Parental Tips: ನಿಮ್ಮ ಮಗು ಹೊಸಬರ ಜೊತೆ ಮಾತನಾಡಲು ಕಷ್ಟ ಪಡುತ್ತಿದ್ದಾರೆ? ಇಲ್ಲಿವೆ ಪೋಷಕರಿಗೆ ಕೆಲವು ಸಲಹೆಗಳು
ನಿಮ್ಮ ಮಗುವಿನ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರಿಗೆ ಉತ್ತಮ ಮಾರ್ಗದರ್ಶನ ನೀಡಲು ನೀವು ಅನುಸರಿಸಬಹುದಾದ ಕೆಲವು ಪೋಷಕರ ಸಲಹೆಗಳು ಇಲ್ಲಿವೆ.
ನಾವೆಲ್ಲರೂ ನಮ್ಮ ಮಕ್ಕಳಿಗೆ (Children) ಸ್ನೇಹಿತರಿರಬೇಕು, ಅವರ ಸಾಮಾಜಿಕ ಕೌಶಲ್ಯ (Social Skills) ಹೆಚ್ಚಿಸಬೇಕು ಎಂದು ಬಯಸುತ್ತೇವೆ. ಸಾಮಾಜಿಕ ಕೌಶಲ್ಯ ಅಥವಾ ಸೋಶಿಯಲ್ ಸ್ಕಿಲ್ಸ್ ಮಕ್ಕಳಿಗೆ ಆರೋಗ್ಯಕರ ಸಂಬಂಧಗಳನ್ನು ರಚಿಸಲು ಸಹಾಯ ಮಾಡುತ್ತದೆ. ಕೆಲವು ಮಕ್ಕಳಿಗೆ, ಸ್ನೇಹಿತರನ್ನು (Friends) ಮಾಡಿಕೊಳ್ಳುವುದು ಅಥವಾ ಇತರರೊಂದಿಗೆ ಸಂವಹನ ಮಾಡುವುದು ಸುಲಭವಲ್ಲ. ಸ್ನೇಹವನ್ನು ಬೆಳೆಸುವುದು ಪ್ರತಿ ಮಗು ಕಲಿಯಬೇಕಾದ ವಿಷಯವಾಗಿದೆ. ದೀರ್ಘಾವಧಿಯ ಸ್ನೇಹವನ್ನು ಬೆಳೆಸಲು ಮಕ್ಕಳು ಹಂಚಿಕೊಳ್ಳುವುದು, ಸಹಾನುಭೂತಿ ತೋರುವುದು, ಕ್ಷಮಿಸುವ ಗುಣ, ಹೀಗೆ ಹಲವು ಗುಣಗಳನ್ನು ಹೊಂದುವುದು ಮುಖ್ಯವಾಗಿರುತ್ತದೆ. ನಿಮ್ಮ ಮಗುವಿನ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರಿಗೆ ಉತ್ತಮ ಮಾರ್ಗದರ್ಶನ ನೀಡಲು ನೀವು ಅನುಸರಿಸಬಹುದಾದ ಕೆಲವು ಪೋಷಕರ ಸಲಹೆಗಳು ಇಲ್ಲಿವೆ.
ಮನೆಯಲ್ಲಿ ಉತ್ತಮ ನಡವಳಿಕೆಯ ಉದಾಹರಣೆ ನಿಮ್ಮ ಮಗುವಿಗೆ ನೀಡಿ:
ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಕಲಿಸಲು ಬಯಸಿದರೆ, ನಿಮ್ಮ ಮನೆಯಿಂದಲೇ ಪ್ರಾರಂಭಿಸಿ. ಇದಕ್ಕಾಗಿ, ಅವರೊಂದಿಗೆ ಸೌಜನ್ಯದಿಂದ ಮಾತನಾಡಿ. ಮನೆಯ ಇತರ ಸದಸ್ಯರು ಸಹ ತಮ್ಮಲ್ಲಿ ಉತ್ತಮ ಭಾಷೆಯನ್ನು ಬಳಸಬೇಕು, ಗೌರವವನ್ನು ನೀಡಬೇಕು ಮತ್ತು ಪರಸ್ಪರ ಕಾಳಜಿ ವಹಿಸಬೇಕು. ಹಾಗೆ ಮಾಡುವುದರಿಂದ, ನಿಮ್ಮ ಮಗುವಿನ ನಡವಳಿಕೆಯು ಬದಲಾಗುತ್ತದೆ ಹಾಗು ಅವರು ಮೊದಲ ಬಾರಿಗೆ ಭೇಟಿಯಾಗುವ ಜನರೊಂದಿಗೆ ಉತ್ತಮವಾಗಿ ನಡೆದುಕೊಳ್ಳುತ್ತಾರೆ.
ನಿಮ್ಮ ಮಗುವಿನ ರೋಲ್ ಮಾಡೆಲ್ ಆಗಿ
ನೀವು ನಿಮ್ಮ ಮಕ್ಕಳೊಂದಿಗೆ ಹೊರಗೆ ಹೋದಾಗ ಅಥವಾ ಇತರರನ್ನು ಭೇಟಿಯಾದಾಗ ನೀವು ಇತರರೊಂದಿಗೆ ಸ್ನೇಹದಿಂದ ಮಾತನಾಡಿ, ನಿಮ್ಮ ಮಕ್ಕಳು ಹೊಸ ಜನರೊಂದಿಗೆ ಹೇಗೆ ಸಂವಹನ ನಡೆಸಬೇಕೆಂದು ನಿಮ್ಮಿಂದ ಕಲಿಯಲು ಸಾಧ್ಯವಾಗುತ್ತದೆ.
ನಿಮ್ಮ ಮಗುವನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ನಿಮ್ಮ ಮಕ್ಕಳನ್ನು ಸಣ್ಣ ಪುಟ್ಟ ಕೆಲಸಗಳನ್ನು ತೊಡಗಿಸಿಕೊಳ್ಳಿ, ಅದೇ ಮುಂದೆ ಅವರ ಹವ್ಯಾಸವಾಗಿ ಬದಲಾಗಬಹುದು. ನಿಮ್ಮ ಮಗುವಿನ ಸ್ನೇಹಿತರೊಂದಿಗೆ ನೀವು ಮಾತನಾಡಿ. ಅವರ ಚಟುವಟಿಕೆಗಳಲ್ಲಿ ನೀವೂ ಭಾಗವಹಿಸಿ.
ಮಕ್ಕಳ ಮೇಲೆ ನಿಗಾ ಇರಿಸಿ
ನಿಗಾ ವಹಿಸುವುದು ಎಂದರೆ ನಿಮ್ಮ ಮಗುವಿನ ಚಟುವಟಿಕೆಯನ್ನು ನೀವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೀರಿ ಎಂದಲ್ಲ. ಕೆಲವೊಮ್ಮೆ ನೀವು ನಿಮ್ಮ ಮಕ್ಕಳ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ತೊಂದರೆಗಳನ್ನು ನಿಭಾಯಿಸಲು ಅವರಿಗೆ ಅವಕಾಶ ನೀಡಬೇಕು. ಪರಿಸ್ಥಿತಿಯು ಹತೋಟಿಯಲ್ಲಿಲ್ಲದಿದ್ದರೆ, ನೀವು ಅವರನ್ನು ಬೆಂಬಲಿಸಬೇಕು. ಈ ರೀತಿಯಾಗಿ, ನಿಮ್ಮ ಮಗು ತನ್ನ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಯುತ್ತದೆ.
ಇದನ್ನೂ ಓದಿ: ತನ್ನ ದೇಹ ಮೇಲೆ 540 ಟ್ಯಾಟೂ ಹಾಕಿಸಿಕೊಂಡು ವಿಶ್ವ ದಾಖಲೆ ಬರೆದ ಟ್ಯಾಟೂ ಕಲಾವಿದ
ನಿಮ್ಮ ಮಗುವಿಗೆ ಮಾತನಾಡಲು ಅವಕಾಶ ನೀಡಿ
ಕೆಲಸದಿಂದ ಹಿಂದಿರುಗಿದ ನಂತರ, ನೀವು ನಿಮ್ಮ ಮಗುವಿನೊಂದಿಗೆ ಮಾತನಾಡಿ ಮತ್ತು ಅವರು ಇಡೀ ದಿನ ಏನು ಮಾಡಿದರು ಮತ್ತು ಅವರ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಿ. ಸಣ್ಣ ವಯಸ್ಸಿನಿಂದಲೇ ಕೆಲವು ನಿರ್ಧಾರಗಳನ್ನು ಮಾಡುವಾಗ ನಿಮ್ಮ ಮಗುವಿನ ಅಭಿಪ್ರಾಯವನ್ನು ಪಡೆಯಿರಿ