AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಸಂದರ್ಭದಲ್ಲಿ ಆರೋಗ್ಯ ಜಾಗೃತೆಗಳು: ಡಾ ರವಿಕಿರಣ ಪಟವರ್ಧನ ಶಿರಸಿ

ಚುನಾವಣೆ ಯಾವಾಗಲು ಬೇಸಿಗೆಯಲ್ಲಿ ಬರುತ್ತದೆ ಹಾಗಾಗಿ ಬಿಸಿಲಿನಿಂದ ಆಗುವಂಥ ಎಲ್ಲ ತೊಂದರೆಗಳ ಮುಂಜಾಗ್ರತೆ ಇಟ್ಟುಕೊಳ್ಳುವುದು ಅವಶ್ಯ ಇದರಲ್ಲಿ ಮುಖ್ಯವಾಗಿ ನೀರು.

ಚುನಾವಣಾ ಸಂದರ್ಭದಲ್ಲಿ ಆರೋಗ್ಯ ಜಾಗೃತೆಗಳು: ಡಾ ರವಿಕಿರಣ ಪಟವರ್ಧನ ಶಿರಸಿ
ಡಾ ರವಿಕಿರಣ ಪಟವರ್ಧನ ಶಿರಸಿ
ಅಕ್ಷತಾ ವರ್ಕಾಡಿ
|

Updated on:Mar 19, 2023 | 5:47 PM

Share

ಇನ್ನೇನು ವಿಧಾನಸಭಾ ಚುನಾವಣೆ ಬಾಗಿಲು ತಟ್ಟುತ್ತದೆ ಚುನಾವಣಾ ಪೂರ್ವ ತಯಾರಿಗಳು ಅತಿ ವೇಗದಿಂದ ಸಾಗಿದೆ ರಾಜಕೀಯ ವ್ಯಕ್ತಿಗಳು ಪೊಲೀಸ್ ಇಲಾಖೆ ಹಾಗೂ ಚುನಾವಣೆಗಾಗಿ ಈಗಾಗಲೇ ಸೂಚಿತವಾಗಿರುವಂತಹ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು, ಪತ್ರಕರ್ತರು, ಆರೋಗ್ಯ ವಿಷಯವಾಗಿ ಕೆಲವು ಪೂರ್ವ ತಯಾರಿಗಳನ್ನು ಮಾಡಿಟ್ಟುಕೊಳ್ಳುವುದು ಉತ್ತಮ. ಚುನಾವಣೆ ಯಾವಾಗಲು ಬೇಸಿಗೆಯಲ್ಲಿ ಬರುತ್ತದೆ ಹಾಗಾಗಿ ಬಿಸಿಲಿನಿಂದ ಆಗುವಂಥ ಎಲ್ಲ ತೊಂದರೆಗಳ ಮುಂಜಾಗ್ರತೆ ಇಟ್ಟುಕೊಳ್ಳುವುದು ಅವಶ್ಯ ಇದರಲ್ಲಿ ಮುಖ್ಯವಾಗಿ ನೀರು. ಸಾಧ್ಯವಾದಷ್ಟು ತಮ್ಮ ಮನೆಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ಹಲವು ಬಾರಿ ನೀರಿನ ಕಾರಣವೇ ಅನಾರೋಗ್ಯ ಸಾಧ್ಯವಾಗಬಹುದು. ಮೂಲಸ್ಥಳದಿಂದ ಹೊರಡುವಾಗ ಸಕ್ಕರೆ, ಉಪ್ಪು, ನೀರು ಸೇವಿಸಿ ಹೊರಡುವ ರೂಢಿ ಈಗಿಂದಲೇ ರೂಢಿಸಿ. ಹೆಚ್ಚಿನ ಉಪ್ಪು ಸೇವನೆ ಆರೋಗ್ಯಕ್ಕೆ ಉತ್ತಮ ಅಲ್ಲ ಆದರೆ ದೇಹದಲ್ಲಿ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳಲು ಅವಶ್ಯಕ.

ಒಂದು ಲೀಟರ್ ನೀರಿಗೆ 20 ಗ್ರಾಂನಷ್ಟು ಹವೀಜ (ಕೊತ್ತಂಬರಿ ಬೀಜ,ಧನಿಯಾ) ಪುಡಿಯನ್ನು ಹಾಕಿ 15ರಿಂದ 20 ನಿಮಿಷಗಳವರೆಗೆ ಕುದಿಸಿ, ಅದಕ್ಕೆ 6 ಚಮಚ ಸಕ್ಕರೆ 2 ಚಮಚದಷ್ಟು ಉಪ್ಪನ್ನು ಹಾಕಿ ಇದನ್ನ ಆಗಾಗ ಸೇವಿಸಬಹುದು. 3-4 ಬಾಟಲಿ ನೀರು ತೆಗೆದುಕೊಂಡು ಹೋಗುವುದು ತಪ್ಪಿಸಿ 2 ಲೀಟರ್ ನಿಂದ ಅವಶ್ಯಕತೆಯನ್ನು ಪೂರೈಸುವಂತೆ ಮಾಡುತ್ತದೆ. ಇದು ಮಾಡುವ ವಿಧಾನವನ್ನು ಯೂಟ್ಯೂಟ್​​ನಲ್ಲಿ ಡಾ ರವಿ ಪಟವರ್ಧನ್ ಓ ಆರೆಸ್ ಎಂದು ಹುಡುಕಿದಾಗ ಮಾಹಿತಿ ಲಭ್ಯವಿದೆ. ರಕ್ತದೊತ್ತಡವಿದ್ದವರು ,ಮಧುಮೇಹದ ರೋಗಿಗಳು ಅದರ ತಕ್ಕಹಾಗೆ ಸೂಕ್ತ ಜಾಗ್ರತೆಯನ್ನು ಯೋಚಿಸಿ ಈ ಮೇಲಿನ ಉಪಾಯಗಳನ್ನು ವೈದ್ಯರ ಸಲಹೆ ಮೇರೆಗೆ ಉಪಯೋಗಿಸಿ.

ಇನ್ನು ತಲೆಗೆ ಅಂಪಾಯರ್ ಕ್ಯಾಪನ್ನು ಬಳಸಿ ಅದು ಆದಷ್ಟು ಬಿಳೆ ಬಣ್ಣದ್ದು ಇದ್ದರೆ ಉತ್ತಮ. ಬೇರೆ ಊರುಗಳಿಗೆ ಹೋದಾಗ ಆದಷ್ಟು ಫ್ರಿಝನ, ಎಣ್ಣೆಯಲ್ಲಿ ಕರಿದ, ಅತ್ಯಂತ ಹುಳಿ ಅತ್ಯಂತ ಖಾರದ ಪದಾರ್ಥಗಳನ್ನು ಸೇವಿಸುವುದು ಬೇಡ.ಅಲ್ಲಿ ಹೊಸರುಚಿಯ ಸೇವನೆ ಬೇಡ. ನಿರಂತರ ಔಷಧೋಪಚಾರದವರು ಮೊದಲೇ ಔಷಧಿ ಸಂಗ್ರಹಿಸಿ,ಕೂನೆಯಕ್ಷಣದ ಗಡಿಬಿಡಿಬೇಡ.ಎರಡು ಮೂರುದಿನ ಚುನಾವಣಾ ಕರ್ತವ್ಯದ ವೇಳೆ ಅಲ್ಲಿ ಆಹಾರದ ವ್ಯವಸ್ಥೆ ಇದ್ದರೂ ತಾವು ಮನೆಯಿಂದ ಸಿದ್ದಪಡಿಸಿ ಆಹಾರ ಸಂಗ್ರಹ ಅವಶ್ಯಕ.ಕನಿಷ್ಟ ಬಿಸ್ಕೆಟ್ನ ಆದರೂ ಇರಲಿ. ವಿಶೇಷವಾಗಿ ಮಧುಮೇಹ ರೋಗಿಗಳು ವಿಶೇಷ ಗಮನವಿರಲಿ.ಕರ್ತವ್ಯವೇಳೆ ಸರಿಯಾಗಿ ಆಹಾರ ಸೇವಿಸದೇ ಕೇವಲ ಔಷಧಿ ಸೇವನೆ ತೊಂದರೆಗೆ ಕಾರಣವಾಗಬಹುದು.ಇದರಿಂದ ರಕ್ತದಲ್ಲಿಯ ಸಕ್ಕರೆ ಪ್ರಮಾಣ ಕಡಿಮೆಯಾಗಬಹುದು.

ಇದನ್ನೂ ಓದಿ: ಅನಾರೋಗ್ಯಕರ ಒಸಡು ರಕ್ತಸ್ರಾವಕ್ಕೆ ಕಾರಣವಾಗಿರಬಹುದು; ಇಲ್ಲಿವೆ ನೀವು ಗಮನಿಸಬೇಕಾದ ಅಂಶಗಳು

ಇದೇ ರೀತಿಯ ಒಂದು ಉದಾಹರಣೆಯ ಘಟನೆ ನೆನಪಿಸುತ್ತಾನೆ. ಕೇಂದ್ರ ಸಚಿವರು ಒಂದು ಸಭೆಯಲ್ಲಿ ಮಾತನಾಡುತ್ತಲೇ ಕುಸಿದದ್ದು ಇದು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಆದಂತಹ ಪರಿಣಾಮ. ಆಗ ಸಮಾರಂಭದಲ್ಲಿ ಇಟ್ಟಂತಹ ಒಣಹಣ್ಣು ಅವರಿಗೆ ನೀಡಲಾಯಿತು. ಇದು ಭಾರಿ ಪ್ರಮಾದಕ್ಕೆ ಕಾರಣವಾಗಬಹುದಾಗಿತ್ತು.ಇಂತಹ ಸಂದರ್ಭದಲ್ಲಿ ಸಕ್ಕರೆ ಪುಡಿ ನೀಡುವುದು ಸುರಕ್ಷಿತ.ಕಾರಣ ಒಂದಿಷ್ಟು ಸಕ್ಕರೆ ಪುಡಿ, ಉಪ್ಪು ಇಟ್ಟುಕೊಳ್ಳುವುದು ಇಂತಹ ಸಂದರ್ಭದಲ್ಲಿ ಉತ್ತಮ. ಇದನ್ನು ವಿಶೇಷವಾಗಿ ಈ ಗಣ್ಯ ವ್ಯಕ್ತಿಗಳ ಅಂಗರಕ್ಷಕರು ತಮ್ಮ ಕಿಸೆಯಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳುವುದು ಅವಶ್ಯ. ಗಣ್ಯರಿಗೆ ಗಣ್ಯರಿಗೆ ಏನೇ ತೊಂದರೆ ತಾಪತ್ರೆಯ ಕಂಡರು ಮೊಟ್ಟ ಮೊದಲು ಗಲಿಬಿಲಿ ಕೊಳ್ಳುವವರು ಅಂಗರಕ್ಷಕ ಪಡೆಯ ಸಿಬ್ಬಂದಿ.

ತಮ್ಮ ಸಂಗ್ರಹದಲ್ಲಿ ಸ್ಪಟಿಕ ಅಂದರೆ ಪೊಟಾಷ್ ಆಲ್ಲಂ( alum) ಇರಲಿ.ನಿಯೋಜನೆ ಇರುವ ಸ್ಥಳದ ನೀರು ಮಣ್ಣುಯುಕ್ತ ವಾಗಿದ್ದರೆ ಈ ಸ್ಫಟಿಕದ ಬಳಕೆಯಿಂದ ನೀರು ಶುದ್ಧವಾಗುತ್ತದೆ.ಅಲ್ಲದೇ ಯಾವುದೇ ಕಾರಣಕ್ಕೆ ಗಾಯ ಆಗಿ ರಕ್ತಸ್ರಾವ ಆದರೆ ಈ ಸ್ಫಟಿಕದ ಸ್ವಲ್ಪ ಪುಡಿ ರಕ್ತಸ್ರಾವದ ಭಾಗಕ್ಕೆ ಹಾಕಿದರೆ ರಕ್ತಸ್ರಾವ ತಕ್ಷಣ ನಿಲ್ಲುತ್ತದೆ. ಇನ್ನು ಹಲವು ಅವಶ್ಯಕ ಕ್ರಮಗಳು ಇರಬಹುದು ಆದರೆ ನನ್ನ ಗಮನಕ್ಕೆ ಇರುವ ತೊಂದರೆಗಳ ಸುಲಭದ ಉಪಾಯ ಇದಾಗಿದೆ.

– ಡಾ ರವಿಕಿರಣ ಪಟವರ್ಧನ ಶಿರಸಿ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 3:29 pm, Thu, 16 March 23

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!