Home Remedies : ಸೊಳ್ಳೆ ಕಚ್ಚಿ ವಿಪರೀತ ತುರಿಕೆ, ಊತ ಉಂಟಾದರೆ ತಕ್ಷಣ ಹೀಗೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 06, 2024 | 5:40 PM

ಬೇಸಿಗೆಗಿಂತ ಮಳೆಗಾಲದಲ್ಲಿ ಸೊಳ್ಳೆಗಳ ಕಾಟವೇ ಹೆಚ್ಚು. ಸೈಲೆಂಟ್ ಆಗಿ ಬಂದು ರಕ್ತ ಹೀರುವ ಈ ಸೊಳ್ಳೆಗಳನ್ನು ಓಡಿಸುವುದೇ ದೊಡ್ಡ ಕೆಲಸವಾಗಿರುತ್ತದೆ. ಸೊಳ್ಳೆ ಕಚ್ಚಿ ಬಿಟ್ಟರೆ ವಿಪರೀತ ತುರಿಕೆಯೊಂದಿಗೆ ಕೆಲವೊಮ್ಮೆ ಊತ ಕಾಣಿಸಿಕೊಳ್ಳುತ್ತವೆ. ಈ ಸೊಳ್ಳೆ ಕಡಿತದಿಂದಾಗುವ ಉಂಟಾಗುವ ವಿಪರೀತ ತುರಿಕೆಯನ್ನು ನಿವಾರಿಸಲು ಈ ಸರಳ ಮನೆ ಮದ್ದುಗಳು ಇಲ್ಲಿವೆ.

Home Remedies : ಸೊಳ್ಳೆ ಕಚ್ಚಿ ವಿಪರೀತ ತುರಿಕೆ, ಊತ ಉಂಟಾದರೆ ತಕ್ಷಣ ಹೀಗೆ ಮಾಡಿ
Follow us on

ಮಳೆಗಾಲ ಬಂತೆಂದರೆ ಸಾಕು, ಮನೆಯ ಸುತ್ತ ಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಸಂಜೆಯ ವೇಳೆ ಹೊರಗಡೆ ಕುಳಿತುಕೊಂಡರೆ ಸಾಕು, ಒಂದೊಂದೇ ಸೊಳ್ಳೆಗಳು ಬಂದು ಕಚ್ಚಿದ್ದೆ ತಿಳಿಯುವುದಿಲ್ಲ. ಕಚ್ಚಿದ ಜಾಗದಲ್ಲಿಯೇ ವಿಪರೀತ ತುರಿಕೆಯೊಂದಿಗೆ ದದ್ದು ಕಾಣಿಸಿಕೊಳ್ಳುತ್ತದೆ. ಸಣ್ಣ ಮಕ್ಕಳ ಮೈ ತುಂಬಾ ಸೊಳ್ಳೆ ಕಡಿತದಿಂದ ಕೆಂಪು ಗುಳ್ಳೆಗಳು ಬಂದಿರುತ್ತದೆ. ಹೀಗಾಗಿ ಆ ತಕ್ಷಣವೇ ಈ ಮನೆಯಲ್ಲಿರುವ ಈ ವಸ್ತುಗಳನ್ನು ಹಚ್ಚಿದರೆ ದದ್ದು ಹಾಗೂ ತುರಿಕೆಯಂತಹ ಸಮಸ್ಯೆಯನ್ನು ನಿವಾರಿಸಬಹುದು.

ಸೊಳ್ಳೆ ಕಡಿತದಿಂದ ಪಾರಾಗಲು ಸರಳ ಮನೆ ಮದ್ದುಗಳು

  • ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಮಾಡಬೇಕಾದ ಕೆಲಸವೆಂದರೆ ಸಂಜೆಯ ಕೈ ಕಾಲುಗಳಿಗೆ ಎಣ್ಣೆಯನ್ನು ಸವರುವುದು.
  • ಜೇನುತುಪ್ಪದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು, ಸೊಳ್ಳೆ ಕಚ್ಚಿದ್ದಲ್ಲಿ ಜೇನುತುಪ್ಪ ಹಚ್ಚಿದರೆ ಉರಿ ಹಾಗೂ ದದ್ದು ಕಡಿಮೆಯಾಗುತ್ತದೆ.
  • ಸೊಳ್ಳೆ ಕಚ್ಚಿದ ಜಾಗಕ್ಕೆ ಈರುಳ್ಳಿ ರಸವನ್ನು ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟರೆ ಉರಿ ಹಾಗೂ ಊತವೂ ಶಮನವಾಗುತ್ತದೆ.
  • ಸೊಳ್ಳೆ ಕಚ್ಚಿದ ಜಾಗದಲ್ಲಿ ಊತವಾಗಿ ತುರಿಸುತ್ತಿದ್ದರೆ ತಕ್ಷಣವೇ ಐಸ್ ಕ್ಯೂಬ್ ಇಡುವುದರಿಂದ ಹತ್ತು ಹದಿನೈದು ನಿಮಿಷಗಳಲ್ಲಿ ಈ ಸಮಸ್ಯೆಯೂ ಕಡಿಮೆಯಾಗುತ್ತದೆ.
  • ನಿಂಬೆರಸ ಹಾಗೂ ತುಳಸಿಯನ್ನು ಚೆನ್ನಾಗಿ ಅರೆದು ಮಿಶ್ರಣ ಮಾಡಿಕೊಂಡು ಸೊಳ್ಳೆ ಕಚ್ಚಿದ್ದಲ್ಲಿ ಹಚ್ಚುವುದರಿಂದ ಸಹ ತುರಿಕೆ ಮತ್ತು ನೋವಿನಿಂದವಿನಿಂದ ಮುಕ್ತಿ ಹೊಂದಬಹುದು.
  • ಬೆಳ್ಳುಳ್ಳಿ ಹಾಗೂ ಈರುಳ್ಳಿ ಚೆನ್ನಾಗಿ ಅರೆದು ಕೈ ಕಾಲುಗಳಿಗೆ ಹಚ್ಚಿಕೊಳ್ಳುವುದರಿಂದ ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
  • ಸೊಳ್ಳೆ ಕಚ್ಚಿ ತುರಿಕೆ ಹಾಗೂ ಊತ ಕಾಣಿಸಿಕೊಂಡ ಜಾಗಕ್ಕೆ ಆಲೋವೆರಾದ ಲೋಳೆಯನ್ನು ಹಚ್ಚಿ, ಸ್ವಲ್ಪ ಸಮಯ ಬಿಟ್ಟರೆ ಈ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: