Updated on: Aug 06, 2023 | 8:32 AM
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅಮೂಲ್ಯ ಹೆಸರಿನ ಪಾತ್ರ ಮಾಡುತ್ತಿರುವ ನಿಶಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಅವರು ನೋ ಮೇಕಪ್ ಲುಕ್ನ ಹಂಚಿಕೊಂಡಿದ್ದಾರೆ.
ಚಹಾ ಕುಡಿಯುತ್ತಿರುವ ಫೋಟೋನ ಅವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ‘ಚಹಾ/ಕಾಫಿ ಆಯ್ತಾ’ ಎಂದು ಕ್ಯಾಪ್ಶನ್ ಹಾಕಿದ್ದಾರೆ.
ಈ ಫೋಟೋದಲ್ಲಿ ನಿಶಾ ಅವರು ಯಾವುದೇ ಮೇಕಪ್ ಹಾಕಿಕೊಂಡಿಲ್ಲ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾವಿರಾರು ಲೈಕ್ಸ್ ಸಿಕ್ಕಿದೆ.
ಸಾಮಾನ್ಯವಾಗಿ ಹೀರೋಯಿನ್ಗಳು ಮೇಕಪ್ ಇಲ್ಲದೆ ಫೋಟೋ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೂ ನಿಶಾ ಅವರು ಆ ಸಾಲಿಗೆ ಸೇರುವುದಿಲ್ಲ.
ನಿಶಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಎಂದೇ ಫೇಮಸ್. ಅವರನ್ನು ಅನೇಕರು ಇದೇ ಹೆಸರಿನಿಂದ ಕರೆಯುತ್ತಾರೆ.
ನಿಶಾ ಅವರು ಪರಭಾಷೆಯವರಿಗೂ ಪರಿಚಿತರು. ಅಲ್ಲಿಯೂ ಅವರು ಧಾರಾವಾಹಿಗಳನ್ನು ಮಾಡುತ್ತಿದ್ದಾರೆ. ಅಲ್ಲಿಯವರೂ ನಿಶಾನ ಇಷ್ಟಪಟ್ಟಿದ್ದಾರೆ.
‘ಗಟ್ಟಿಮೇಳ ಧಾರಾವಾಹಿಗೆ ಒಳ್ಳೆಯ ಟಿಆರ್ಪಿ ಇದೆ. ಕಳೆದ ವಾರ ಈ ಧಾರಾವಾಹಿ ಟಾಪ್ ಹತ್ತರಲ್ಲಿ ಎರಡನೇ ಸ್ಥಾನದಲ್ಲಿ ಇತ್ತು.