ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ. ಮಳೆಗಾಲದಲ್ಲಿ ಸೂರ್ಯನ ಆಗಮನವಾಗದ ಕಾರಣ ಬಟ್ಟೆಗಳಲ್ಲಿ ನೀರಿನ ಅಂಶವು ಸಂಪೂರ್ಣವಾಗಿ ಆರದ ಕಾರಣ ಬಟ್ಟೆಯಲ್ಲಿ ಕಲೆಗಳು ಉಂಟಾಗುತ್ತವೆ.
ಸಿಲಿಕಾ ಜೆಲ್: ಸಿಲಿಕಾ ಜೆಲ್ ಅನ್ನು ಬಟ್ಟೆಗಳ ಮಧ್ಯೆ ಇಡಿ, ಅದು ಬಟ್ಟೆಯಲ್ಲಿರುವ ನೀರಿನ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಕಹಿಬೇವಿನ ಎಲೆ: ನೀವು ಕಹಿಬೇವಿನ ಎಲೆಗಳನ್ನು ಒಣಗಿಸಿ ಬಟ್ಟೆಗಳ ಮಧ್ಯೆ ಇಡುವುದರಿಂದ ಬಟ್ಟೆಯಲ್ಲಿರುವ ನೀರಿನಾಂಶವು ಹೀರಿಕೊಂಡು ಬಟ್ಟೆಯನ್ನು ಬೆಚ್ಚಗಿಡುತ್ತದೆ.
ನಿಂಬೆಹಣ್ಣು: ಬಟ್ಟೆಯಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣನ್ನು ಬಳಕೆ ಮಾಡಬಹುದು. ನಿಂಬೆಹಣ್ಣನ್ನು ಬಟ್ಟೆಗಳ ಮೇಲೆ ರಬ್ ಮಾಡಿ.
ಬಿಳಿ ವಿನೆಗರ್: ಬಟ್ಟೆಯನ್ನು ಸ್ವಚ್ಛವಾಗಿಡಲು ಬಿಳಿ ವಿನೆಗರ್ ಬಳಕೆ ಮಾಡಬೇಕು. ಬಟ್ಟೆಯನ್ನು ಸೋಪಿನ ನೀರಿನಿಂದ ತೊಳೆದ ಬಳಿಕ ಬಟ್ಟೆಯನ್ನು ವೈಟ್ ವಿನೆಗರ್ ಅಲ್ಲಿ ಅದ್ದಿಡಬೇಕು. ಹಾಗೆಯೇ ಶಿಲೀಂದ್ರಗಳಿಂದ ಬರುವ ವಾಸನೆಯೂ ದೂರವಾಗುತ್ತದೆ.
ಬೇಕಿಂಗ್ ಸೋಡಾ: ಬಟ್ಟೆಯಲ್ಲಿರುವ ಫಂಗಸ್ ದೂರ ಮಾಡಲು ಬಟ್ಟೆಯನ್ನು ಮೊದಲು ಒದ್ದೆ ಮಾಡಿ ಬಳಿಕ ಅದರ ಮೇಲೆ ಬೇಕಿಂಗ್ ಸೋಡಾವನ್ನು ಹಾಕಿ. ಸುಮಾರು 20 ನಿಮಿಷಗಳ ಬಳಿಕ ಡಿಟರ್ಜೆಂಟ್ ಬಳಸಿ ಸ್ವಚ್ಛಗೊಳಿಸಬೇಕು.