2ನೇ ಟಿ20 ಪಂದ್ಯ ನಡೆಯಲಿರುವ ಗಯಾನದ ಪ್ರೊವಿಡೆನ್ಸ್ ಪಿಚ್ ಯಾರಿಗೆ ಹೆಚ್ಚು ಸಹಕಾರಿ?

Providence Stadium Pitch Report: ಭಾರತ-ವೆಸ್ಟ್ ಇಂಡೀಸ್ ಎರಡನೇ ಟಿ20 ಪಂದ್ಯ ನಡೆಯಲಿರುವ ಗಯಾನಾದಲ್ಲಿರುವ ಪ್ರೊವಿಡೆನ್ಸ್ ಸ್ಟೇಡಿಯಂ ಪಿಚ್ ಸಮತೋಲನದಿಂದ ಕೂಡಿದೆ. ಇದು ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಹಾಯವನ್ನು ಮಾಡುತ್ತದೆ.

Vinay Bhat
|

Updated on: Aug 06, 2023 | 8:53 AM

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿರುವ ಭಾರತ ಇಂದು ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಹಾರ್ದಿಕ್ ಪಡೆಗೆ ಬಹುಮುಖ್ಯವಾಗಿದೆ.

1 / 8
ಮೊದಲ ಪಂದ್ಯದಲ್ಲಿ ಭಾರತೀಯರ ಬ್ಯಾಟಿಂಗ್- ಬೌಲಿಂಗ್ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಯುವ ಪಡೆ ಎಡವಿತ್ತು, ಇದನ್ನು ನಾಯಕ ಹಾರ್ದಿಕ್ ಪಾಂಡ್ಯ ಕೂಡ ಹೇಳಿದ್ದರು. ಇದೀಗ ಆ ತಪ್ಪುಗಳನ್ನು ತಿದ್ದಿ ಬೌನ್ಸ್ ಬ್ಯಾಕ್ ಮಾಡಬೇಕಿದೆ. ಇದಕ್ಕಾಗಿ ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡಬಹುದು.

2 / 8
ಗಯಾನಾದಲ್ಲಿರುವ ಪ್ರೊವಿಡೆನ್ಸ್ ಸ್ಟೇಡಿಯಂ ಪಿಚ್ ಸಮತೋಲನದಿಂದ ಕೂಡಿದೆ. ಇದು ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಹಾಯವನ್ನು ಮಾಡುತ್ತದೆ. ಈ ಮೈದಾನದಲ್ಲಿ ನಡೆದ ಹೆಚ್ಚಿನ ಪಂದ್ಯಗಳು ಅಧಿಕ ಸ್ಕೋರ್​ನದ್ದಾಗಿದೆ. ಹೀಗಾಗಿ ಇಂದಿನ ಪಂದ್ಯವೂ ಹೈವೋಲ್ಟೇಜ್​ನಿಂದ ಕೂಡಿರಲಿದೆ.

3 / 8
ಸ್ವಿಂಗ್ ಬೌಲರ್‌ಗಳು ಆರಂಭಿಕ ಹಂತದಲ್ಲಿ ಯಶಸ್ಸು ಸಾಧಿಸಬಹುದು. ಪಿಚ್​ನ ಮೇಲ್ಮೈಯಲ್ಲಿರುವ ಹಸಿರು ಛಾಯೆಯು ಸೀಮ್ ಮತ್ತು ಸ್ವಿಂಗ್​ಗೆ ಸಹಾಯ ಮಾಡುತ್ತದೆ. ಆದರೆ ವೇಗಿಗಳಿಗೆ ಮಾತ್ರ ಮಿಂಚುವ ಅವಕಾಶ ಸಿಗುವುದಿಲ್ಲ. ಸ್ಪಿನ್ನರ್‌ಗಳಿಗೆ ಈ ಪಿಚ್ ಹೇಳಿ ಮಾಡಿಸಿದಂತಿದೆ. ಮಧ್ಯಮ ಓವರ್‌ಗಳಲ್ಲಿ ಬ್ಯಾಟರ್‌ಗಳನ್ನು ರನ್ ಗಳಿಸಲು ಕಷ್ಟಪಡುತ್ತಾರೆ.

4 / 8
ಇನ್ನು ಭಾನುವಾರ, ಆಗಸ್ಟ್ 06 ರಂದು ಈ ಪಂದ್ಯಕ್ಕೆ ಮೋಡ ಮಿಶ್ರಿತ ಬಿಸಿಲಿನ ವಾತಾವರಣ ಇರಲಿದೆ. ಆದರೆ ಸಾಂದರ್ಭಿಕವಾಗಿ ಚದುರಿದ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಿನ ಕಳೆದಂತೆ ಶೇ.50ರಷ್ಟು ಮಳೆಯಾಗುವ ಸಾಧ್ಯತೆ ಇದೆ.

5 / 8
ಸಂಜೆ ಆಗುತ್ತಿದ್ದಂತೆ, ಮಳೆಯಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಎರಡನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿಲ್ಲ ಎಂಬುದು ಸ್ಪಷ್ಟವಾಗಿದ್ದು, ಸಂಪೂರ್ಣ ಓವರ್​ಗಳ ಆಟವನ್ನು ನಿರೀಕ್ಷಿಸಬಹುದು.

6 / 8
ಭಾರತ ಟಿ20 ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​​ಮನ್ ಗಿಲ್, ಸೂರ್ಯ ಕುಮಾರ್ ಯಾದವ್ (ಉಪನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಯಶಸ್ವಿ ಜೈಸ್ವಾಲ್, ಅವೇಶ್ ಖಾನ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್.

7 / 8
ವೆಸ್ಟ್ ಇಂಡೀಸ್ ಟಿ20 ತಂಡ: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್, ಶಾಯ್ ಹೋಪ್, ಶಿಮ್ರೋನ್ ಹೆಟ್ಮೆರ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಅಕೆಲ್ ಹೊಸೈನ್, ರೊಮಾರಿಯೋ ಶೆಫೆರನ್ ಓಡಿಯನ್ ಸ್ಮಿತ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ಒಶಾನೆ ಥೋಮಸ್.

8 / 8
Follow us
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ

ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ

ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ

ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್

Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ

ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ