ಆಯಾಸದ ನಂತರ ದೇಹದ ಶಕ್ತಿಯನ್ನು ಮರಳಿ ಪಡೆಯಲು ಈ ಸಿಂಪಲ್​​ ಟಿಪ್ಸ್​​​ ಫಾಲೋ ಮಾಡಿ

ಅನೇಕ ಕಾರಣಗಳಿಂದ ದೇಹದಲ್ಲಿ ಆಯಾಸ ಉಂಟಾಗುತ್ತದೆ. ಈ ಆಯಾಸವನ್ನು ಕೆಲವೊಂದು ಜೀವನಶೈಲಿಯ ಬದಲಾವಣೆಯ ಮೂಲಕ ನಿವಾರಿಸಬಹುದು.

ಆಯಾಸದ ನಂತರ ದೇಹದ ಶಕ್ತಿಯನ್ನು ಮರಳಿ ಪಡೆಯಲು ಈ ಸಿಂಪಲ್​​ ಟಿಪ್ಸ್​​​ ಫಾಲೋ ಮಾಡಿ
ಸಾಂದರ್ಭಿಕ ಚಿತ್ರImage Credit source: HSS
Follow us
ಅಕ್ಷತಾ ವರ್ಕಾಡಿ
|

Updated on:Mar 16, 2023 | 4:02 PM

ಕೆಲಸದ ದಣಿವು, ಒತ್ತಡ, ಆರೋಗ್ಯದಲ್ಲಿನ ಏರುಪೇರು ಇವೆಲ್ಲವೂ ಕೂಡಾ ದೇಹದ ಆಯಾಸಕ್ಕೆ ಕಾರಣವಾಗುತ್ತದೆ. ಆಯಾಸವು ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಆಯಾಸವು ನಿಮ್ಮ ಕೆಲವೊಂದು ಅಭ್ಯಾಸಗಳು ಅಥವಾ ದಿನಚರಿಗಳಿಂದ ಉಂಟಾಗುತ್ತದೆ. ದೈಹಿಕ ಪರಿಶ್ರಮ, ಕಳಪೆ ಮಟ್ಟದ ಆಹಾರ ಸೇವನೆ, ಭಾವನಾತ್ಮಕ ಒತ್ತಡ, ನಿದ್ರೆಯ ಕೊರತೆ ಇವೆಲ್ಲವೂ ಆಯಾಸಕ್ಕೆ ಕಾರಣವಾಗಿದೆ. ಇದು ದೇಹದ ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಈ ಆಯಾಸ ನಿಮ್ಮನ್ನು ದೈಹಿಕವಾಗಿ ಕುಗ್ಗಿಸುವುದರ ಜೊತೆಗೆ ನಿಮ್ಮ ಕೆಲಸದ ಚುರುಕುತನವನ್ನು ನಿಧಾನಗೊಳಿಸುತ್ತದೆ.

ಆಯಾಸದ ರೋಗಲಕ್ಷಣಗಳು:

  • ದೀರ್ಘಕಾಲದ ಆಯಾಸ ಅಥವಾ ನಿದ್ರಾಹೀನತೆ
  • ತಲೆನೋವು
  • ತಲೆತಿರುಗುವಿಕೆ
  • ಸ್ನಾಯುಗಳ ನೋವು
  • ಮನಸ್ಥಿತಿಯಲ್ಲಿನ ಏರುಪೇರು
  • ಏಕಾಗ್ರತೆಯ ಕೊರತೆ
  • ಕಡಿಮೆ ಪ್ರೇರಣೆ
  • ಪ್ರತಿಕ್ರಿಯಿಸುವಲ್ಲಿ ನಿಧಾನಗತಿ

ಇದನ್ನೂ ಓದಿ: ಬೇಸಿಗೆಯಲ್ಲಿ ಚರ್ಮದ ಆರೈಕೆಗಾಗಿ ರೋಸ್ ವಾಟರ್ ಬಳಸಿ

 ಕೆಲವು ಸರಳ ಜೀವನಶೈಲಿ ಬದಲಾವಣೆಗಳೊಂದಿಗೆ ದೇಹಶಕ್ತಿಯನ್ನು ಹೆಚ್ಚಿಸುವ ವಿಧಾನಗಳು ಇಲ್ಲಿವೆ

  • ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ
  • ವ್ಯಾಯಮ ಮಾಡಿ
  • ಸಮತೋಲಿತ ಆಹಾರವನ್ನು ಸೇವನೆ ಮಾಡಿ
  • ಯಾವಾಗಲೂ ಹೈಡ್ರೇಟೆಡ್ ಆಗಿರಿ
  • ಒತ್ತಡವನ್ನು ಕಡಿಮೆ ಮಾಡಿ
  • ಆಗಾಗ್ಗೆ ವಿರಾಮವನ್ನು ಪಡೆದುಕೊಳ್ಳಿ
  • ಕೆಫೀನ್ ಮತ್ತು ಆಲ್ಕೋಹಾಲ್‌ಗಳನ್ನು ಮಿತಿಗೊಳಿಸಿ

ಸರಿಯಾದ ವಿಶ್ರಾಂತಿ ಮತ್ತು ಪೋಷಣೆಯೊಂದಿಗೆ ನಿಮ್ಮ ಆಯಾಸವು ಪರಿಹಾರವಾಗದಿದ್ದರೆ ಅಥವಾ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಯಿಂದ ಉಂಟಾಗುತ್ತದೆ ಎಂದು ನೀವು ಭಾವಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮ ಆಯಾಸದ ಕಾರಣವನ್ನು ಪತ್ತೆ ಹಚ್ಚಲು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಸಹಾಯಕವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:55 pm, Thu, 16 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ