ಮೊಟ್ಟೆ ಕೆಟ್ಟು ಹೋಗಿದೆಯೋ ಎಂಬುದನ್ನು ಈ ಸರಳ ವಿಧಾನದ ಮೂಲಕ ಕಂಡು ಹಿಡಿಯಬಹುದು

ಅನೇಕರು ಪ್ರತಿನಿತ್ಯ ಮೊಟ್ಟೆ ತಿನ್ನುತ್ತಾರೆ. ಅದಕ್ಕಾಗಿ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಗಳನ್ನು ಖರೀದಿಸಿ ಮನೆಯಲ್ಲಿ ತಂದಿಡುತ್ತಾರೆ. ಸರಿಯಾಗಿ ಸಂಗ್ರಹಿಸದಿದ್ದರೆ, ಇವುಗಳು ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಕೆಟ್ಟು ಹೋದ ಹಣ್ಣು ತರಕಾರಿಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ಆದರೆ ಮೊಟ್ಟೆಗಳು ಹಾಳಾಗಿದೆಯೋ ಎಂಬುದನ್ನು ಕಂಡುಹಿಡಿಯುವುದು ತುಂಬಾನೇ ಕಷ್ಟ. ಹೀಗಿರುವಾಗ ಈ ಸರಳ ಟ್ರಿಕ್ಸ್‌ ಪಾಲಿಸುವ ಮೂಲಕ ಮೊಟ್ಟೆ ಹಾಳಾಗಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಬಹುದು.

ಮೊಟ್ಟೆ ಕೆಟ್ಟು ಹೋಗಿದೆಯೋ ಎಂಬುದನ್ನು ಈ ಸರಳ ವಿಧಾನದ ಮೂಲಕ ಕಂಡು ಹಿಡಿಯಬಹುದು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Dec 15, 2025 | 6:14 PM

ಮೊಟ್ಟೆಗಳು (egg) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್‌ ಅಧಿಕ ಪ್ರಮಾಣದ ಪ್ರೊಟೀನ್‌, ಕ್ಯಾಲ್ಸಿಯಂ, ಫೋಲಿಕ್‌ ಆಸಿಡ್‌, ಅಮೈನೋ ಆಸಿಡ್‌ ಸೇರಿದಂತೆ ಅಗಾಧ ಪ್ರಮಾಣದ ಪೋಷಕಾಂಶಗಳಿದ್ದು, ದಿನಕ್ಕೊಂದು ಮೊಟ್ಟೆ ತಿಂದರೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಲ್ಲದೆ ಇದರಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಆದ್ದರಿಂದ ಅನೇಕ ಜನರು ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮೊಟ್ಟೆಗಳನ್ನು ಮನೆಗೆ ತರುತ್ತಾರೆ. ಇವುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅವು ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಮೊಟ್ಟೆಗಳು ಆರೋಗ್ಯಕ್ಕೂ ಹಾನಿಕಾರಕ. ಹೀಗಿರುವಾಗ ಮೊಟ್ಟೆ ಹಾಳಾಗಿದೆಯೋ ಎಂಬುದನ್ನು ಕಂಡುಹಿಡಿಯುವುದು ಹೇಗೆ? ಇದಕ್ಕಾಗಿ ಈ ಇಲ್ಲಿವೆ ಸಿಂಪಲ್‌ ಟ್ರಿಕ್ಸ್.

ಮೊಟ್ಟೆಗಳು ಹೇಗೆ ಹಾಳಾಗುತ್ತವೆ?

ಮೊಟ್ಟೆಗಳು ಸಾಮಾನ್ಯವಾಗಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಹಾಳಾಗುತ್ತವೆ. ಆಹಾರ ವಿಷವಾಗಲು ಕಾರಣವಾಗುವುದೇ ಈ ಬ್ಯಾಕ್ಟೀರಿಯಾ.  ಈ ಬ್ಯಾಕ್ಟೀರಿಯಾ ವೇಗವಾಗಿ ಬೆಳೆದಷ್ಟೂ ಮೊಟ್ಟೆಯೂ ವೇಗವಾಗಿ ಹಾಳಾಗುತ್ತದೆ. ಹಾಗಾಗಿ ಇದನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಇದಲ್ಲದೆ, ಪ್ರತಿ ದಿನ ಕಳೆದಂತೆ ಮೊಟ್ಟೆಯ ಗುಣಮಟ್ಟ ಕಡಿಮೆಯಾಗುತ್ತದೆ.

ಮೊಟ್ಟೆ ಹಾಳಾಗಿದೆಯೋ ಎಂಬುದನ್ನು ಪರೀಕ್ಷಿಸುವುದು ಹೇಗೆ?

ಫ್ಲೋಟ್‌ ಟೆಸ್ಟ್:‌ ಮೊಟ್ಟೆ ಕೊಳೆತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀರಿನ ಮೂಲಕವೂ ಪರೀಕ್ಷಿಸಬಹುದು. ಫ್ಲೋಟ್ ಪರೀಕ್ಷೆಯನ್ನು ಮಾಡಲು, ನಿಮ್ಮ ಮೊಟ್ಟೆಯನ್ನು ಒಂದು ಬೌಲ್‌ ನೀರಿನಲ್ಲಿ ನಿಧಾನವಾಗಿ ಇರಿಸಿ. ಮೊಟ್ಟೆ ಮುಳುಗಿದರೆ, ಅದು ಫ್ರೆಶ್‌ ಆಗಿದೆ ಎಂದರ್ಥ. ಮೊಟ್ಟೆ ಅರ್ಧ ಮುಳುಗಿದರೆ ಅದು ಹಳೆಯದಾಗಿದೆ ಎಂದರ್ಥ. ಮೊಟ್ಟೆ ಸಂಪೂರ್ಣವಾಗಿ ತೇಲಿದರೆ, ಅದು ಕೊಳೆತಿದೆ ಎಂದರ್ಥ.

ಇದನ್ನೂ ಓದಿ: ಬ್ರಾಯ್ಲರ್‌ Vs ನಾಟಿ ಕೋಳಿ; ಇವೆರಡರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಉತ್ತಮ?

ಫ್ಲ್ಯಾಶ್‌ಲೈಟ್ ಪರೀಕ್ಷೆ: ಈ ವಿಧಾನವು ಮೊಟ್ಟೆಯ ಒಳಭಾಗವನ್ನು ನೋಡಲು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ನಿಮ್ಮ ಮೊಬೈಲ್ ಫೋನ್‌ನ ಫ್ಲ್ಯಾಶ್‌ ಲೈಟ್‌ ಆನ್‌ ಮಾಡಿ ಅದರ ಮೇಲೆ ಮೊಟ್ಟೆಯನ್ನಿಡಿ.  ಮೊಟ್ಟೆಯು ಚಿಪ್ಪಿನ ಮೂಲಕ ಸ್ಪಷ್ಟ ಹಳದಿ ಬಣ್ಣ ಗೋಚರಿಸಿದರೆ, ಅದು ತಾಜಾವಾಗಿದೆ ಎಂದರ್ಥ. ಅದೇ ಮೊಟ್ಟೆ ಬಿಳಿ ಬಣ್ಣದಲ್ಲಿ ಗೋಚರಿಸಿದರೆ ಅದು ಕೊಳೆತಿದೆ ಎಂದರ್ಥ.

ಇದಲ್ಲದೆ ಮೊಟ್ಟೆ ಕೊಳೆತಿದೆಯೇ ಎಂದು ತಿಳಿಯಲು ವಾಸನೆ ಪರೀಕ್ಷೆಯು ಪರಿಣಾಮಕಾರಿ ಮಾರ್ಗವಾಗಿದೆ. ಕೊಳೆತ ಮೊಟ್ಟೆಗಳು ಹಸಿ ಅಥವಾ ಬೇಯಿಸಿದವುಗಳೇ ಆಗಿರಲಿ, ಅವುಗಳಿಂದ ಕೆಟ್ಟ ವಾಸನೆ ಬರುತ್ತದೆ. ಅವುಗಳನ್ನು ನಿಮ್ಮ ಮೂಗಿನ ಹತ್ತಿರ ಹಿಡಿದು ವಾಸನೆ ನೋಡುವ ಮೂಲಕ ಇದನ್ನು ತಿಳಿಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ