AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ವಾರದ 7 ದಿನದಲ್ಲಿ ಮೂರು ದಿನ ಅವಳ ಜತೆ, ಮೂರು ದಿನ ಇವಳ ಜತೆ, ಬಾಕಿ ಒಂದು ದಿನ?

28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದ ಮೇರೆಗೆ ಇಬ್ಬರ ಜೊತೆಗೆ ಜೀವನ ನಡೆಸುತ್ತಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಂಡುಬಂದಿದೆ.

Viral News: ವಾರದ 7 ದಿನದಲ್ಲಿ ಮೂರು ದಿನ ಅವಳ ಜತೆ, ಮೂರು ದಿನ ಇವಳ ಜತೆ, ಬಾಕಿ ಒಂದು ದಿನ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Mar 15, 2023 | 11:19 AM

Share

ಗ್ವಾಲಿಯರ್‌: 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ (software engineer) ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದ ಮೇರೆಗೆ ಇಬ್ಬರ ಜೊತೆಗೆ ಜೀವನ ನಡೆಸುತ್ತಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಂಡುಬಂದಿದೆ. ಈ ವ್ಯಕ್ತಿ ತನ್ನ ಇಬ್ಬರು ಹೆಂಡತಿಯರಿಗೆ ಸಮಾನ ಸಮಯವನ್ನು ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಇಬ್ಬರು ಮಹಿಳೆಯರ ನಡುವೆ ತನ್ನ ಸಮಯವನ್ನು ಹಂಚಿಕೊಂಡಿದ್ದಾಋಎ. ವಾರದ ಮೂರು ದಿನಗಳನ್ನು ಒಬ್ಬ ಹೆಂಡತಿಯೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಲು ಅವನು ಒಪ್ಪಿಕೊಂಡಿದ್ದಾರೆ. ಆದರೆ ವಾರ 7 ದಿನಗಲ್ಲಿ ಮೂರು -ಮೂರು ದಿನ ಇಬ್ಬರು ನಡುವೆ ಕಳೆದರೆ ಭಾನುವಾರ ಅವನಿಗೆ ಬಿಟ್ಟುದ್ದು ಇಬ್ಬರಲ್ಲಿ ಯಾರ ಜೊತೆ ಬೇಕಾದರೂ ಸಮಯ ಕಳೆಯಬಹುದು. ಈ ವ್ಯಕ್ತಿ ತನ್ನ ಇಬ್ಬರು ಪತ್ನಿಯರಿಗೂ ಪ್ರತ್ಯೇಕ ಫ್ಲಾಟ್‌ಗಳನ್ನು ಒದಗಿಸಬೇಕಾಗಿತ್ತು. ಇದರ ಜೊತೆಗೆ ಆ ಇಬ್ಬರು ಮಹಿಳೆಯರು ಮಕ್ಕಳ ಜವಾಬ್ದಾರಿ ಈ ವ್ಯಕ್ತಿಯ ಮೇಲಿದೆ.

3 ಜನರ ಮಧ್ಯೆ ಒಪ್ಪಂದದ  ಏನು?

ಈ ಸಮಸ್ಯೆಯನ್ನು ಪರಿಹರಿಸಲು ಜನವರಿ 2023ರಲ್ಲಿ ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು ನೇಮಿಸಿದ ಸಲಹೆಗಾರರಾದ ವಕೀಲ ಹರೀಶ್ ದಿವಾನ್ ಅವರು 26 ವರ್ಷದ ಮಹಿಳೆ ಮೇ 2018 ರಲ್ಲಿ ಈ ವ್ಯಕ್ತಿಯನ್ನು ವಿವಾಹವಾದರು ಎಂದು ಹೇಳಿದರು. ಇತ ಗುರುಗ್ರಾಮ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ನಂತರ ದಂಪತಿಗಳು ಗ್ವಾಲಿಯರ್‌ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗನೂ ಇದ್ದಾನೆ.

2020ರಲ್ಲಿ, ಕೊರನಾ ಪ್ರಾರಂಭವಾದ ನಂತರ ದಂಪತಿಗಳು ಗ್ವಾಲಿಯರ್‌ಗೆ ಬಂದರು ಮತ್ತು ಆ ವ್ಯಕ್ತಿ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದರು. ಗ್ವಾಲಿಯರ್‌ನಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಅವರು ಗುರುಗ್ರಾಮ್‌ಗೆ ಹಿಂತಿರುಗಿದರು. ಪರಿಸ್ಥಿತಿ ಹದಗೆಟ್ಟರೂ ತನ್ನ ಹೆಂಡತಿ ಮತ್ತು ಮಗುವನ್ನು ಮತ್ತೆ ಕೆರಸಿಕೊಂಡಿಲ್ಲ.

ಗ್ವಾಲಿಯರ್‌ನಿಂದ ಗುರುಗ್ರಾಮ್‌ಗೆ ಬರುವುದಾಗಿ ಪತ್ನಿ ಹೇಳಿದ್ದು, 2021ರಲ್ಲಿ ಆ ವ್ಯಕ್ತಿ ಅದೇ ಕಂಪನಿಯ ತನ್ನ ಸಹೋದ್ಯೋಗಿಯನ್ನು ಮದುವೆಯಾಗಿರುವುದು ಆಕೆಯ ಕುಟುಂಬಕ್ಕೆ ಗೊತ್ತಾಗಿದೆ. ಎರಡನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಹಿಳೆ ಜೀವನಾಂಶಕ್ಕಾಗಿ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಮಂಗಳವಾರ ನಡೆಯಬೇಕಿದ್ದ ವಿಚಾರಣೆಯ ಮೊದಲು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವಂತೆ ವಕೀಲ ಮತ್ತು ಸಲಹೆಗಾರ ಹರೀಶ್ ದಿವಾನ್ ಅವರಿಗೆ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Viral News: ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ, ಮದುವೆ ಮುರಿದುಕೊಂಡ ವರ

ದಿವಾನ್ ಆ ವ್ಯಕ್ತಿಯೊಂದಿಗೆ ಮಾತನಾಡಿ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಬೇರೆ ಮಹಿಳೆಯನ್ನು ಮದುವೆಯಾಗುವುದು ಹಿಂದೂ ವಿವಾಹ ಕಾಯ್ದೆಯಡಿ ಶಿಕ್ಷಾರ್ಹ ಎಂದು ಹೇಳಿದರು. ಮೊದಲ ಪತ್ನಿ ಎಫ್‌ಐಆರ್ ದಾಖಲಿಸಿದರೆ ಕೆಲಸ ಕಳೆದುಕೊಳ್ಳಬಹುದು ಎಂದು ವಕೀಲರು ಆ ವ್ಯಕ್ತಿಗೆ ತಿಳಿಸಿದ್ದಾರೆ.

ನಂತರ ನ್ಯಾಯಾಲಯದ ಹೊರಗೆ ಒಪ್ಪಂದಕ್ಕೆ ಬರಲು ಒಪ್ಪಿಕೊಂಡರು. ಒಪ್ಪಂದದ ಪ್ರಕಾರ, ಈ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಭಾನುವಾರ ಯಾರ ಜೊತೆ ಇರಬೇಕು ಎಂಬುದು ಅವನ ಆಯ್ಕೆ ಎಂದು ಹೇಳಿತ್ತು.

Published On - 11:19 am, Wed, 15 March 23

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ