Bleeding Gums: ಅನಾರೋಗ್ಯಕರ ಒಸಡು ರಕ್ತಸ್ರಾವಕ್ಕೆ ಕಾರಣವಾಗಿರಬಹುದು; ಇಲ್ಲಿವೆ ನೀವು ಗಮನಿಸಬೇಕಾದ ಅಂಶಗಳು
ಪೌಷ್ಟಿಕತಜ್ಞೆ ನ್ಮಾಮಿ ಅಗರ್ವಾಲ್ ಪ್ರಕಾರ, ದೀರ್ಘಕಾಲದವರೆಗೆ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕೊರತೆಯು ಒಸಡುಗಳಲ್ಲಿನ ರಕ್ತಸ್ರಾವಕ್ಕೆ ಕಾರಣವಾಗಬಹುದು.
ಒಸಡಿನಲ್ಲಿ ರಕ್ತಸ್ರಾವವಾಗುವುದು (Bleeding Gums) ಹಲ್ಲಿನ ನೈರ್ಮಲ್ಯದ (Dental Hygiene) ಕೊರತೆಯ ಪರಿಣಾಮವಾಗಿದೆ. ಆದರೆ ಇದು ನಿಮ್ಮ ಪೋಷಕಾಂಶಗಳ (Vitamins) ಸೇವನೆಗೂ ಸಂಬಂಧಿಸಿದೆ ಎಂದು ನಿಮಗೆ ತಿಳಿದಿದೆಯೇ? ಪೌಷ್ಟಿಕತಜ್ಞೆ ನ್ಮಾಮಿ ಅಗರ್ವಾಲ್ (Nmami Agarwal) ಪ್ರಕಾರ, ದೀರ್ಘಕಾಲದವರೆಗೆ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕೊರತೆಯು ಒಸಡುಗಳಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು. ವಿಟಮಿನ್ ಸಿ ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದ್ದು, ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಜೀವಕೋಶದ ಹಾನಿಯನ್ನು ತಡೆಯುತ್ತದೆ. ವಿಟಮಿನ್ ಕೆ, ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಸಹಾಯಮಾಡುತ್ತದೆ. ಆದ್ದರಿಂದ ನಿಮ್ಮ ಹಲ್ಲಿನ ನೈರ್ಮಲ್ಯವು ಸರಿಯಾಗಿದೆ ಭಾವಿಸಿದರೂ, ಇನ್ನೂ ಒಸಡುಗಳಲ್ಲಿ ರಕ್ತಸ್ರಾವದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಸಿಹಿ ಗೆಣಸು, ಸಾಸಿವೆ ಸೊಪ್ಪು, ಪಾಲಕ್, ಬೆಣ್ಣೆಹಣ್ಣು, ಕಿತ್ತಳೆ, ಮೆಣಸು ಮತ್ತು ಆಮ್ಲಾಗಳಂತಹ ಆಹಾರವನ್ನು ಸೇರಿಸಿ ಎಂದು ಅಗರ್ವಾಲ್ ಶಿಫಾರಸು ಮಾಡುತ್ತಾರೆ.
ಒಸಡಿನಲ್ಲಿ ರಕ್ತಸ್ರಾವ: ವಿಟಮಿನ್ ಸಿ ಮತ್ತು ಕೆ ಸಹಾಯ ಮಾಡುತ್ತದೆ
ಮೇಲೆ ತಿಳಿಸಲಾದ ಎಲ್ಲಾ ಆಹಾರಗಳಲ್ಲಿ ವಿಟಮಿನ್ ಸಿ ಮತ್ತು ಕೆ ಮೂಲಗಳಾಗಿವೆ. ನಿಮ್ಮ ಆಹಾರದಲ್ಲಿ ಅವುಗಳನ್ನು ಸೇರಿಸುವುದರಿಂದ ದೇಹದಲ್ಲಿ ಪೋಷಕಾಂಶಗಳ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಹೀಗಾಗಿ ಒಸಡುಗಳಲ್ಲಿ ರಕ್ತಸ್ರಾವದಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು.
- ನೀವು ದಿನಕ್ಕೆ ಎರಡು ಬಾರಿ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡುವುದನ್ನು ರೂಡಿಸಿಕೊಳ್ಳಿ. ಫ್ಲೋರೈಡ್ ಟೂತ್ಪೇಸ್ಟ್ ಅನ್ನು ಬಳಸಿ. ಇದು ಪ್ಲೇಕ್ ರಚನೆ ಮತ್ತು ಹಲ್ಲಿನ ಕೊಳೆತವನ್ನು ತಡೆಯುತ್ತದೆ.
- ಸಕ್ಕರೆಯ ಆಹಾರಗಳು ಮತ್ತು ಸಿಹಿತಿಂಡಿಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ನಿಮ್ಮ ಆಹಾರದಲ್ಲಿ ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಇದರಿಂದ ನೀವು ಸಾಕಷ್ಟು ಪೋಷಕಾಂಶಗಳನ್ನು ಪಡೆಯುಬಹುದು. ಇದು ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕೊರತೆಯನ್ನು ತಡೆಯುತ್ತದೆ.
- ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಸಮಯೋಚಿತ ಹಲ್ಲಿನ ಚಿಕಿತ್ಸೆ, ಪ್ಲೇಕ್ ಮತ್ತು ಹಲ್ಲುಗಳು ಕೊಳೆಯದಂತೆ ತಡೆಯಬಹುದು. ಇದು ಒಸಡಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ಸರಿಯಾದ ಹಲ್ಲಿನ ನೈರ್ಮಲ್ಯವನ್ನು ಅನುಸರಿಸಲು ಇಂಟರ್ಡೆಂಟಲ್ ಬ್ರಷ್ ಅಥವಾ ಫ್ಲೋಸ್ ಅನ್ನು ಬಳಸಿ. ಇಂಟರ್ಡೆಂಟಲ್ ಟೂತ್ ಬ್ರಷ್ ಮತ್ತು ಫ್ಲೋಸ್ ನಿಮ್ಮ ಹಲ್ಲುಗಳ ನಡುವಿನ ಪ್ರದೇಶಗಳನ್ನು ತಲುಪಬಹುದು ಮತ್ತು ಸರಿಯಾದ ಶುಚಿಗೊಳಿಸುವಿಕೆಯನ್ನು ಸುಲಭಗೊಳಿಸುತ್ತದೆ. ಆರಂಭದಲ್ಲಿ ಇವೆರಡನ್ನೂ ಬಳಸುವುದರಿಂದ ಒಸಡಿನಲ್ಲಿ ಕೊಂಚ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಸಾದಾರಣವಾಗಿ ಇದು ಎರಡು ವಾರಗಳ ನಂತರ ನಿಲ್ಲುತ್ತದೆ.
- ಫ್ಲೋರೈಡ್ ಮೌತ್ ವಾಶ್ ಅನ್ನು ಬಳಸುವುದು ಹಲ್ಲಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುವುದನ್ನು ತಡೆಯಲು ಪರಿಣಾಮಕಾರಿ ಮಾರ್ಗವಾಗಿದೆ. ಇದು ಹಲ್ಲುಗಳ ನಡುವೆ ಮತ್ತು ಮೇಲ್ಮೈಯಲ್ಲಿ ಪ್ಲೇಕ್ ಅನ್ನು ನಿರ್ಮಿಸುವುದನ್ನು ತಡೆಯುತ್ತದೆ.
ಇದನ್ನೂ ಓದಿ: ಕೋವಿಡ್ ‘ಮುಖ ಕುರುಡುತನ’ಕ್ಕೆ ಕಾರಣವಾಗಬಹುದು; ಹೇಗೆ ಎಂದು ತಿಳಿಯಲು ಮುಂದೆ ಓದಿ