Viral Post: 47 ನೇ ವಯಸ್ಸಿನಲ್ಲಿ ಗರ್ಭಧಾರಣೆ, ಕಡೆಗೂ ನೆರವೇರಿದ ಕನಸು
ಮಲಯಾಳಂ ಕಿರುತೆರೆ ನಟಿ ಇತ್ತೀಚೆಗಷ್ಟೆ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತನ್ನ ಕನಸು ನೆರವೇರುತ್ತಿರುವ ಸುಂದರ ಕ್ಷಣಗಳ ಬಗ್ಗೆ ಫೋಸ್ಟ್ ಹಂಚಿಕೊಂಡಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮಲಯಾಳಂ ಕಿರುತೆರೆ ನಟಿ ಇತ್ತೀಚೆಗಷ್ಟೆ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತನ್ನ ಕನಸು ನೆರವೇರುತ್ತಿರುವ ಸುಂದರ ಕ್ಷಣಗಳ ಬಗ್ಗೆ ಫೋಸ್ಟ್ ಹಂಚಿಕೊಂಡಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನನ್ನ ಬಾಲ್ಯದ ಕನಸು 23 ನೇ ವಯಸ್ಸಿನಲ್ಲಿ ಅಂತಿಮವಾಗಿ ನನಸಾಗುತ್ತಿದೆ. ನನ್ನ ಪುಟ್ಟ ತಂಗಿ ಅಥವಾ ತಮ್ಮನನ್ನು ಬರಮಾಡಿಕೊಳ್ಳಲು ಕಾತುತದಿಂದ ಕಾಯುತ್ತಿದ್ದೇನೆ ಎಂದು ತನ್ನ ತಾಯಿ 47 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಬಾಲ್ಯದಿಂದಲೂ ನನಗೆ ಒಡಹುಟ್ಟಿದವರು ಬೇಕು, ಅವರ ಜೊತೆ ಆಟ ಆಟಬೇಕು ಎಂಬ ಸಾಕಷ್ಟು ಕನಸಿತ್ತು. ಆದರೆ ನನ್ನ ತಾಯಿಯ ಗರ್ಭಾಶಯದ ಸಮಸ್ಯೆಯಿಂದ ಈ ಆಸೆ ಕನಸಾಗಿಯೇ ಉಳಿದಿತ್ತು. ಇದೀಗಾ ನನ್ನ ಬಾಲ್ಯದ ಕನಸು 23ವಯಸ್ಸಿನಲ್ಲಿ ನನಸಾಗುತ್ತಿದೆ ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಕಷ್ಟು ಅಡೆ ತಡೆ, ಸಮಸ್ಯೆಗಳ ನಂತರ ನನ್ನ ತಾಯಿ 47ನೇ ವಯಸ್ಸಿನಲ್ಲಿ ಗರ್ಭಿಣೆಯಾಗಿದ್ದಾರೆ. ಇದು ನಮ್ಮ ಇಡೀ ಕುಟುಂಬಕ್ಕೆ ಸಂತೋಷವನ್ನು ತಂದು ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ನಟಿ ಆರ್ಯ ಪಾರ್ವತಿ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಸಾವಿರಾರು ಜನಗಳ ಮಧ್ಯೆ ಕಿಚ್ಚ ಎಂದು ಕೂಗಿದ ಪುಟ್ಟ ಹುಡುಗಿ, ಇಲ್ಲಿದೆ ನೋಡಿ ವಿಡಿಯೋ
ನಟಿ ಆರ್ಯ ಹುಟ್ಟಿದ ನಂತರ ತಾಯಿಗೆ ಗರ್ಭಾಶಯದ ಸಮಸ್ಯೆ ಕಂಡು ಬಂದಿದ್ದು, ಈ ಸಮಸ್ಯೆಗಳಿಂದಾಗಿ ಮತ್ತೆ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಇದೀಗಾ ಈ ಸುದ್ದಿ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಆರ್ಯ ನನ್ನ ಅಪ್ಪ ಅಮ್ಮ ದೇವಸ್ಥಾನಕ್ಕೆ ಹೋಗಿದ್ದಾಗ, ನನ್ನ ತಾಯಿಗೆ ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಉಂಟಾಗಿದೆ. ನಂತರ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಿಣಿ ಎಂದು ತಿಳಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: