Indian Spices: ನಿಮ್ಮ ಅಡುಗೆಮನೆಯಲ್ಲಿ ಈ 7 ಮೂಲ ಮಸಾಲೆ ಪದಾರ್ಥ ಇಡಲೇಬೇಕು

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2023 | 2:29 PM

ಹೆಚ್ಚಾಗಿ ಭಾರತೀಯ ಅಡುಗೆ ಮನೆಗಳಲ್ಲಿ ಎಲ್ಲಾ ರೀತಿಯ ಮಸಾಲೆ ಪದಾರ್ಥಗಳು ಇದ್ದೇ ಇರುತ್ತದೆ. ಈ ಕೆಲವೊಂದು ಮಸಾಲೆಗಳನ್ನು ಮುಖ್ಯವಾಗಿ ನಿಮ್ಮ ಅಡುಗೆ ಮನೆಯಲ್ಲಿ ಇಡಲೇಬೇಕು. ಅವುಗಳ ಕುರಿತ ಮಾಹಿತಿ ಇಲ್ಲಿದೆ.

Indian Spices: ನಿಮ್ಮ ಅಡುಗೆಮನೆಯಲ್ಲಿ ಈ 7 ಮೂಲ ಮಸಾಲೆ ಪದಾರ್ಥ ಇಡಲೇಬೇಕು
ಸಾಂದರ್ಭಿಕ ಚಿತ್ರ
Follow us on

ಭಾರತವು ಮಸಾಲೆ ಪದಾರ್ಥಗಳಿಗೆ ಹಿಂದಿನಿಂದಲೂ ಹೆಸರುವಾಸಿಯಾದ ದೇಶ. ಭಾರತೀಯ ಅಡುಗೆಮನೆಗಳಲ್ಲಿ ಹೆಚ್ಚಿನ ಮಸಾಲೆ ಪದಾರ್ಥಗಳು ಇದ್ದೇ ಇರುತ್ತದೆ. ಈ ಮಸಾಲೆಗಳು ಆಹಾರಕ್ಕೆ ರುಚಿಯನ್ನು ನೀಡುವುದು ಮಾತ್ರವಲ್ಲದೆ, ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿರುತ್ತವೆ. ಎಲ್ಲಾ ಮಸಾಲೆ ಪದಾರ್ಥಗಳನ್ನು ದಿನನಿತ್ಯ ಉಪಯೋಗಿಸುವುದಿಲ್ಲ. ನಾವು ತಯಾರಿಸುವ ಆಹಾರಕ್ಕೆ ಅನುಗುಣವಾಗಿ ಮಸಾಲೆ ಪದಾರ್ಥಗಳನ್ನು ಉಪಯೋಗಿಸುತ್ತೇವೆ. ದಿನನಿತ್ಯ ಉಪಯೋಗಿಸಬೇಕಾದ ಹಾಗೂ ಅಡುಗೆಮನೆಯಲ್ಲಿ ಮುಖ್ಯವಾಗಿ ಇರಬೇಕಾದ ಕೆಲವೊಂದು ಮಸಾಲೆ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.

ಅಡುಗೆ ಕೋಣೆಯಲ್ಲಿ ನೀವು ಇಡಬೇಕಾದ 7 ಭಾರತೀಯ ಮಸಾಲೆಗಳು:

ಅರಶಿನ: ಅರಶಿನ ಬಹುತೇಕ ಎಲ್ಲಾ ಭಾರತೀಯ ಅಡುಗೆ ಮನೆಯಲ್ಲಿರುವ ಪ್ರಧಾನ ಮಸಾಲೆಯಾಗಿದೆ. ಇದು ನಾವು ತಯಾರಿಸುವ ಆಹಾರಗಳಿಗೆ ಬಣ್ಣ ಹಾಗೂ ರುಚಿಯನ್ನು ನೀಡುತ್ತದೆ. ಜೊತೆಗೆ ಅರಶಿನವು ಅದರ ಉರಿಯೂತ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಡುಗೆಗೆ ಮಾತ್ರವಲ್ಲದೆ ಸೌಂದರ್ಯವರ್ಧಕಗಳಲ್ಲೂ ಈ ಅರಶಿನವನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಅಚ್ಚಖಾರದ ಪುಡಿ: ಅಚ್ಚಖಾರದ ಪುಡಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಕೆಂಪು ಮೆಣಸಿನಕಾಯಿಗಳಿಂದ ತಯಾರಿಸಲಾಗುತ್ತದೆ. ಈ ಮಸಾಲೆಯನ್ನು ದಿನನಿತ್ಯದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಪ್ರತಿ ಭಾರತೀಯ ಅಡುಗೆ ಮನೆಯಲ್ಲೂ ಈ ಮಸಾಲೆ ಪದಾರ್ಥ ಇದ್ದೇ ಇರುತ್ತದೆ. ಇದು ಆಹಾರಕ್ಕೆ ಖಾರ ಹಾಗೂ ರುಚಿ ನೀಡುತ್ತದೆ.

ಜೀರಿಗೆ: ಜೀರಿಗೆ ಕೂಡಾ ನಿಮ್ಮ ಅಡುಗೆ ಮನೆಯಲ್ಲಿ ಇಡಲೇಬೇಕಾದ ಒಂದು ಮಸಾಲೆ ಪದಾರ್ಥವಾಗಿದೆ. ಆಹಾರಗಳಲ್ಲಿ ಮಾತ್ರವಲ್ಲದೆ ಇದರಿಂದ ಅನೇಕ ರೀತಿಯ ಮನೆಮದ್ದುಗಳನ್ನು ಕೂಡಾ ತಯಾರಿಸಲಾಗುತ್ತದೆ. ಹೆಚ್ಚಿನ ಜನರು ತಯಾರಿಸಿದ ಆಹಾರಗಳಿಗೆ ಒಗ್ಗರಣೆ ನೀಡಲು ಜೀರಿಗೆಯನ್ನು ಬಳಸುತ್ತಾರೆ. ಇದು ಕಟುವಾದ ರುಚಿ ಮತ್ತು ಪರಿಮಳವನ್ನು ಹೊಂದಿದೆ ಹಾಗೂ ಅಷ್ಟೇ ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ.

ಕೊತ್ತಂಬರಿ ಬೀಜ: ಕೊತ್ತಂಬರಿ ಬೀಜ ಅಥವಾ ಧನಿಯಾವನ್ನು ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವರು ಅಡುಗೆಯನ್ನು ಸುಲಭವಾಗಿ ತಯಾರಿಸಲು ಧನಿಯಾ ಪುಡಿಯನ್ನು ಬಳಸುತ್ತಾರೆ. ಇವುಗಳು ಯಾವುದೇ ಭಕ್ಷ್ಯಗಳಿಗೆ ಬಲವಾದ ಪರಿಮಳವನ್ನು ನೀಡುತ್ತದೆ.

ಇದನ್ನೂ ಓದಿ: Benefits Of Moringa Leaves: ನುಗ್ಗೆ ಸೊಪ್ಪು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಿ

ಇಂಗು: ಹಿಂಗ್ ಎಂದೂ ಕೂಡ ಕರೆಯಲ್ಪಡುವ ಇಂಗು ಪರಿಮಳಯುಕ್ತವಾಗಿರುತ್ತದೆ. ಭಕ್ಷ್ಯಗಳಿಗೆ ಒಗ್ಗರಣೆ ನೀಡುವ ಸಂದರ್ಭದಲ್ಲಿ ಒಂದು ಚಿಟಿಕೆ ಇಂಗು ಕೂಡಾ ಹಾಕುತ್ತಾರೆ. ಈ ಹಿಂಗು ಆಹಾರ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಈ ಮಸಾಲೆಯನ್ನು ನಿಮ್ಮ ಅಡುಗೆಗಳಲ್ಲಿ ಖಂಡಿತವಾಗಿಯೂ ಬಳಸಬೇಕು.

ಪಲಾವ್ ಎಲೆ: ಈ ಎಲೆಯನ್ನು ಹೆಚ್ಚಾಗಿ ಭಾರತೀಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇವುಗಳು ಭಕ್ಷ್ಯಗಳಿಗೆ ರುಚಿಯನ್ನು ನೀಡುವುದು ಮಾತ್ರವಲ್ಲದೆ ಆಹಾರಕ್ಕೆ ಪರಿಮಳವನ್ನು ನೀಡುತ್ತದೆ.

ಈ ಏಳು ಮೂಲ ಮಸಾಲೆಗಳು ನಿಮ್ಮ ಅಡುಗೆ ಮನೆಯಲ್ಲಿ ಇರಬೇಕು. ಹಾಗೂ ಗರಂ ಮಸಾಲೆ, ಸಾಸಿವೆ, ಮೆಂತ್ಯೆ ಇನ್ನಿತರ ಮಸಾಲೆಗಳನ್ನು ಕೂಡಾ ಭಾರತೀಯ ಅಡುಗೆ ಮನೆಗಳಲ್ಲಿ ಬಳಸಲಾಗುತ್ತದೆ.