Friendship: ಸ್ನೇಹವು ಮನಸ್ಸಿನ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು?
Friendship: ಸ್ನೇಹಿತರು ನಮ್ಮ ಜೀವನದ ಅಂಗವೇ ಆಗಿದ್ದಾರೆ, ಅವರ ಜತೆ ಸಮಯ ಕಳೆದಿದ್ದೇ ಅರಿವಿಗೆ ಬರುವುದಿಲ್ಲ, ಅಷ್ಟರ ಮಟ್ಟಿಗೆ ಹರಟೆ, ತಮಾಷೆ, ಕಾಲೆಳೆತ ಎಲ್ಲವೂ ಇರುತ್ತೆ ಸ್ನೇಹಿತರ ಜತೆ ಇರುವಷ್ಟು ಹೊತ್ತು ಮನಸ್ಸು ಖುಷಿ ಖುಷಿಯಾಗಿರುತ್ತದೆ.
ಸ್ನೇಹಿತರು ನಮ್ಮ ಜೀವನದ ಅಂಗವೇ ಆಗಿದ್ದಾರೆ, ಅವರ ಜತೆ ಸಮಯ ಕಳೆದಿದ್ದೇ ಅರಿವಿಗೆ ಬರುವುದಿಲ್ಲ, ಅಷ್ಟರ ಮಟ್ಟಿಗೆ ಹರಟೆ, ತಮಾಷೆ, ಕಾಲೆಳೆತ ಎಲ್ಲವೂ ಇರುತ್ತೆ ಸ್ನೇಹಿತರ ಜತೆ ಇರುವಷ್ಟು ಹೊತ್ತು ಮನಸ್ಸು ಖುಷಿ ಖುಷಿಯಾಗಿರುತ್ತದೆ. ಕುಟುಂಬದವರನ್ನು ಬಿಟ್ಟು ಎರಡನೇ ಆಯ್ಕೆಯೇ ಸ್ನೇಹಿತರಾಗಿರುತ್ತಾರೆ, ನಿಮ್ಮ ಮನಸ್ಸಿಗೆ ಹತ್ತಿರವೆನಿಸುವ ಸ್ನೇಹಿತರು ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಾರೆ.
ನಿಮಗೆ ಖುಷಿ ಎನಿಸುವ ಮಾತುಗಳು, ನೀವು ಇಷ್ಟ ಪಡುವ ಜಾಗಕ್ಕೆ ಕರೆದೊಯ್ಯುವುದು, ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿ, ಏನೇ ತೊಂದರೆ ಬಂದರೂ ಹೆಗಲಿಗೆ ಹೆಗಲು ಕೊಡುವ ವ್ಯಕ್ತಿತ್ವ. ಹೀಗಿರುವಾಗ ನಿಮ್ಮ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಿಯೇ ಬೀರುತ್ತದೆ.
ಹೆಚ್ಚು ಮಂದಿ ನಿಮ್ಮ ಬೆಂಬಲಕ್ಕೆ ಇದ್ದಾರೆ ಎಂದಾಗ ನಿಮ್ಮ ಕಾನ್ಫಿಡೆನ್ಸ್ ಲೆವೆಲ್ ಕೂಡ ಹೆಚ್ಚಳವಾಗಲಿದೆ. ಒಳ್ಳೆಯ ಸ್ನೇಹಿತರು ಎಂದೂ ನಿಮ್ಮನ್ನು ಒಬ್ಬಂಟಿಯಾಗಿರಲು ಬಿಡುವುದಿಲ್ಲ, ಖಿನ್ನತೆಯಿಂದ ಸದಾ ದೂರವಿಡುತ್ತಾರೆ. ನಿಮ್ಮ ಬೇಕು ಬೇಡಗಳನ್ನು ಚೆನ್ನಾಗಿ ಅರಿತಿರುತ್ತಾರೆ.
ಸ್ನೇಹಿತರ ಜತೆ ಸಮಯ ಕಳೆಯುವುದರಿಂದ ಏನೆಲ್ಲಾ ಪ್ರಯೋಜನ ನಿಮ್ಮೆಲ್ಲಾ ಕೆಲಸಗಳಿಗೆ ಬೆಂಬಲ: ಸ್ನೇಹಿತರೆಂದರೆ ಸುಖ, ದುಃಖ ಎರಡೂ ಸಮಯದಲ್ಲೂ ಹೆಗಲಿಗೆ ಹೆಗಲಾಗಿ ನಿಲ್ಲುವವರು, ಕೆಲವರಿಗೆ ಹೆಚ್ಚು ಮಂದಿ ಸ್ನೇಹಿತರಿರುವುದಿಲ್ಲ, ಇನ್ನೂ ಕೆಲವರಿಗೆ ಲೆಕ್ಕವಿಲ್ಲದಷ್ಟು ಸ್ನೇಹಿತರಿರುತ್ತಾರೆ. ಸ್ನೇಹಿತರೊಂದಿಗೆ ಪ್ರತಿ ದಿನವೂ ಸಂಭ್ರಮಿಸಿ.
ಹೆಚ್ಚು ಸಮಯವನ್ನು ಕಳೆಯುವುದು: ನಾವು ನಮ್ಮ ಕುಟುಂಬದವರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಸ್ನೇಹಿತರ ಆಯ್ಕೆ ನಿಮಗೆ ಬಿಟ್ಟಿದ್ದು. ನೀವು ಹೆಚ್ಚೆಚ್ಚು ಸಮಯವನ್ನು ಸ್ನೇಹಿತರೊಂದಿಗೆ ಕಳೆದರೆ ನಿಮ್ಮ ಮಾನಸಿಕ ಆರೋಗ್ಯವು ವೃದ್ಧಿಯಾಗಲಿದೆ.
ಒತ್ತಡ ನಿವಾರಣೆ: ಸ್ನೇಹಿತರೊಂದಿಗೆ ಇದ್ದರೆ ಸಮಯ ಕಳೆದಿದ್ದೇ ತಿಳಿಯುವುದಿಲ್ಲ, ನೀವು ಸ್ನೇಹಿತರೊಂದಿಗೆ ನಿಮ್ಮೆಲ್ಲಾ ಸುಖ, ದುಃಖಗಳನ್ನು ಹಂಚಿಕೊಳ್ಳಿ ಅದರಿಂದ ನಿಮ್ಮ ಒತ್ತಡ ನಿವಾರಣೆಯಾಗಲಿದೆ.
ಸಂತಸ ಹೆಚ್ಚಾಗಲಿದೆ: ನಾವು ನಮ್ಮ ಸ್ನೇಹಿತರೊಂದಿಗೆ ಇದ್ದಾಗ ನಾವು ನಾವಾಗಿರುತ್ತೇವೆ, ನಮ್ಮ ಬೇಕು ಬೇಕು ಬೇಡಗಳು ಕುಟುಂಬದವರಿಗಿಂತಾ ಹೆಚ್ಚಾಗಿ ಸ್ನೇಹಿತರಿಗೆ ತಿಳಿದಿದೆ. ಮನಸ್ಸು ಬಿಚ್ಚಿ ಮಾತನಾಡುತ್ತೇವೆ. ಇದರಿಂದ ದೇಹದಲ್ಲಿ ಹ್ಯಾಪಿ ಹಾರ್ಮೋನ್ಗಳ ಉತ್ಪಾದನೆಯಾಗಲಿದೆ.
ಏಕಾಂಗಿ ಎಂಬ ಭಾವನೆಯಿಂದ ಹೊರಬರುವಿರಿ: ನೀವು ನಿಮ್ಮ ಸ್ನೇಹಿತರೊಂದಿಗಿದ್ದರೆ ಒಂಟಿ ಎನ್ನುವ ಆಲೋಚನೆಯಿಂದ ಹೊರಬರುವಿರಿ, ನಿಮ್ಮ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ. ಮಕ್ಕಳು, ಕುಟುಂಬದವರು ಬಿಜಿ ಇದ್ದಾಗ ಸ್ನೇಹಿತರೇ ನಿಮ್ಮ ಮಾನಸಿಕ ಸ್ಥಿತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ