ಸಾವಿರಾರು ಜನಗಳ ಮಧ್ಯೆ ಕಿಚ್ಚ ಎಂದು ಕೂಗಿದ ಪುಟ್ಟ ಹುಡುಗಿ, ಇಲ್ಲಿದೆ ನೋಡಿ ವಿಡಿಯೋ

ನಟ ಕಿಚ್ಚ ಸುದೀಪ್​​​ ಅವರನ್ನು ಸಾವಿರಾರೂ ಜನರ ಮಧ್ಯೆ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿಚ್ಚ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಸಾವಿರಾರು ಜನಗಳ ಮಧ್ಯೆ ಕಿಚ್ಚ ಎಂದು ಕೂಗಿದ ಪುಟ್ಟ ಹುಡುಗಿ, ಇಲ್ಲಿದೆ ನೋಡಿ ವಿಡಿಯೋ
ನಟ ಕಿಚ್ಚ ಸುದೀಪ್ Image Credit source: Instagram
Follow us
ಅಕ್ಷತಾ ವರ್ಕಾಡಿ
|

Updated on:Mar 14, 2023 | 3:58 PM

ನಟ ಕಿಚ್ಚ ಸುದೀಪ್(Kiccha Sudeep)​​​ ಅವರನ್ನು ಸಾವಿರಾರೂ ಜನರ ಮಧ್ಯೆ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿಚ್ಚ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media) ದಲ್ಲಿ ವೈರಲ್​​ ಆಗಿದೆ. ಜೊತೆಗೆ ಅಭಿಮಾನವನ್ನು ಮೆಚ್ಚಿ ಕಿಚ್ಚ ಸುದೀಪ್​​ ಈ ಪುಟ್ಟ ಹುಡುಗಿಯನ್ನು ಮುದ್ದಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಮಾರ್ಚ್​ 11ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಮೂರೇ ದಿನಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಆ ಪೋಸ್ಟ್​​​ ಇಲ್ಲಿದೆ ನೋಡಿ.

ಈ ವಿಡಿಯೋವನ್ನು ಮಾರ್ಚ್​ 11ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. @attitude__kiccha ಎಂಬ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾದ ಈ ವಿಡಿಯೋ ಮೂರೇ ದಿನಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಈ ವಿಡಿಯೋ 2,330,764 ವೀಕ್ಷಣೆ ಪಡೆದಿದ್ದು, ಸಾಕಷ್ಟು ಲೈಕ್​​, ಕಾಮೆಂಟ್​​ ಹಾಗೂ ಶೇರ್​​ ಪಡೆದುಕೊಂಡಿದೆ.

ಇದನ್ನೂ ಓದಿ: ಯುವಕರೇ ನಾಚಿ ನೀರಾಗುವಂತೆ ಜಿಮ್​​ನಲ್ಲಿ ಫಿಟ್ನೆಸ್​​ ಮೆಂಟೇನ್​​​​ ಮಾಡುತ್ತಿರುವ 103ರ ವಯಸ್ಸಿನ ಅಜ್ಜಿ

ವಿಡಿಯೋದಲ್ಲಿ ಪುಟ್ಟ ಹುಡುಗಿ ಜೋರಾಗಿ ಕಿಚ್ಚ ಎಂದು ಸಾವಿರಾರೂ ಜನಗಳ ಮಧ್ಯೆ ಕರೆಯುವುದನ್ನು ಕಾಣಬಹುದು. ಇನ್ನೊಂದು ಕ್ಲಿಪ್​​ನಲ್ಲಿ ಮಗುವಿನ ಅಭಿಮಾನವನ್ನು ಮೆಚ್ಚಿ ಸುದೀಪ್​​​ ಮಗುವನ್ನು ಮುದ್ದಾಡುವುದನ್ನು ಕಾಣಬಹುದು. ಸುದೀಪ್​​ ಅವರ ಅಭಿಮಾನಿಗಳ ಮನಗೆದ್ದಿರುವ ಈ ಪುಟ್ಟ ಹುಡುಗಿಯ ಬಗ್ಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಜೊತೆಗೆ ಸಾಕಷ್ಟು ಸುದೀಪ್​ ಅಭಿಮಾನಿಗಳು ಇದು ನಮ್ಮ ಕಿಚ್ಚಾ ಬಾಸ್​​ ಪವರ್​​ ಅಂತಾ ಕಾಮೆಂಟ್​​ ಮಾಡಿದ್ದಾರೆ. ಇದಲ್ಲದೇ ಜೈ ಕಿಚ್ಚ ಬಾಸ್​​ ಅಂತ ಸಾಕಷ್ಟು ಪ್ರತಿಕ್ರಿಯೆಗಳನ್ನು ಕಾಣಬಹುದಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:58 pm, Tue, 14 March 23