AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಅತ್ತೆಯ ನೆಚ್ಚಿನ ಸೊಸೆಯಾಗಲು ಬಯಸಿದರೆ ಈ ಗುಣಗಳನ್ನು ಅಳವಡಿಸಿಕೊಳ್ಳಿ

ಹೆಚ್ಚಿನ ಮನೆಗಳಲ್ಲಿ ಅತ್ತೆ ಮತ್ತು ಸೊಸೆಯ ನಡುವಿನ ಬಾಂಧವ್ಯ ಅಷ್ಟಕಷ್ಟೆ ಇರುತ್ತದೆ. ಕೆಲವೊಂದು ಬಾರಿ ಅತ್ತೆ ಸೊಸೆಯ ನಡುವೆ ದೊಡ್ಡ ಜಗಳಗಳೇ ನಡೆದು ಬಿಡುತ್ತದೆ. ಇದು ಕುಟುಂಬದ ನೆಮ್ಮದಿ ಮಾತ್ರವಲ್ಲ ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಹೀಗಿರುವಾಗ ಅತ್ತೆಯ ಪ್ರೀತಿ, ವಿಶ್ವಾಸ ಗಳಿಸಲು, ಅತ್ತೆ ನಿಮ್ಮನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಳ್ಳಲು, ನೆಚ್ಚಿನ ಸೊಸೆಯಾಗಲು ಈ ಕೆಲವೊಂದಷ್ಟು ಗುಣಗಳನ್ನು ನಿಮ್ಮಲ್ಲಿ ನೀವು ಅಳವಡಿಸಿಕೊಳ್ಳಿ.

ನಿಮ್ಮ ಅತ್ತೆಯ ನೆಚ್ಚಿನ ಸೊಸೆಯಾಗಲು ಬಯಸಿದರೆ ಈ ಗುಣಗಳನ್ನು ಅಳವಡಿಸಿಕೊಳ್ಳಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 22, 2026 | 5:04 PM

Share

ಅತ್ತೆ ಸೊಸೆಯ ಸಂಬಂಧ ಚೆನ್ನಾಗಿದ್ದರೆ, ಇಡೀ ಮನೆ ಚೆನ್ನಾಗಿರುತ್ತದೆ. ಆದರೆ ಅತ್ತೆ ಮತ್ತು ಸೊಸೆಯ (daughter-in-law) ನಡುವಿನ ಸಂಬಂಧವನ್ನು ದೀರ್ಘಕಾಲದವರೆಗೆ ಚೆನ್ನಾಗಿ ಪೋಷಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತೇ ಅಲ್ಲ. ಇವರಿಬ್ಬರಲ್ಲೂ ಭಿನ್ನಾಭಿಪ್ರಾಯಗಳು ಕಂಡುಬಂದರೆ ಮನೆಯ ಶಾತಿಯೇ ಹಾಳಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪಗಳು ಏರ್ಪಡುವ ಸಾಧ್ಯತೆ ಇರುತ್ತದೆ. ಅದರಲ್ಲೂ ಹೆಚ್ಚಿನ ಮನೆಗಳಲ್ಲಿ ಅತ್ತೆ ಮತ್ತು ಸೊಸೆಯ ನಡುವೆ ಹೊಂದಾಣಿಕೆಯೇ ಇರೋದಿಲ್ಲ. ಕ್ಷುಲ್ಲಕ ಕಾರಣಗಳಿಗೆ ಜಗಳಗಳು ನಡೆಯುತ್ತಿರುತ್ತವೆ. ಹೀಗಿರುವಾಗ ಸೊಸೆಯಾದವಳು ಈ ಕೆಲವೊಂದು ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ತೆ ಇನ್ನೆಂದೂ ಜಗಳವಾಡದಂತೆ ನೋಡಿಕೊಳ್ಳಬಹುದು, ಅತ್ತೆಯ ಪ್ರೀತಿ ವಿಶ್ವಾಸ ಗಳಿಸಬಹುದು, ಅಷ್ಟೇ ಯಾಕೆ ಅತ್ತೆಯ ಮುದ್ದಿನ ಸೊಸೆಯೂ ಆಗಬಹುದು. ಆ ಗುಣಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಅತ್ತೆಯ ನೆಚ್ಚಿನ ಸೊಸೆಯಾಗಲು ನಿಮ್ಮಲ್ಲಿ ಗುಣಗಳು ಇರಬೇಕು:

ಬೆಂಬಲ ನೀಡಿ: ನೀವು ನಿಮ್ಮ ಅತ್ತೆಯ ನೆಚ್ಚಿನ ಸೊಸೆಯಾಗಲು ಬಯಸಿದರೆ ನೀವು ಪ್ರತಿಯೊಂದು ಸಂದರ್ಭದಲ್ಲೂ ನಿಮ್ಮ ಅತ್ತೆ-ಮಾವನ ಜೊತೆ ನಿಲ್ಲಬೇಕು ಮತ್ತು ಅವರನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಮತ್ತು ಹೆತ್ತ ತಂದೆಗೆ ತೋರಿಸುವಷ್ಟೇ ಅವರಿಗೂ ಪ್ರೀತಿ ತೋರಬೇಕು, ಆಗ ಖಂಡಿತವಾಗಿಯೂ ಅತ್ತೆ ನಿಮ್ಮನ್ನು ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.

ಗೌರವ ನೀಡಿ: ಸಣ್ಣಪುಟ್ಟ ವಿಚಾರಗಳಿಗೆ ಕೋಪದಿಂದ ಮಾತನಾಡುವುದು, ಎದುರು ಮಾತನಾಡುವುದು ಒಳ್ಳೆಯದಲ್ಲ, ಅತ್ತೆ ಮಾವನಿಗೆ ಗೌರವ ನೀಡಿ, ಕೋಪ ಮಾಡಿಕೊಳ್ಳುವ ಬದಲು ಪ್ರೀತಿಯಿಂದ ಮಾತನಾಡಿ. ಇದು ನಿಮ್ಮಿಬ್ಬರ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಇದು ಅತ್ತೆಗೆ ನಿಮ್ಮ ಮೇಲಿನ ನಂಬಿಕೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ.

ಮನೆಯ ಜವಾಬ್ದಾರಿಯನ್ನು ನಿಭಾಯಿಸಿ: ಪ್ರತಿಯೊಬ್ಬ ಅತ್ತೆಯೂ ತನ್ನ ಸೊಸೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗಬೇಕೆಂದು ಬಯಸುತ್ತಾರೆ. ಹೀಗಿರುವಾಗ ನೀವು ಮನೆಕೆಲಸಗಳಲ್ಲಿ ಆಸಕ್ತಿ ತೋರಿಸಿದರೆ ಮತ್ತು ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಾಗಿ ಪೂರೈಸಿದರೆ, ನೀವು ಒಳ್ಳೆಯ ಸೊಸೆಯಾಗಬಹುದು.

ತಾಯಿಯಂತೆ ಪ್ರೀತಿಸಿ: ಹೆಚ್ಚಿನ ಮಹಿಳೆಯರು ತಮ್ಮ ಅತ್ತೆಯನ್ನು ಆಜನ್ಮ ವೈರಿಯಂತೆ ಕಾಣುತ್ತಾರೆ. ಈ ರೀತಿ ಇದ್ದರೆ ಸಂಬಂಧ ಹಾಳಾಗುತ್ತದೆ. ಇದರ ಬದಲು ಅತ್ತೆಯನ್ನು ನಿಮ್ಮ ತಾಯಿಯಂತೆ ನೋಡಿಕೊಳ್ಳಿ, ಮಗಳಂತೆ ಇದ್ದು ಅವರ ಬೇಕು ಬೇಡಗಳನ್ನು ನೋಡಿಕೊಳ್ಳಿ. ಹಾಗೆ ಮಾಡುವುದರಿಂದ, ಅವರು ನಿಮ್ಮನ್ನು ಪೂರ್ಣ ಹೃದಯದಿಂದ ಅಪ್ಪಿಕೊಳ್ಳುತ್ತಾರೆ. ನೀವು ಮುದ್ದಿನ ಸೊಸೆಯಾಗಬಹುದು.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಮದುವೆಯಾಗುವ ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?

ಮುಕ್ತವಾಗಿ ಮಾತನಾಡಿ: ನೀವು ಯಾವುದಾದರೂ ವಿಷಯದ ಬಗ್ಗೆ ಅಸಮಧಾನಗೊಂಡಿದ್ದರೆ, ಆ ಸಮಸ್ಯೆ ಇನ್ನಷ್ಟು ಹದಗೆಡುವ ಮುನ್ನ ಅದರ ಬಗ್ಗೆ ಮುಕ್ತವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಇದರಿಂದ ನಿಮ್ಮ ಸಂಬಂಧ ದೀರ್ಘಕಾಲದವರೆಗೆ ಚೆನ್ನಾಗಿರುತ್ತದೆ.

ನಿಮ್ಮ ಗಂಡನನ್ನು ಅತ್ತೆಯಿಂದ ಬೇರ್ಪಡಿಸಬೇಡಿ: ನೀವು ನಿಮ್ಮ ಹೆತ್ತವರಿಗೆ ಎಷ್ಟು ಪ್ರಿಯರೋ ಹಾಗೆಯೇ ನಿಮ್ಮ ಪತಿಯೂ ನಿಮ್ಮ ಅತ್ತೆಯ ಮಗನೇ. ಹೀಗಿರುವಾಗ  ನೀವು ಅವರ ಮಗನನ್ನು ಸಂಪೂರ್ಣವಾಗಿ ನಿಮ್ಮವನನ್ನಾಗಿ ಮಾಡಿಕೊಂಡು, ಹೆತ್ತವರಿಂದ ದೂರವಿಟ್ಟು, ನಿಮ್ಮ ಮಾತನ್ನು ಮಾತ್ರ ಕೇಳುವಂತೆ ಮಾಡಿದರೆ, ಅದು ಸರಿಯಲ್ಲ.ಇದು ನಿಮಗೆ ತೃಪ್ತಿಯನ್ನು ತರಬಹುದು, ಆದರೆ ಇದು ನಿಮ್ಮ ಅತ್ತೆಗೆ ತುಂಬಾ ನೋವುಂಟು ಮಾಡುತ್ತದೆ. ಆದ್ದರಿಂದ ಅವರ ನಡುವೆ ಬಿರುಕು ಮೂಡಿಸಬೇಡಿ. ತಾಯಿ ಮತ್ತು ಮಗ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವರಿಗೆ ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯಲು ಅವಕಾಶ ನೀಡಿ. ಹೀಗಿದ್ದರೆ ಅತ್ತೆ ಸೊಸೆಯ ನಡುವಿನ ಸಂಬಂಧವೂ ಚೆನ್ನಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!