Viral Video: 52 ವರ್ಷದ ಮಹಿಳೆಯ ಎನರ್ಜಿಟಿಕ್ ಡಾನ್ಸ್ಗೆ ನೆಟ್ಟಿಗರು ಫಿದಾ
52ವರ್ಷದ ಮಹಿಳೆಯೊಬ್ಬರು ಸೀರೆಯುಟ್ಟು ಗೋರಿ ಗೋರಿಗೆ ಹಾಡಿಗೆ ಸ್ಟೆಪ್ ಹಾಕಿದ್ದು, ಈ ವಯಸ್ಸಿನಲ್ಲೂ ಇವರ ಎನರ್ಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ರೀಲ್ಸ್ಗಳು, ಪೋಸ್ಟ್ಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಭಾರೀ ಸುದ್ದಿಯಲ್ಲಿರುತ್ತವೆ. ಅಂತದ್ದೇ ಒಂದು ವಿಡಿಯೋ ಈಗ ಸುದ್ದಿಯಲ್ಲಿದೆ. 52 ವರ್ಷದ ಮಹಿಳೆಯೊಬ್ಬರು ಸೀರೆಯುಟ್ಟು ಗೋರಿ ಗೋರಿಗೆ ಹಾಡಿಗೆ ಸ್ಟೆಪ್ ಹಾಕಿದ್ದು, ಈ ವಯಸ್ಸಿನಲ್ಲೂ ಇವರ ಎನರ್ಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋ ಈಗಾಗಲೇ ಲಕ್ಷಾಂತರ ಜನರನ್ನು ತಲುಪಿದೆ. ಈ ವಯಸ್ಸಿನಲ್ಲೂ ಇವರ ಈ ಎನರ್ಜಿಗೆ ಒಂದು ದೊಡ್ಡ ಸಲಾಂ ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ. 52 ವರ್ಷದ ಮಹಿಳೆಯ ಎನರ್ಜಿಟಿಕ್ ಡಾನ್ಸ್ ವಿಡಿಯೋ ಇಲ್ಲಿದೆ ನೋಡಿ.
View this post on Instagram
Gori Gori @ 52 ಎಂದು ಕ್ಯಾಪ್ಷನ್ ಬರೆದು ಸ್ವತಃ ಈ ಎನರ್ಜಿಟಿಕ್ ಲೇಡಿಯೇ ತಮ್ಮ ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. 20ಸಾವಿರ ಲೈಕ್ ಹಾಗೂ ಸಾಕಷ್ಟು ಕಾಮೆಂಟ್ಗಳನ್ನು ಪಡೆದುಕೊಂಡಿದೆ. ಈ ಹಾಡು 2004 ರ ಮೈ ಹೂ ನಾ ಚಿತ್ರದಿಂದ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ರೀಲ್ಸ್ಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಸಾವಿರಾರು ಜನಗಳ ಮಧ್ಯೆ ಕಿಚ್ಚ ಎಂದು ಕೂಗಿದ ಪುಟ್ಟ ಹುಡುಗಿ, ಇಲ್ಲಿದೆ ನೋಡಿ ವಿಡಿಯೋ
ಶಾರುಖ್ ಖಾನ್, ಸಾಜಿದ್ ಖಾನ್, ಜಾಯೆದ್ ಖಾನ್, ಸುಶ್ಮಿತಾ ಸೇನ್, ಅಮೃತ ರಾವ್ ಮತ್ತು ಸುನೀಲ್ ಶೆಟ್ಟಿ ಮುಂತಾದ ನಟ ನಟಿಯರನ್ನು ಈ ಚಿತ್ರದಲ್ಲಿ ನಟಿಸಿದ್ದಾರೆ. ಜಾವೇದ್ ಅಖ್ತರ್ ಸಾಹಿತ್ಯ ಹಾಗೂ ಅನು ಮಲಿಕ್ ಹಾಡನ್ನು ಸಂಯೋಜಿಸಿದ್ದು, ಸುನಿಧಿ ಚೌಹಾನ್ ಮತ್ತು ಶ್ರೇಯಾ ಘೋಷಾಲ್ ಹಾಡಿಗೆ ಧ್ವನಿ ನೀಡಿದ್ದಾರೆ. ಈ ವೀಡಿಯೊವನ್ನು ಜನವರಿ 22 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದು 3.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 20,000 ಕ್ಕೂ ಹೆಚ್ಚು ಲೈಕುಗಳನ್ನು ಸಂಗ್ರಹಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: