ಆನೆ ನಡೆದಿದ್ದೇ ದಾರಿ! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯಬೇಕಾದ ಆನೆ, 3 ಕಾಲಿನಲ್ಲಿ ನಡೆದು ಜೀವನ ಸಾಗಿಸುವುದನ್ನು ನೋಡಿದ್ದೀರಾ?

ಜೀವನವೇ ಒಂದು ಹೋರಾಟ! ವಿಡಿಯೋದಲ್ಲಿರುವ ಆ ದೃಶ್ಯ ನೇರವಾಗಿ ನಿಮ್ಮ ಹೃದಯವನ್ನು ಸ್ಪರ್ಶಿಸುವುದು ಖಂಡಿತ. ಸಾಮಾನ್ಯವಾಗಿ ತಾನು ನಡೆದಿದ್ದೇ ದಾರಿ ಎಂಬಂತೆ ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುವ ಆನೆ, ಮೂರು ಕಾಲಿನಲ್ಲಿ ನಡೆದು ಜೀವನ ಸಾಗಿಸುವುದನ್ನು ಇಲ್ಲಿ ನೋಡಿ!

ಆನೆ ನಡೆದಿದ್ದೇ ದಾರಿ! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯಬೇಕಾದ ಆನೆ, 3 ಕಾಲಿನಲ್ಲಿ ನಡೆದು ಜೀವನ ಸಾಗಿಸುವುದನ್ನು ನೋಡಿದ್ದೀರಾ?
ಗಜ ಗಾಂಭೀರ್ಯದ ಆನೆ ನಡೆದಿದ್ದೇ ದಾರಿ! ಆದರೆ...
Follow us
ಸಾಧು ಶ್ರೀನಾಥ್​
|

Updated on:Mar 14, 2023 | 5:38 PM

ಜೀವನವೇ ಒಂದು ಹೋರಾಟ! ವಿಡಿಯೋದಲ್ಲಿರುವ ಆ ದೃಶ್ಯ ನೇರವಾಗಿ ನಿಮ್ಮ ಹೃದಯವನ್ನು ಸ್ಪರ್ಶಿಸುವುದು ಖಂಡಿತ. ಸಾಮಾನ್ಯವಾಗಿ ತಾನು ನಡೆದಿದ್ದೇ ದಾರಿ ಎಂಬಂತೆ ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುವ ಆನೆ, ಮೂರು ಕಾಲಿನಲ್ಲಿ ನಡೆದು ಜೀವನ ಸಾಗಿಸುವುದನ್ನು ಇಲ್ಲಿ ನೋಡಿ! ಕೆಲವೊಮ್ಮೆ ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತ ಮತ್ತು ಹೋರಾಟದ ಕೌಶಲ್ಯವನ್ನು ತುಸು ಹೆಚ್ಚೇ ಹೊಂದಿರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ..? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವೊಂದು ಆ ಕಟು ಸತ್ಯವನ್ನು ಸಾಬೀತುಪಡಿಸಿದೆ. ದಕ್ಷಿಣ ಆಫ್ರಿಕಾದ (South Africa) ಸುಕಾ ಪ್ರೈವೇಟ್ ಗೇಮ್ ರಿಸರ್ವ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಡೈಲನ್ ಪೊನ್ಸ್ ಅವರು (content creator Dylan Pons) ರೆಕಾರ್ಡ್ ಮಾಡಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹೃದಯವನ್ನು ಆರ್ದ್ರಗೊಳಿಸುವ ಈ ವೀಡಿಯೊದಲ್ಲಿ, ಮೂರು ಕಾಲಿನ ಆನೆಯೊಂದು ಕಾಡಿನಲ್ಲಿ ಸಂಚರಿಸುತ್ತಿದೆ. ಡೈಲನ್ ಪೊನ್ಸ್ ಅವರು ಈ ಆನೆಯನ್ನು ವುಟೊಮಿ ಎಂದು ವೀಡಿಯೊ ಜೊತೆಗಿನ ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ. ವೀಡಿಯೊದಲ್ಲಿ, ವುಟೋಮಿ (3 legged elephant Vutomi ) ತನ್ನ ಮೂರು ಕಾಲುಗಳ ಮೇಲೆ ಬ್ಯಾಲೆನ್ಸ್​ ಮಾಡುತ್ತಾ, ಅಪ್ಪಿತಪ್ಪಿಯೂ ಬೀಳದೆ ಬಹಳ ಎಚ್ಚರಿಕೆಯಿಂದ, ಕಷ್ಟದಿಂದ ಮುನ್ನಡೆಯುತ್ತಾ… ತನ್ನ ಆನೆಗಳ ಹಿಂಡಿನ ಕಡೆಗೆ ನಡೆಯುತ್ತಾಳೆ. ಕೇವಲ 10 ಸೆಕೆಂಡುಗಳ ಈ ವೀಡಿಯೋವನ್ನು ಮತ್ತೆ ಮತ್ತೆ ನೋಡುವಂತಾಗುತ್ತದೆ ನಿಮಗೆ.

ಕ್ರುಗರ್ ರಾಷ್ಟ್ರೀಯ ಉದ್ಯಾನವನದ ನೇಮಾನಿ ಅಣೆಕಟ್ಟಿನ ಬಳಿ ಈ ದೃಶ್ಯ ಕಂಡುಬಂದಿದೆ. ವುಟೋಮಿಗೆ ಹಿಂದಿನ ಬಲ ಕಾಲು ಇಲ್ಲ. ಅಪಘಾತ ಅಥವಾ ಬೇಟೆಗಾರರಿಂದ ಆನೆ ಕಾಲು ಕಳೆದುಕೊಂಡಿರಬಹುದು ಎಂದು ಪೋನ್ಸ್ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ವಿಡಿಯೋದಲ್ಲಿರುವ ಆ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಕಾಲು ಕಳೆದುಕೊಂಡರೂ ತನ್ನ ಗುಂಪಿನೊಂದಿಗೆ ಸಾಮಾನ್ಯ ಜೀವನ ನಡೆಸುವ ವುಟೊಮಿಯ ಸಂಕಲ್ಪದಿಂದ ನಾವು ಮನುಷ್ಯರು ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:

ಸಾಲ ತೀರಿಸಲು 80 ಸಾವಿರ ರೂ ತಂದಿದ್ದ ಮಹಿಳೆಯನ್ನು ನಿಗೂಢವಾಗಿ ಕೊಲೆ ಮಾಡಿ, ಭದ್ರಾ ಸೇತುವೆ ಬಳಿ ನಗ್ನ ಸ್ಥಿತಿಯಲ್ಲಿ ಬಿಸಾಡಿ ಹೋದರು

ವುಟೊಮಿ ಇತರ ಆನೆಗಳೊಂದಿಗೆ ನಡೆಯುವುದನ್ನು ನೋಡಿದ ಇಡೀ ಹಿಂಡು ಅದನ್ನು ಅಪ್ಪಿಕೊಂಡು, ಅದನ್ನು ಬೆಂಬಲಿಸಿ, ಅದಕ್ಕೆ ಅಪಾರವಾದ ಸಹಾನುಭೂತಿಯನ್ನು ಸೂಚಿಸಿತು ಎಂದು ತಾವು ಗಮನಿಸಿದ್ದನ್ನು ಅವರು ಟಿಪ್ಪಣಿ ಮಾಡಿದ್ದಾರೆ. ವುಟೋಮಿಯಂತಹ ಪ್ರಾಣಿಗಳು ಇನ್ನೂ ಕಾಡಿನಲ್ಲಿರಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ ತಮ್ಮ ಟ್ವೀಟ್ ನಲ್ಲಿ!

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:32 pm, Tue, 14 March 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್