Viral Video: ಮದುವೆಯಾಗ್ತಿದ್ದಂತೆ ವಧು ತನ್ನ ಪತಿಗೆ ಕೋಲಿನಿಂದ ಹೊಡೆಯೋದಂತೆ, ಇದೆಂಥಾ ಸಂಪ್ರದಾಯ ಮಾರಾಯ್ರೆ
ಮದುವೆ(Marriage) ಎಂದಾಕ್ಷಣ ಎರಡು ಕುಟುಂಬಗಳು ಒಂದಾಗುತ್ತವೆ, ಇಬ್ಬರದ್ದೂ ಒಂದೊಂದು ರೀತಿಯ ಪದ್ಧತಿಗಳಿರಬಹುದು. ಆದರೆ ಕೆಲವೊಂದು ಪದ್ಧತಿಗಳು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡುತ್ತವೆ, ಇದೀಗ ಸಾಮಾಜಿಕ ಜಾಲತಾಣವೊಂದರಲ್ಲಿ ವೈರಲ್ ಆದ ವಿಡಿಯೋ ನೋಡಿ ಜನರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಮದುವೆ(Marriage) ಎಂದಾಕ್ಷಣ ಎರಡು ಕುಟುಂಬಗಳು ಒಂದಾಗುತ್ತವೆ, ಇಬ್ಬರದ್ದೂ ಒಂದೊಂದು ರೀತಿಯ ಪದ್ಧತಿಗಳಿರಬಹುದು. ಆದರೆ ಕೆಲವೊಂದು ಪದ್ಧತಿಗಳು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡುತ್ತವೆ, ಇದೀಗ ಸಾಮಾಜಿಕ ಜಾಲತಾಣವೊಂದರಲ್ಲಿ ವೈರಲ್ ಆದ ವಿಡಿಯೋ ನೋಡಿ ಜನರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಕೆಲವೊಮ್ಮೆ ಕೆಲವು ಪದ್ಧತಿಗಳನ್ನು ನಡೆಸುವಾಗ ಎರಡೂ ಕುಟುಂಬದ ನಡುವೆ ಜಗಳವಾಗುತ್ತದೆ, ನಮ್ಮ ಕಡೆ ಆ ಸಂಪ್ರದಾಯವಿಲ್ಲ, ನಮ್ಮ ಕಡೆ ಈ ಸಂಪ್ರದಾಯವಿಲ್ಲ ಎಂದು ವಾದ ಮಾಡುತ್ತಾರೆ.
ಈ ವಿಡಿಯೋದಲ್ಲಿ ಮದುವೆಯಾದ ಬಳಿಕ ವಧು ತನ್ನ ಪತಿಯನ್ನು ಕೋಲಿನಲ್ಲಿ ಹೊಡೆಯಲು ಪ್ರಾರಂಭಿಸುತ್ತಾಳೆ, ವರ ಬಯಸಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ., ಆಕೆ ಹೊಡೆಯುತ್ತಲೇ ಇರುತ್ತಾಳೆ, ಆತ ಮೌನವಾಗಿ ಸಹಿಸಿಕೊಳ್ಳುತ್ತಲೇ ಇರುತ್ತಾರೆ.
View this post on Instagram
ಈ ವೈರಲ್ ವಿಡಿಯೋದಲ್ಲಿ ವಧು ಕೋಲು ಹಿಡಿದು ಹಾಸಿಗೆಯ ಮೇಲೆ ಹೇಗೆ ಕುಳಿತಿದ್ದಾರೆ ಎನ್ನುವುದನ್ನು ನೀವು ನೋಡಬಹುದು. ಹಾಸಿಗೆ ಮೇಲೆ ವರ ಮಲಗಿದ್ದಾರೆ, ವರನ ಮೇಲೆ ಬಲೂನ್ಗಳನ್ನು ಇಡಲಾಗುತ್ತದೆ ಆ ಬಲೂನ್ ಅನ್ನು ಆ ಕೋಲಿನಿಂದ ಒಡೆಯಬೇಕು, ಆದರೆ ಬಲೂನ್ ಬೇರೊಬ್ಬರ
ಕೈಲಿರುವ ಕಾರಣ ಬಲೂನ್ ಅನ್ನು ಹಿಂದೆ ತೆಗೆದುಕೊಂಡಾಗಲೆಲ್ಲಾ ವರನಿಗೆ ಪೆಟ್ಟು ಬೀಳುತ್ತದೆ. ಇದು ಚೀನಾದ ಮದುವೆಯೊಂದರ ವಿಡಿಯೋವಾಗಿದೆ.
ಈ ವಿಶಿಷ್ಟ ವಿವಾಹದ ವೀಡಿಯೊವನ್ನು aylogyworld ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾವಿರಾರು ಮಂದಿ ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ