AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಾಯ್ಲರ್‌ Vs ನಾಟಿ ಕೋಳಿ; ಇವೆರಡರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಉತ್ತಮ?

ನಾನ್‌ವೆಜ್‌ ಪ್ರಿಯರಿಗಂತೂ ಚಿಕನ್‌ ಅಂದ್ರೆ ಸಖತ್‌ ಇಷ್ಟ. ಇದರಲ್ಲಿ ಕೆಲವರು ಬ್ರಾಯ್ಲರ್‌ ಕೋಳಿಯನ್ನು ಇಷ್ಟಪಟ್ಟರೆ ಇನ್ನೂ ಅನೇಕರು ನಾಟಿ ಕೋಳಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅಷ್ಟಕ್ಕೂ ಇವೆಡರಲ್ಲಿ ಅರೋಗ್ಯಕ್ಕೆ ಉತ್ತಮ ಯಾವುವು? ಯಾವುದರಲ್ಲಿ ಹೆಚ್ಚು ಪೋಷಕಾಂಶವಿದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಬ್ರಾಯ್ಲರ್‌ Vs ನಾಟಿ ಕೋಳಿ; ಇವೆರಡರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಉತ್ತಮ?
ಬ್ರಾಯ್ಲರ್‌ Vs ನಾಟಿ ಕೋಳಿImage Credit source: Freepik
ಮಾಲಾಶ್ರೀ ಅಂಚನ್​
|

Updated on: Dec 14, 2025 | 6:13 PM

Share

ಚಿಕನ್‌ (Chicken) ಇಲ್ಲದೆ ನಾನ್‌ವೆಜ್‌ ಪ್ರಿಯರಿಗೆ ಭಾನುವಾರ ಪರಿಪೂರ್ಣ ಆಗೋದೇ ಇಲ್ಲ. ಚಿಕನ್‌ ಫ್ರೈ, ಬಿರಿಯಾನಿ, ಚಿಕನ್‌ ಸೂಪ್‌ ಅಂತೆಲ್ಲಾ ವೆರೈಟಿ ಅಡುಗೆಗಳನ್ನು ಮಾಡಿ ಸವಿಯುತ್ತಾರೆ. ಇದರಲ್ಲಿ ಕೆಲವರು ಬ್ರಾಯ್ಲರ್‌ ಕೋಳಿಯನ್ನು ತಿಂದ್ರೆ, ಇನ್ನೂ ಅನೇಕರು ನಾಟಿ ಕೋಳಿಯನ್ನು ತಿನ್ನಲು ಇಷ್ಟಪಡುತ್ತಾರೆ. ಈಗಂತೂ ಹೆಚ್ಚಾಗಿ ಬ್ರಾಯ್ಲರ್‌ ಕೋಳಿಗಳನ್ನೇ ಬಳಸಲಾಗುತ್ತದೆ. ಆದರೆ ಇವೆರಡರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಉತ್ತಮ, ಯಾವುದರಲ್ಲಿ ಪೌಷ್ಟಿಕಾಂಶ ಹೆಚ್ಚಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಬ್ರಾಯ್ಲರ್‌ Vs ನಾಟಿ ಕೋಳಿ ಇದರಲ್ಲಿ ಯಾವುದು ಉತ್ತಮ?

ಬ್ರಾಯ್ಲರ್‌ ಕೋಳಿಗಳು ಕಡಿಮೆ ಬೆಲೆಗೆ ಲಭ್ಯವಿದೆ ನಿಜ. ಆದರೆ ಇವುಗಳನ್ನು ಕೃತಕವಾಗಿ ಬೆಳೆಸಲಾಗುತ್ತದೆ. ಇವುಗಳ ಸಾಕಾಣೆಯ ಸಮಯದಲ್ಲಿ ಇವುಗಳಿಗೆ ಹಾರ್ಮೋನು, ಪ್ರತಿಜೀವಕಗಳನನ್ನು ಬಳಸಲಾಗುತ್ತದೆ. ಆದ್ದರಿಂದ ಇದನ್ನು ಹೆಚ್ಚು ಸೇವನೆ ಮಾಡುವ ಜನ ಹೆಚ್ಚಿನ ಕೊಲೆಸ್ಟ್ರಾಲ್‌, ರೋಗ ನಿರೋಧಕ ಶಕ್ತಿಯ ಕೊರತೆ, ಹಾರ್ಮೋನು ಅಸಮತೋಲನ, ಬ್ಯಾಕ್ಟೀರಿಯಾ ಅಸಮತೋಲನದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಈ ಬ್ರಾಯ್ಲರ್‌ಗಳಿಗೆ ಹೋಲಿಸಿದರೆ ನಾಟಿ ಕೋಳಿ ಆರೋಗ್ಯಕ್ಕೆ ಉತ್ತಮ. ಗ್ರಾಮೀಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಸಲಾಗುವ ನಾಟಿ ಕೋಳಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ಬ್ರಾಯ್ಲರ್‌ ಮತ್ತು ನಾಟಿ ಕೋಳಿ ನಡುವಿನ ವ್ಯತ್ಯಾಸ:

  • 100 ಗ್ರಾಂ ಬ್ರಾಯ್ಲರ್ ಕೋಳಿ 130 ರಿಂದ 150 ಕ್ಯಾಲೊರಿಗಳನ್ನು ಹೊಂದಿದ್ದರೆ, 100 ಗ್ರಾಂ ನಾಟಿ ಕೋಳಿ 120 ಕ್ಯಾಲೊರಿಗಳನ್ನು ಹೊಂದಿರುತ್ತದೆ.
  •  ಕೊಬ್ಬಿನ ವಿಷಯದಲ್ಲಿ, ನಾಟಿ ಕೋಳಿ ಉತ್ತಮವಾಗಿದೆ. ಇದು ಕಡಿಮೆ ಕೊಬ್ಬಿನಾಂಶವನ್ನು  ಹೊಂದಿದೆ. ಬ್ರಾಯ್ಲರ್ ಕೋಳಿಯಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿದೆ
  • ನಾಟಿ ಕೋಳಿಗಳಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ, ಆದರೆ ಬ್ರಾಯ್ಲರ್ ಕೋಳಿಗಳಲ್ಲಿ ಬಹಳ ಕಡಿಮೆ ಇರುತ್ತವೆ.

ನಿಸ್ಸಂದೇಹವಾಗಿ, ನಾಟಿ ಕೋಳಿ ಬ್ರಾಯ್ಲರ್ ಕೋಳಿಗಿಂತ ಉತ್ತಮವಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವ ತಪ್ಪನ್ನು ಮಾಡಲೇಬೇಡಿ

ನಾಟಿ ಕೋಳಿಯ ಆರೋಗ್ಯ ಪ್ರಯೋಜನಗಳು:

ನಾಟಿಕೋಳಿ ಮಾಂಸವು ಪ್ರೋಟೀನ್, ವಿಟಮಿನ್ ಬಿ-ಕಾಂಪ್ಲೆಕ್ಸ್, ಡಿ, ಇ, ಸತು, ಕಬ್ಬಿಣ ಮತ್ತು ಸೆಲೆನಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವು ಸ್ನಾಯುಗಳು, ಮೂಳೆಗಳು, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತವೆ. ಇದರಲ್ಲಿ ಕೊಬ್ಬು ಕಡಿಮೆ. ಪೋಷಕಾಂಶಗಳು ಅಧಿಕವಾಗಿರುತ್ತದೆ.  ಇದು ತೂಕ ನಿರ್ವಹಣೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಒಮೆಗಾ-3,6 ಕೊಬ್ಬಿನಾಮ್ಲಗಳಿವೆ. ಇದರಲ್ಲಿ ಕೊಬ್ಬಿನ ಅಂಶವೂ ಕಡಿಮೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿರುವ ಕಬ್ಬಿಣವು ರಕ್ತಹೀನತೆಯನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ