Tattoo Fashion: ತನ್ನ ದೇಹ ಮೇಲೆ 540 ಟ್ಯಾಟೂ ಹಾಕಿಸಿಕೊಂಡು ವಿಶ್ವ ದಾಖಲೆ ಬರೆದ ಟ್ಯಾಟೂ ಕಲಾವಿದ
ಒಬ್ಬ ಸಾಮಾನ್ಯ ಟ್ಯಾಟೂ ಸಂಗ್ರಹಕಾರನಾಗಿದ್ದ ವ್ಯಕ್ತಿ ಇಂದು ಟ್ಯಾಟೂ ಕಲಾವಿದನಾಗಿದ್ದು ಮಾತ್ರವಲ್ಲದೆ ತನ್ನ ದೇಹದಲ್ಲಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಮೂಲಕ ಎರಡು ವಿಶ್ವದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಬ್ಬ ಸಾಮಾನ್ಯ ಟ್ಯಾಟೂ (Tattoo) ಸಂಗ್ರಹಕಾರನಾಗಿದ್ದ ವ್ಯಕ್ತಿ ಇಂದು ಟ್ಯಾಟೂ ಕಲಾವಿದನಾಗಿದ್ದು ಮಾತ್ರವಲ್ಲದೆ ತನ್ನ ದೇಹದಲ್ಲಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಮೂಲಕ ಎರಡು ವಿಶ್ವದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೇಸನ್ ಮ್ಯಾಥ್ಯೂ ಜಾರ್ಜ್ ಎಂಬ 31 ವರ್ಷದ ಟ್ಯಾಟೂ ಕಲಾವಿದ ತಮ್ಮ ದೇಹದಲ್ಲಿ 540 ಟ್ಯಾಟೂಗಳನ್ನು ಹಚ್ಚೆ ಹಾಕಿಸಿಕೊಂಡಿದ್ದು, ಇದೀಗ ಎರಡು ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಒಂದು ತನ್ನ ದೇಹದ ಮೇಲೆ 521 ಬ್ರಾಂಡ್ ಲೋಗೋ ಟ್ಯಾಟೂಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಕ್ಕಾಗಿ ವಿಶ್ವದಾಖಲೆಯನ್ನು ಮಾಡಿದ್ದಾರೆ. ಇನ್ನೊಂದು ಕೇವಲ 10 ದಿನಗಳಲ್ಲಿ ತನ್ನ ದೇಹದ ಮೇಲೆ 100 ಟ್ಯಾಟೂಗಳನ್ನು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.
ಇವರು ಮೊದಲು ತಾನು ಟ್ಯಾಟೂ ಕಲಾವಿದ ಆಗಬೇಕು ಎಂದು ಯೋಚಿಸಿರಲಿಲ್ಲ. ಬದಲಾಗಿ ಇವರು ಟ್ಯಾಟೂ ಸಂಗ್ರಾಹಕರಾಗಿದ್ದರು. ಒಮ್ಮೆ 2010ರಲ್ಲಿ ಒಬ್ಬ ವ್ಯಕ್ತಿ ಇವರ ಕೈಯನ್ನು ಟ್ಯಾಟೂ ಹಾಕುವ ಸಲುವಾಗಿ ಸಂಪೂರ್ಣ ಹಾಳು ಮಾಡಿದ್ದನಂತೆ, ಈ ಘಟನೆಯೇ ಇವರಿಗೆ ಟ್ಯಾಟೂ ಕಲಾವಿದನಾಗಲು ಮಹತ್ವದ ತಿರುವನ್ನು ನೀಡಿತು. ನಂತರ ಜನರಿಗೆ ಈ ರೀತಿಯ ಕೆಟ್ಟ ಟ್ಯಾಟೂವನ್ನು ಹಾಕದೆ, ಸುಂದರವಾಗಿ ಟ್ಯಾಟೂ ಬಿಡಿಸಬೇಕೆಂದು ಪಣತೊಟ್ಟು ಜೇಸನ್ ಅವರು ಟ್ಯಾಟೂ ಕಲಾವಿದರಾದರು. 2021ರಲ್ಲಿ 0-Z ವರೆಗೆ ಎಲ್ಲಾ ಬ್ರಾಂಡ್ ಹೆಸರುಗಳನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡ ಏಕೈಕ ವ್ಯಕ್ತಿಯೆಂಬ ಹೊಸ ದಾಖಲೆಯನ್ನು ಜೇಸನ್ ಪಡೆದುಕೊಂಡಿದ್ದಾರೆ. ಬ್ರಾಂಡ್ ಲೋಗೊಗಳನ್ನು ಹಚ್ಚೆ ಹಾಕಿಸಿಕೊಳ್ಳುವುದು ನನಗೆ ಬಹಳ ಇಷ್ಟ ಎಂದು ಜೇಸನ್ ಹೇಳುತ್ತಾರೆ. ದೇಹದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಜೇಸನ್ ಈಗ ಟ್ಯಾಟೂ ಹಾಕಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ.
ಇದನ್ನೂ ಓದಿ: Finger Tattoos: ಯುನಿಕ್ ಲುಕ್ ನೀಡುವ ಫಿಂಗರ್ ಟ್ಯಾಟೂ ವಿನ್ಯಾಸಗಳು ಇಲ್ಲಿವೆ
ಜೇಸನ್ ಅವರು ಬದುಕಿನಲ್ಲಿ ಸೋಲು ಗೆಲುವಿನ ಪಾಠ ಕಲಿಯುವ ಸಲುವಾಗಿ ಬ್ರ್ಯಾಂಡ್‌ಗಳ ಹಚ್ಚೆ ಹಾಕಿಸಿದ್ದಾರೆ. ಜೇಸನ್ ಹೇಳುತ್ತಾರೆ, ಕೋಕೋ ಕೋಲಾ ಎಷ್ಟೇ ದೊಡ್ಡವರಾದರೂ ನೀವು ನಿಮ್ಮನ್ನು ಜಾಹೀರಾತು ಮಾಡಿಕೊಳ್ಳಬೇಕು ಎಂಬುದನ್ನು ಕಲಿಸಿದೆ. ಹಾಗೂ ಆಂಡ್ರಾಯ್ಡ್ರ್ನ ನೋಕಿಯ ಸ್ವೀಕರಿಸಿರಲಿಲ್ಲ, ನಂತರ ನೋಕಿಯಾ ಪತನವಾಯಿತು. ಇದರಿಂದ ನೀವು ಎಷ್ಟೇ ದೊಡ್ಡವರಾದರೂ, ಸಮಯಕ್ಕೆ ತಕ್ಕ ಹಾಗೆ ಬದಲಾಗುಬೇಕು ಎಂಬುದನ್ನು ಕಲಿತೆ ಎಂದು ಜೇಸನ್ ಹೇಳುತ್ತಾರೆ.
ನನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಈ ಬ್ರ್ಯಾಂಡ್ ಲೋಗೋಗಳು ನನ್ನ ಜೀವನದ ಮೇಲೆ ವೈಯಕ್ತಿಕವಾಗಿ ಪ್ರಭಾವ ಬೀರಿದೆ. ಉತ್ತಮ ಜೀವನ ಪಾಠವನ್ನು ಕಲಿಸಿದೆ. ನನ್ನ ಮೊದಲ ಮೊಬೈಲ್ ಫೋನ್, ನಾನು ಭೇಟಿ ನೀಡಿದ ಸ್ಥಳಗಳು, ನನ್ನ ಕಾಲೇಜು ದಿನಗಳು, ನನ್ನ ನೆಚ್ಚಿನ ಆಟಿಕೆಗಳು ಹೀಗೆ ನನಗೆ ಇಷ್ಟವಾದ ಎಲ್ಲವನ್ನು ನನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ಜೇಸನ್ ಮ್ಯಾಥ್ಯೂ ಜಾರ್ಜ್ ಹೇಳಿದ್ದಾರೆ.
Published On - 4:34 pm, Wed, 15 March 23