Makeup Tips: ಮನೆಯಲ್ಲಿಯೇ ಸರಳವಾಗಿ ಮೇಕಪ್ ಮಾಡುವುದು ಹೇಗೆ: ಇಲ್ಲಿದೆ ಟಿಪ್ಸ್​​​

| Updated By: ಅಕ್ಷತಾ ವರ್ಕಾಡಿ

Updated on: Sep 06, 2023 | 6:40 PM

ಮೇಕಪ್ ಮಾಡುವುದು ಹೇಗೆ ಎಂದು  ತಿಳಿದಿಲ್ಲದಿದ್ದರೆ, ಹಬ್ಬಗಳು ಮತ್ತು ಶುಭಸಮಾರಂಭಗಳ ಸಮಯದಲ್ಲಿ ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಬ್ಯೂಟಿ ಪಾರ್ಲರ್ ಗೆ ಹೋಗಬೇಕಾಗುತ್ತದೆ. ಇದರ ಬದಲಿಗೆ ಸರಳವಾಗಿ ಸ್ವತಃ ನೀವೇ ಮೇಕಪ್ ಮಾಡಿಕೊಳ್ಳಬಹುದು. ಮೇಕಪ್ ಮಾಡಿಕೊಳ್ಳುವ ಸರಿಯಾದ ಹಂತಗಳ ಬಗ್ಗೆ ತಿಳಿಯಿರಿ. 

Makeup Tips: ಮನೆಯಲ್ಲಿಯೇ ಸರಳವಾಗಿ ಮೇಕಪ್ ಮಾಡುವುದು ಹೇಗೆ: ಇಲ್ಲಿದೆ ಟಿಪ್ಸ್​​​
Makeup Tips
Image Credit source: Pinterest
Follow us on

ಮೇಕಪ್ ಮಾಡಿಕೊಳ್ಳಲು ಇಷ್ಟಪಡದ ಹುಡುಗಿಯರೇ ಇಲ್ಲ. ಆದರೆ ಮೇಕಪ್ ಮಾಡಿಕೊಳ್ಳುವುದು ಬಹಳ ಕಷ್ಟವೆಂದು ಅನೇಕರು ಭಾವಿಸುತ್ತಾರೆ. ಮೇಕಪ್  ಮಾಡುವುದು ತುಂಬಾ ಕಷ್ಟದ ಕೆಲಸವಲ್ಲ ಮತ್ತು ಇದಕ್ಕಾಗಿ ನಿಮಗೆ ಯಾವಾಗಲೂ ಪರಿಣಿತರ ಅಗತ್ಯವಿಲ್ಲ. ವಾಸ್ತವವಾಗಿ ನೀವು ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿಯೇ ಸುಲಭವಾಗಿ ಮೇಕಪ್  ಮಾಡಿಕೊಳ್ಳಬಹುದು. ಹಬ್ಬಗಳು ಅಥವಾ ಯಾವುದೇ ಶುಭಸಮಾರಂಭಗಳ ಸಂದರ್ಭದಲ್ಲಿ ನೀವು ಮೇಕಪ್ ಮಾಡುವ ಸಲುವಾಗಿ ಬ್ಯೂಟಿ ಪಾರ್ಲರ್ ಗೆ  ಹೋದಾಗ, ಒಂದೇ ಬಾರಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ.  ಇದರ ಬದಲಿಗೆ ಸ್ವತಃ ನೀವೇ ಸುಲಭವಾಗಿ ಮೇಕಪ್ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಸರಿಯಾದ ಮೇಕಪ್  ಹಂತವನ್ನು ಅನುಸರಿಸುವುದು ಮುಖ್ಯವಾಗಿದೆ.

ಹಂತ ಹಂತವಾದ ಮೇಕಪ್ ಸಲಹೆಗಳು: 

C.T.M ದಿನಚರಿಯನ್ನು ಅನುಸರಿಸಿ:

C.T.M ಎಂದರೆ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್. ಇದು ಚರ್ಮದ ಆರೈಕೆಯ ಮೂಲ ನಿಯಮವಾಗಿದೆ. ಪ್ರತಿದಿನ ಮುಖಕ್ಕೆ ಮಾಶ್ಚರೈಸರ್ ಹಚ್ಚುವುದು ಅವಶ್ಯಕ್. ಚರ್ಮದ ಆರೈಕೆಗಾಗಿ ಮತ್ತು ಮೇಕಪ್ ಸಲಿಸಾಗಿ ಮುಖದ ಮೇಲೆ ಕೂರಲು, ಮುಖಕ್ಕೆ ಮೊದಲು ಕ್ಲೆನ್ಸರ್ ಅನ್ವಯಿಸಿ. ಮತ್ತು ಮುಖದ ರಂಧ್ರಗಳನ್ನು (ಓಪನ್ ಫೋರ್ಸ್) ಮುಚ್ಚಲು ಟೋನರ್ ಬಳಸಿ ಮತ್ತು ಕೊನೆಯದಾಗಿ  ಮಾಯಿಶ್ಚರೈಸರ್ ಅನ್ವಯಿಸಿ.

ಪ್ರೈಮರ್:

ಮೊದಲ ಹಂತವನ್ನು ಮುಗಿಸಿದ ಬಳಿಕ ಎರಡನೇ ಹಂತದಲ್ಲಿ ನಿಮ್ಮ ಚರ್ಮದ ಮೇಲೆ ಸ್ವಲ್ಪ ಪ್ರೈಮರ್ ನ್ನು ಅನ್ವಯಿಸಬೇಕು. ಮುಖವನ್ನು ನಯವಾದ ಮತ್ತು ದೋಷರಹಿತವಾಗಿಸಲು ಪ್ರೈಮರ್ ಬಳಸುವುದು ಮುಖ್ಯ.   ಪ್ರೈಮರ್ ಅನ್ವಯಿಸಿದ ನಂತರ ಮುಖವನ್ನು 5 ನಿಮಿಷಗಳ ಕಾಲ ಹಾಗೇನೆ ಬಿಡಬೇಕು. ಇದರಿಂದ ಪ್ರೈಮರ್ ಮುಖದ ಮೇಲೆ ಸರಿಯಾಗಿ ಹೊಂದಿಕೊಳ್ಳುತ್ತದೆ.

ಇದನ್ನೂ ಓದಿ: 40 ರ ಹರೆಯದ ನಂತರ ಆರೋಗ್ಯಕರವಾಗಿರಬೇಕೆಂದರೆ ಈ ದಿನಚರಿಯನ್ನು ಅನುಸರಿಸಿ

ಫೌಂಡೇಷನ್:

ಮೇಕಪ್ ನ ಮುಂದಿನ ಹಂತ ಫೌಂಡೇಶನ್. ನಿಮ್ಮ ಮುಖದ ಬಣ್ಣಕ್ಕೆ ಸರಿಹೊಂದುವ ಫೌಂಡೇಶನ್ ಬಳಸಿ. ಮುಖವು ನೈಸರ್ಗಿಕವಾಗಿ ಕಾಣಿಸಬೇಕೆಂದರೆ ಸ್ವಲ್ಪ ಫೌಂಡೇಷನ್ ಹಚ್ಚಿದರೆ ಸಾಕು. ಬ್ರಷ್ ಅಥವಾ ಸ್ಪಾಂಜ್ ಸಹಾಯದಿಂದ ಮುಖದ ಮೇಲೆ ಫೌಂಡೇಶನ್ ಅನ್ವಯಿಸಿ.

ಕನ್ಸಿಲರ್:

ಕೆಲವೊಮ್ಮೆ ಫೌಂಡೇಶನ್ ಹಚ್ಚಿದ ಬಳಿಕವೂ ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳು ಗೋಚರಿಸುತ್ತದೆ. ಹೀಗಿರುವಾಗ ಕನ್ಸಿಲರ್ ನ್ನು ಅನ್ವಯಿಸಿ. ಇದರಿಂದ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳು ಗೋಚರಿಸುವುದಿಲ್ಲ.

ಅಂತಿಮವಾಗಿ  ಕಾಜಲ್, ಐಲೈನರ್, ಬ್ಲಷ್, ಮಸ್ಕಾರ ಮತ್ತ ಲಿಪ್ಸ್ಟಿಕ್ ಅನ್ವಯಿಸಿ:

ಈಗ ಮೇಕಪ್ ನ ಕೊನೆಯ ಹಂತದಲ್ಲಿ   ಐಲೈನರ್ ಹಚ್ಚಿ ನಂತರ ಕಣ್ಣಿನ ಕೆಳ ಭಾಗಕ್ಕೆ ಕಾಜಲ್ ಹಚ್ಚಿ. ಇದಾದ ನಂತರ ಕಣ್ರೆಪ್ಪೆಗೆ ಮಸ್ಕರಾವನ್ನು ಅನ್ವಯಿಸಿ. ಇದು ನಿಮ್ಮ ಕಣ್ಣಿನ ನೋಟವನ್ನು ಇನ್ನಷ್ಟು ಸುಂದರವಾಗಿಸುತ್ತದೆ. ನೀವು  ಬಯಸಿದರೆ ಮುಖದ ಮೇಲೆ ತಿಳಿ ಗುಲಾಬಿ ಛಾಯೆಯನ್ನು ಮೂಡಿಸಲು ಕೆನ್ನೆಯ ಮೇಲೆ ಬ್ಲಶ್ ಅನ್ವಯಿಸಿ. ಕೊನೆಯಲ್ಲಿ ಲಿಪ್ಸ್ಟಿಕ್ ಹಚ್ಚಿ. ಲಿಪ್ಸ್ಟಿಕ್ ಅನ್ವಯಿಸುವ ಮೊದಲು ನಿಮ್ಮ ತುಟಿಗಳಿಗೆ ಲಿಪ್ ಲೈನರ್ ಅನ್ವಯಿಸುವುದು ಅವಶ್ಯಕ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:40 pm, Wed, 6 September 23