AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Face Blindness: ಕೋವಿಡ್ ‘ಮುಖ ಕುರುಡುತನ’ಕ್ಕೆ ಕಾರಣವಾಗಬಹುದು; ಹೇಗೆ ಎಂದು ತಿಳಿಯಲು ಮುಂದೆ ಓದಿ

ವಿಜ್ಞಾನಿಗಳ ಪ್ರಕಾರ, ಅಧ್ಯಯನದಲ್ಲಿ ಭಾಗಿಯಾದ ದೀರ್ಘ ಕೋವಿಡ್ ಹೊಂದಿರುವವರು COVID-19 ನಂತರ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಅರಿತುಕೊಳ್ಳುವ ಸಾಮರ್ಥ್ಯವು ಕಡಿಮೆಯಾಗಿದೆ ಎಂದು ವರದಿ ಮಾಡಿದ್ದಾರೆ. ಸಂಶೋಧಕರ (Scientists) ಪ್ರಕಾರ, ಕೆಲವು ರೋಗಿಗಳು ಪ್ರೋಸೊಪಾಗ್ನೋಸಿಯಾ ಅಥವಾ ಮುಖದ ಕುರುಡುತನ ಎಂದು ಕರೆಯಲ್ಪಡುವ ಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ.

Face Blindness: ಕೋವಿಡ್ 'ಮುಖ ಕುರುಡುತನ'ಕ್ಕೆ ಕಾರಣವಾಗಬಹುದು; ಹೇಗೆ ಎಂದು ತಿಳಿಯಲು ಮುಂದೆ ಓದಿ
Facial Blindness
ನಯನಾ ಎಸ್​ಪಿ
ನಯನಾ ಎಸ್​ಪಿ| Edited By: |

Updated on:Oct 14, 2026 | 7:01 PM

Share

ಕರೋನವೈರಸ್ ಸಾಂಕ್ರಾಮಿಕವು (Covis-19) ಪ್ರಪಂಚದಾದ್ಯಂತದ ಜನರ ಜೀವನದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಇತ್ತೀಚಿನ ಅಧ್ಯಯನವು (Scientific Study) COVID-19 ಮುಖಗಳನ್ನು ಗುರುತಿಸಲು ಅಡ್ಡಿ ಉಂಟುಮಾಡಬಹುದು ಎಂದು ಬಹಿರಂಗಪಡಿಸಿದೆ. ಸಂಶೋಧಕರ (Scientists) ಪ್ರಕಾರ, ಕೆಲವು ರೋಗಿಗಳು ಪ್ರೋಸೊಪಾಗ್ನೋಸಿಯಾ ಅಥವಾ ಮುಖದ ಕುರುಡುತನ ಎಂದು ಕರೆಯಲ್ಪಡುವ ಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. COVID-19 ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಇಂತಹ ಸಮಸ್ಯೆಗಳನ್ನು ವರದಿ ಮಾಡುವ ಮೊದಲ ಅಧ್ಯಯನ ಇದು. ಈ ಅಧ್ಯಯನದ ಬಗ್ಗೆ ಕಾರ್ಟೆಕ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ವಿಜ್ಞಾನಿಗಳ ತಂಡವು 28 ವರ್ಷದ ಮಹಿಳೆಯರನ್ನು ಪರೀಕ್ಷಿಸಿತು, ಅವರು ಮಾರ್ಚ್ 2020 ರಲ್ಲಿ COVID-19 ಸೋಂಕಿಗೆ ಒಳಗಾದವರು ಮತ್ತು ಎರಡು ತಿಂಗಳ ನಂತರ ಮರುಕಳಿಸುವಿಕೆಯನ್ನು ಅನುಭವಿಸಿದವರು. ವಿಜ್ಞಾನಿಗಳ ಪ್ರಕಾರ, ಮರುಕಳಿಸುವಿಕೆಯ ನಂತರ ಮುಖಗಳನ್ನು ಗುರುತಿಸಲು ಮತ್ತು ಸಂಚರಿಸುವಾಗ ಈ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂದು ಗಮನಿಸಲಾಗಿದೆ.

ಪರಿಚಿತ ಮುಖಗಳನ್ನು ಗುರುತಿಸುವಲ್ಲಿ ಇವರಿಗೆ ತೊಂದರೆ ಇದೆ ಎಂದು ವಿಜ್ಞಾನಿಗಳು ಕಂಡುಕೊಂಡರು, ಇದು ಪ್ರೊಸೊಪಾಗ್ನೋಸಿಯಾದ ಲಕ್ಷಣವಾಗಿದೆ. ಕೇಂಬ್ರಿಡ್ಜ್ ಫೇಸ್ ಮೆಮೊರಿ ಟೆಸ್ಟ್‌ನಲ್ಲಿ ಈ ಮಹಿಳೆಯರ ಸ್ಕೋರ್‌ಗಳ ಪ್ರಕಾರ ಹೊಸ ಗುರುತುಗಳನ್ನು ಕಲಿಯಲು ಈ ಗುಂಪಿಗೆ ಕಷ್ಟವಾಗಿದೆ.

ಅಧ್ಯಯನದ ಸಮಯದಲ್ಲಿ, ಈ ಮಹಿಳೆಯರಿಗೆ ನ್ಯಾವಿಗೇಷನಲ್ ಕೊರತೆ ಅಥವಾ ನಡೆಯುವಾಗ ಕಷ್ಟವಾಗಿದೆ ಮತ್ತು ಕಿರಾಣಿ ಅಂಗಡಿಯಲ್ಲಿ ವಸ್ತುಗಳು ಎಲ್ಲಿವೆ ಎಂಬುದನ್ನು ನೆನಪಿಟ್ಟುಕೊಳ್ಳಲು ಕಷ್ಟಪಟ್ಟಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಧ್ಯಯನದ ಭಾಗವಾಗಿ ವಿಜ್ಞಾನಿಗಳು, 12 ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ರೋಗಲಕ್ಷಣಗಳೊಂದಿಗೆ ಬಳಲಿದ 54 ವ್ಯಕ್ತಿಗಳಿಂದ ಸ್ವಯಂ-ವರದಿ ಮಾಡಿದ ಡೇಟಾವನ್ನು ಸಂಗ್ರಹಿಸಿದರು. ಜೊತೆಗೆ ದೀರ್ಘಕಾಲದ COVID-19 ನಿಂದ ಚೇತರಿಸಿಕೊಂಡ 32 ವ್ಯಕ್ತಿಗಾಲ ಡೇಟಾವನ್ನು ಪಡೆದರು.

ವಿಜ್ಞಾನಿಗಳ ಪ್ರಕಾರ, ದೀರ್ಘ ಕೋವಿಡ್ ಹೊಂದಿರುವ ವ್ಯಕ್ತಿಗಳಲ್ಲಿ ಅರಿವಿನ ಮತ್ತು ಶಾಶ್ವತ ಸಾಮರ್ಥ್ಯಗಳು (Cognitive and Perpetual) ಸಾಮರ್ಥ್ಯ ಕಡಿಮೆಯಾಗಿದೆ ಎಂದು ವರದಿ ಮಾಡಿದ್ದಾರೆ.

ಡಾರ್ಟ್ ಮೌಥ್ ಕಾಲೇಜಿನ ನರವಿಜ್ಞಾನಿಗಳಾದ ಮೇರಿ-ಲೂಯಿಸ್ ಕೀಸೆಲರ್ ಮತ್ತು ಬ್ರಾಡ್ ಡುಚೈನ್, ಆನಿ ಎಂಬ ಮಹಿಳೆಗೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದಾಗ ಇವರಿಗೆ ಮುಖಗಳನ್ನು ಗುರುತಿಸುವಲ್ಲಿ ಮಾತ್ರ ತೊಂದರೆ ಇದೆ ಬೇರೆ ಯಾವುದೇ ದೊಡ್ಡ ಅರೋಗ್ಯ ತೊಂದರೆಯಿಲ್ಲ ಎಂಬುದು ತಿಳಿದಿದೆ.

Published On - 2:44 pm, Thu, 16 March 23

Follow Us
ನಯನಾ ಎಸ್​ಪಿ
ನಯನಾ ಎಸ್​ಪಿ

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ