International Coffee Day 2021: ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಏನೇನು ಪ್ರಯೋಜನಗಳಿವೆ? ಇಲ್ಲಿವೆ ಮಾಹಿತಿ

| Updated By: shruti hegde

Updated on: Oct 01, 2021 | 11:42 AM

ಅಂತಾರಾಷ್ಟ್ರೀಯ ಕಾಫಿ ದಿನ 2021: ಒಂದು ಕಪ್ ಬಿಸಿ ಬಿಸಿ ಕಾಫಿ ಸವಿಯುತ್ತಾ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯ ಬೇಕಾದ ಕೆಲವು ಅಂಶಗಳು ಈ ಕೆಳಗಿನಂತಿದೆ.

International Coffee Day 2021: ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಏನೇನು ಪ್ರಯೋಜನಗಳಿವೆ? ಇಲ್ಲಿವೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಕಾಫಿ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದು ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಕಾಫಿ ಪ್ರಿಯರಿಗೆ ಇಂದು ಸಂಭ್ರಮಿಸುವ ದಿನ. ಹಾಗಿರುವಾಗ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ? ಆರೋಗ್ಯ ಸುಧಾರಣೆಯಲ್ಲಿ ಕಾಫಿ ಬಹುಮುಖ್ಯ ಪಾತ್ರ ವಹಿಸುತ್ತದೆಯೇ? ಎಂಬೆಲ್ಲಾ ವಿಷಯಗಳನ್ನು ಇಂದು ನೀವು ತಿಳಿಯಲೇಬೇಕು. ಒಂದು ಕಪ್ ಬಿಸಿ ಬಿಸಿ ಕಾಫಿ ಸವಿಯುತ್ತಾ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯ ಬೇಕಾದ ಕೆಲವು ಅಂಶಗಳು ಈ ಕೆಳಗಿನಂತಿದೆ.

ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕೆಫೀನ್ ಅಂಶದಿಂದ ಕೆಲವೊಮ್ಮೆ ದೇಹದ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಲ್ಪನೆ ಇದ್ದರೂ ಸಹ ನಿಯಮಿತ ಸೇವನೆಯಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಸಾಬೀತಾಗಿದೆ. ಪೌಷ್ಟಿಕ ತಜ್ಞೆ ಪ್ರಿಯಾ ಪಾಲನ್ ಅವರು ಹೇಳಿದ ಒಂದಿಷ್ಟು ಮಾಹಿತಿಗಳನ್ನು ಹಿಂದುಸ್ತಾನ್ ಟೈಮ್ಸ್​ನಲ್ಲಿ ಉಲ್ಲೇಖಿಸಲಾಗಿದೆ. ಅವರ ಪ್ರಕಾರ, ಕಾಫಿ ಎರಡು ಮುಖದ ನಾಣ್ಯವಿದ್ದಂತೆ! ಅಂದರೆ, ಕಾಫಿಯ ಅತಿಯಾದ ಸೇವನೆ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಜತೆಗೆ ನಿಯಮಿತವಾಗಿ ಸೇವಿಸುವ ಪದ್ಧತಿ ನಮ್ಮದಾಗಿದ್ದರೆ ನಿಜವಾಗಿಯೂ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿಸಿದ್ದಾರೆ.

ಕಾಫಿ ಕುಡಿಯುವುದರಿಂದ ನರವೈಜ್ಞಾನಿಕ ಸ್ಥಿತಿಗಳಾದ ಬುದ್ಧಿಮಾಂದ್ಯತೆ, ಆಲ್ಜೈಮರ್​ನಂತಹ ಖಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಈ ಕುರಿತಂತೆ ಸಾಕಷ್ಟು ಅಧ್ಯಯನಗಳೂ ಸಹ ನಡೆದಿವೆ. ಇದು ದೈಹಿಕ ಕಾರ್ಯಕ್ಷಮತೆಯನ್ನು, ಸ್ನಾಯು ಬಲಪಡಿಸುವಿಕೆ ಜತೆಗೆ ದೇಹದ ಒಟ್ಟಾರೆ ಆರೋಗ್ಯ ಪ್ರಯೋಜನಕ್ಕೆ ಸಹಾಯಕವಾಗಿದೆ. ಜತೆಗೆ ನಿಮ್ಮಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಫಿಯಲ್ಲಿರುವ ಪೋಷಕಾಂಶಗಳಾದ ಮೆಗ್ನೀಶಿಯಂ, ಮ್ಯಾಂಗನೀಸ್ ಮತ್ತು ವಿಟಮಿನ್ ಬಿ ಆರೋಗ್ಯಕ್ಕೆ ಉತ್ತಮ. ಜತೆಗೆ ಇವು ಟೈಪ್ 2 ಮಧುಮೇಹ ಪರಿಣಾಮವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕಾಫಿಯನ್ನು ಮಿತವಾಗಿ ಸೇವಿಸಬೇಕು. ಇದು ನಿಮಗೆ ಪ್ರತಿಕೂಲ ಪರಿಣಾಮವನ್ನು ಸೂಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ಮಟ್ಟದ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಹಾಲು ಮತ್ತು ಸಕ್ಕರೆಯ ಹೆಚ್ಚುವರಿ ಕ್ಯಾಲೊರಿಗಳನ್ನು ಹೊಂದಿರುವ ಕಾಫಿಗಿಂತ ಬ್ಲ್ಯಾಕ್ ಕಾಫಿ ಉತ್ತಮ ಆಯ್ಕೆ ಎಂದು ಪೌಷ್ಟಿಕ ತಜ್ಞೆ ಪ್ರಿಯಾ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

International Coffee Day 2021: ಬಿಸಿ ಬಿಸಿ ಕಾಫಿ ಸವಿಯುವುದು ಇಷ್ಟಾನಾ? ಕಾಫಿ ಕುಡಿಯುತ್ತ ಸಂಭ್ರಮಿಸುವ ದಿನವಿಂದು

Coffee Health Benefits: ದಿನಕ್ಕೆ ಮೂರೇ ಮೂರು ಕಪ್ ಕಾಫಿ ಕುಡಿದರೆ ಏನೆಲ್ಲ ಉಪಯೋಗವಿದೆ ಗೊತ್ತಾ?