ಸಾಂದರ್ಭಿಕ ಚಿತ್ರ
Image Credit source: Getty Images
2025 ರ ಐದನೇ ತಿಂಗಳಾದ ಮೇ (May) ತಿಂಗಳು ಪ್ರಾರಂಭವಾಗಲು ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಪ್ರತಿ ತಿಂಗಳಂತೆ ಈ ತಿಂಗಳಲ್ಲೂ ಸಾಂಸ್ಕೃತಿಕ ಆಚರಣೆಗಳಿಂದ ಹಿಡಿದು ಜಾಗೃತಿ ದಿನಗಳ ವರೆಗೆ ಹಲವಾರು ರಾಷ್ಟ್ರೀಯ (National) ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು (International Days) ಆಚರಿಸಲಾಗುತ್ತದೆ. ಈ ಪ್ರತಿಯೊಂದು ಆಚರಣೆಯು ಒಂದೊಂದು ಉದ್ದೇಶ ಮತ್ತು ಮಹತ್ವವನ್ನು ಹೊಂದಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ವಿಶಿಷ್ಟ ದಿನಾಚರಣೆ ಆಚರಿಸಲಾಗುತ್ತದೆ. ಹಾಗಾದರೆ ಅಂತಾರಾಷ್ಟ್ರೀಯ ಕಾರ್ಮಿಕರ ದಿನದಿಂದ ಹಿಡಿದು ತಾಯಂದಿರ ದಿನದವರೆಗೆ ಮೇ ತಿಂಗಳಿನಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ:
- ಮೇ 1, 2025 – ಅಂತಾರಾಷ್ಟ್ರೀಯ ಕಾರ್ಮಿಕರ ದಿನ
- ಮೇ 2, 2025 – ವಿಶ್ವ ಟ್ಯೂನ ದಿನ
- ಮೇ 3, 2025 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
- ಮೇ 4, 2025 – ಕಲ್ಲಿದ್ದಲು ಗಣಿಗಾರರ ದಿನ
- ಮೇ 4, 2025 – ಅಂತಾರಾಷ್ಟ್ರೀಯ ಅಗ್ನಿಶಾಮಕ ದಳ ದಿನ
- ಮೇ 5, 2025 – ವಿಶ್ವ ನಗು ದಿನ
- ಮೇ 7, 2025 – ವಿಶ್ವ ಅಥ್ಲೆಟಿಕ್ಸ್ ದಿನ
- ಮೇ 7, 2025 – ರವೀಂದ್ರನಾಥ ಟ್ಯಾಗೋರ್ ಜಯಂತಿ
- ಮೇ 7, 2025 – ವಿಶ್ವ ಆಸ್ತಮಾ ದಿನ
- ಮೇ 8, 2025 – ವಿಶ್ವ ರೆಡ್ ಕ್ರಾಸ್ ದಿನ
- ಮೇ 8, 2025 – ವಿಶ್ವ ಥಲಸ್ಸೆಮಿಯಾ ದಿನ
- ಮೇ 10, 2025 – ವಿಶ್ವ ಲೂಪಸ್ ದಿನ
- ಮೇ 10, 2025 – ರಾಷ್ಟ್ರೀಯ ಸೀಗಡಿ ದಿನ
- ಮೇ 11, 2025 – ತಾಯಂದಿರ ದಿನ
- ಮೇ 11, 2025 – ರಾಷ್ಟ್ರೀಯ ತಂತ್ರಜ್ಞಾನ ದಿನ
- ಮೇ 12, 2025 – ಅಂತಾರಾಷ್ಟ್ರೀಯ ದಾದಿಯರ ದಿನ
- ಮೇ 15, 2025 – ಅಂತಾರಾಷ್ಟ್ರೀಯ ಕುಟುಂಬ ದಿನ
- ಮೇ 16, 2025 – ರಾಷ್ಟ್ರೀಯ ಡೆಂಗ್ಯೂ ದಿನ
- ಮೇ 17, 2025 – ವಿಶ್ವ ದೂರ ಸಂಪರ್ಕ ದಿನ
- ಮೇ 17, 2025 – ವಿಶ್ವ ಅಧಿಕ ರಕ್ತದೊತ್ತಡ ದಿನ
- ಮೇ 18, 2025 – ವಿಶ್ವ ಏಡ್ಸ್ ಲಸಿಕೆ ದಿನ
- ಮೇ 18, 2025 – ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ
- ಮೇ 20, 2025 – ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ದಿನ
- ಮೇ 21, 2025 – ಅಂತಾರಾಷ್ಟ್ರೀಯ ಚಹಾ ದಿನ
- ಮೇ 21, 2025 – ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ
- ಮೇ 22, 2025 – ಅಂತರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ
- ಮೇ 23, 2025 -ವಿಶ್ವ ಆಮೆ ದಿನ
- ಮೇ 24, 2025 – ರಾಷ್ಟ್ರೀಯ ಸಹೋದರರ ದಿನ
- ಮೇ 28, 2025 – ಮುಟ್ಟಿನ ನೈರ್ಮಲ್ಯ ದಿನ
- ಮೇ 30, 2025 – ಅಂತಾರಾಷ್ಟ್ರೀಯ ಆಲೂಗಡ್ಡೆ ದಿನ
- ಮೇ 31, 2025 – ವಿಶ್ವ ತಂಬಾಕು ರಹಿತ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ