ್ವಂತ ಇಚ್ಚಾ ಶಕ್ತಿಯಿಂದ ಮಾಡಬೇಕು, ಬೇರೆಯಾರವು ನಿಮಗೆ ಹೇಳುವಂತೆ ಆಗಬಾರದು.

  • ಕುಟುಂಬವನ್ನು ಮೀರಿ ನಿಮ್ಮ ಗುರುತೇನು?

ಹೆಚ್ಚಿನ ಸಮಯ ನಿಮ್ಮನ್ನು ಯಾರೊಬ್ಬರ ಮಗಳು, ಸಹೋದರಿ, ಹೆಂಡತಿ ಅಥವಾ ತಾಯಿ ಎಂದು ಉಲ್ಲೇಖಿಸಿದರೆ, ಇದು ನೀವು ಸಂತೋಷಪಡಬೇಕಾದ ಸಂಗತಿಯಲ್ಲ. ಮದುವೆಯ ನಂತರ ಹೆಚ್ಚಿನ ಮಹಿಳೆಯರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಇದು ಯಾವ ಅರ್ಥವನ್ನು ನೀಡುತ್ತದೆ, ನನಗೆ ಇನ್ನೂ ಅರ್ಥವಾಗಿಲ್ಲ. ಇದು ಪಿತೃಪ್ರಭುತ್ವದ ನೀತಿ ಆಗಿದ್ದು ನಾವೆಲ್ಲರೂ ಇದನ್ನು ಬೆಂಬಲಿಸುತ್ತಿದ್ದೇವೆ. ನೀವು ನಿಮ್ಮದೇ ಆದ ಹೆಸರನ್ನು ಹೊಂದಿರಬೇಕು. ನೀವು ಮದುವೆಯಾದರು ನೀವು ನಿಮ್ಮ ಹೆಸರನ್ನು ಬದಲಾಯಿಸಬೇಕಾಗಿಲ್ಲ ಏಕೆಂದರೆ ನೀವು ಮದುವೆಯ ಮೊದಲು ಹಲವು ವರ್ಷಗಳಿಂದ ನೀವು ಅದೇ ಹೆಸರಲ್ಲಿ ಬದುಕು ಕಟ್ಟಿಕೊಂಡಿರುತ್ತೀರಿ. ನಿಮ್ಮನ್ನು ನಿರಂತರವಾಗಿ ಯಾರೊಬ್ಬರ ಹೆಂಡತಿ, ತಾಯಿ ಎಂದು ಗುರುತಿಸುವ ಬದಲು ನೀವು ಯಾರೆಂದು ಮತ್ತು ನೀವು ಏನು ಮಾಡುತ್ತಿದ್ದೀರಿ ಎಂದು ಸಮಾಜ ಗುರುತಿಸಬೇಕು ಎಂಬುದನ್ನು ನೆನಪಿಡಿ. ಅದಕ್ಕಾಗಿ, ನಿಮ್ಮ ವ್ಯಕ್ತಿತ್ವ, ಕುಶಲತೆ, ಹಾಗು ನಿಮ್ಮ ಜೀವನವನ್ನು ರೂಪಿಸುವ ಕಡೆ ಗಮನ ಹರಿಸಿ.

ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ  ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ.  ಗರ್ಭಧಾರಣೆ, ಗರ್ಭಿಣಿಯರ ಆರೈಕೆ, ಗರ್ಭಿಣಿಯರು ಎಂತಹ ಆಹಾರ ಸೇವಿಸಬೇಕು, ನ್ಯಾಚ್ಯುರಲ್ ಬರ್ಥಿಂಗ್ ಕುರಿತ   ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

Published On - 1:19 pm, Thu, 16 March 23

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ