ಸ್ನೇಹವೆಂಬುದು ಒಂದು ಪವಿತ್ರ ಬಂಧನ, ನಾವು ಯಾರಲ್ಲೂ ಹೇಳಿಕೊಳ್ಳಲಾಗದ ಭಾವನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ, ಸ್ನೇಹಿತರೊಂದಿಗೆ ಇರುವಷ್ಟು ಹೊತ್ತು ಕಷ್ಟಗಳೆಲ್ಲವ ಮರೆತು ಖುಷಿ ಖುಷಿಯಿಂದ ಕಳೆಯುತ್ತೇವೆ. ಸ್ನೇಹ ಹುಟ್ಟುವುದಕ್ಕೆ ಯಾವುದೇ ಕೋರ್ಸ್ ಇಲ್ಲ, ಬಡವ, ಶ್ರೀಮಂತ, ಮೇಲೂ-ಕೀಳು, ಸೌಂದರ್ಯ-ಕುರೂಪಿ ಇವುಗಳನ್ನು ನೋಡಿ ಹುಟ್ಟುವುದಿಲ್ಲ.
ಸ್ನೇಹವು ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಲ್ಲದು ಎಂಬುದನ್ನು ತಿಳಿಯೋಣ.
ಸೋಶಿಯಲ್ ಸಪೋರ್ಟ್ ಸಿಸ್ಟಂ: ಸ್ನೇಹವು ವ್ಯಕ್ತಿಯ ಸಾಮಾಜಿಕ ಪರಿಸರದಿಂದ ಹುಟ್ಟುತ್ತದೆ. ಇದು ವ್ಯಕ್ತಿಗೆ ಸಾಮಾಜಿಕ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀವನದಲ್ಲಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.
ಒತ್ತಡ: ಸ್ನೇಹವು ಒತ್ತಡ ಮತ್ತು ಖಿನ್ನತೆಯ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕಿರಿಯ ವಯಸ್ಕರಿಗೆ ಸಹ, ಹದಿಹರೆಯದ ಅವಧಿಯಲ್ಲಿ ಸ್ನೇಹವನ್ನು ಹೊಂದಿರುವವರು ಹೆಚ್ಚಿನ ಮಟ್ಟದ ಸಂತೋಷ, ಅನ್ಯೋನ್ಯತೆ, ಭಾವನಾತ್ಮಕ ಬೆಂಬಲ, ಸೂಕ್ಷ್ಮತೆ, ನಿಷ್ಠೆ, ಪರಸ್ಪರ ಪ್ರೀತಿ ಮತ್ತು ಉನ್ನತ ಗುಣಮಟ್ಟದ ಜೀವನವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ.
ದುಷ್ಟರಿಂದ ದೂರವಿರು: ಉತ್ತಮ ಸ್ನೇಹವು ದುಷ್ಟರು ಹಾಗೂ ಕೆಟ್ಟ ಅಭ್ಯಾಸಗಳಿಂದ ನಿಮ್ಮನ್ನು ದೂರವಿರಲು ಪ್ರೇರೇಪಿಸುತ್ತದೆ.
ಸ್ನೇಹ ಸಾಗರವೆಂಬುದು ಅತ್ಯಂತ ಆಳವಾದದ್ದು. ಮೊಗೆದಷ್ಟೂ ನಮಗೆ ಅಲ್ಲಿಂದ ಆನಂದ, ತೃಪ್ತಿ, ನೆಮ್ಮದಿ, ಸಂತೋಷ ಎಂಬ ಅನೇಕ ಮುತ್ತು ರತ್ನಗಳು ದೊರಕುವುದರಲ್ಲಿ ಸಂದೇಹವಿಲ್ಲ.
ಸ್ನೇಹವು ಒಂದು ಅಮೃತ ಬಿಂದು. ಒಂದು ಮಧುರ ಅನುಭವ. ಆದರೆ ಬೇಕು ಎಂದಾಗಲೆಲ್ಲ ನಮಗೆ ಸುಲಭವಾಗಿ ದಕ್ಕುವ ಪದಾರ್ಥವಲ್ಲ. ಇದು ಅನೇಕ ವರುಷಗಳ ಫಲ. ಸ್ನೇಹದ ವಿಷಯದಲ್ಲಿ ಒಬ್ಬೊಬ್ಬರದ್ದು ಒಂದೊದು ರೀತಿಯ ಅನುಭವ.
ಪ್ರಕೃತಿಯ ಮಡಿಲಲ್ಲಿ ಬೆಳೆದ ಮರವು ಬಿಸಿಲಿನಲಿ ದಣಿದು ಬಂದಿರುವ ಜೀವಿಗೆ ಯಾವುದೇ ಬೇಧವಿಲ್ಲದೇ ಗಾಳಿ, ಹಣ್ಣು, ತಂಪನ್ನು ನೀಡುತ್ತದೆಯೋ ಅದೇ ರೀತಿ ಸ್ನೇಹವು ಕೂಡ ಪ್ರಕೃತಿಯ ಪ್ರತಿಬಿಂಬ. ಸ್ನೇಹ ಒಂದೇ ಕಡೆ ಮುಖಮಾಡಿ ಹರಿಯುವ ಎರಡು ನದಿಗಳಲ್ಲಿ ಹೊರಟ ದೋಣಿಗಳು ಒಂದೇ ಕಡಲನ್ನ ಸೇರುಬಹುದು.
ಸ್ನೇಹಕ್ಕೆ ವಯೋಮಿತಿಯಿಲ್ಲ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ವಯಸ್ಸಾಗಿರೋರು ಸ್ನೇಹಿತರಾಗಿರುತ್ತಾರೆ. ತಮ್ಮ ವಯೋಮಾನಕ್ಕೆ ತಕ್ಕಂತೆ ಸ್ನೇಹದ ಸವಿಯನ್ನು ಸವಿಯುತ್ತಾರೆ.