ಗಂಡು ಹೆಣ್ಣು ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದಿಲ್ಲವಾದರೂ ಕೂಡ ಜಗತ್ತನ್ನು ಊಹಿಸಲು ಅಸಾಧ್ಯ. ಆದರೆ ಇಂದು ಸಮಾಜವು ಹೆಣ್ಣನ್ನು ಸ್ವಾವಲಂಬಿ ಮಾಡುತ್ತಿದೆ. ಆದರೆ ಯಾರು ಕೂಡ ಪುರುಷರ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಇಲ್ಲ. ಇಂದು ಪುರುಷರು ಮಾನಸಿಕವಾಗಿ ಕುಗ್ಗಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪುರುಷರ ಸಂಖ್ಯೆ ಹೆಚ್ಚು ಎನ್ನಬಹುದು. ಡ್ರಗ್ಸ್, ಮದ್ಯ ಸೇವನೆ ದಾಸರಾಗಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 95ಕ್ಕಿಂತ ಹೆಚ್ಚು ಪುರುಷರೇ ಆಗಿರುವುದು ಬೇಸರದ ಸಂಗತಿ. ಅದೇನೇ ಇರಲಿ ಕುಟುಂಬ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯು ಅವರ ಕೊಡುಗೆ ಬಹಳಷ್ಟಿದೆ. ಹೀಗಾಗಿ ಪುರುಷರ ಜೀವನ, ಸಾಧನೆಗಳು ಪುರುಷರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನವೆಂಬರ್ 19ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸುವ ಬಗ್ಗೆ 1923ರಲ್ಲಿ ಬೇಡಿಕೆಯನ್ನು ಇಡಲಾಗಿತ್ತು. ಫೆಬ್ರವರಿ 29ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಮಹಿಳಾ ದಿನದ ಮಾದರಿಯಲ್ಲಿ ಪುರುಷರ ದಿನವನ್ನು ಆಚರಿಸಲು ಬೇಡಿಕೆ ಇಟ್ಟಿದ್ದರು. ಈ ವೇಳೆ ಪುರುಷರ ದಿನವನ್ನು ಆಚರಿಸಲು ಅಮೆರಿಕ, ಆಸ್ಟ್ರೇಲಿಯಾ ಮತ್ತು ಮಾಲ್ಟಾದಲ್ಲಿನ ಸಂಸ್ಥೆಗಳನ್ನು ಆಹ್ವಾನಿಸಲಾಯಿತು. ಆದರೆ ಈ ದಿನದ ಆಚರಣೆಗೆ ಹೆಚ್ಚಿನ ದೇಶಗಳ ಬೆಂಬಲವೂ ಸಿಗಲಿಲ್ಲ. 1999ರಲ್ಲಿ, ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ ಡಾ. ಜೆರೋಮ್ ತಿಲಕ್ ಸಿಂಗ್ ಅವರು, ತಮ್ಮ ತಂದೆಯ ಜನ್ಮದಿನವನ್ನು ನವೆಂಬರ್ 19ರಂದು ಆಚರಿಸಿದರು. ಆದಾದ ಬಳಿಕ 2007ರ ನವೆಂಬರ್ 19ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಒಂದು ಕುಟುಂಬದ ಮುಖ್ಯಸ್ಥನಾಗಿ ಆತನಿಗೆ ಕುಟುಂಬದ ಮೇಲಿರುವ ಪ್ರೀತಿ, ಜವಾಬ್ದಾರಿಗಳು, ಎದುರಿಸುವ ಸಮಸ್ಯೆಗಳು ಅರಿವು ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ. ಪುರುಷರ ಯೋಗಕ್ಷೇಮ ಮತ್ತು ಮಾನಸಿಕ, ದೈಹಿಕ ಆರೋಗ್ಯ, ಲೈಂಗಿಕ ಸಮಸ್ಯೆಗಳು ಹಾಗೂ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಈ ದಿನದ ಆಚರಣೆಯು ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನದಂದು ಪುರುಷರ ಸಮಸ್ಯೆಗಳ ಕುರಿತು ಚರ್ಚೆಗಳು, ಕಾರ್ಯಾಗಾರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಕ್ರಿಸ್ಮಸ್ ಹಬ್ಬಕ್ಕೆ ಮನೆಯನ್ನು ಈ ರೀತಿ ಶೃಂಗರಿಸಿ ಅಂದ ಹೆಚ್ಚಿಸಿ
* ಹೆಣ್ಣಿನ ಜೀವನದಲ್ಲಿ ತಂದೆಯಾಗಿ, ಸಹೋದರರಾಗಿ, ಪತಿಯಾಗಿ, ಮಗನಾಗಿ ಸದಾ ಜೊತೆಗಿದ್ದು ಆಕೆಯ ನೋವು ನಲಿವುಗಳಿಗೆ ಜೊತೆಯಾಗಿ ನಿಲ್ಲುವ ಎಲ್ಲಾ ಪುರುಷರಿಗೂ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು.
* ಇಂದು ಪುರುಷರಿಗಾಗಿಯೇ ಇರುವ ದಿನ. ಕುಟುಂಬಕ್ಕಾಗಿ ಪುರುಷರು ಮಾಡುವ ತ್ಯಾಗವನ್ನು ನಾವೆಲ್ಲಾ ಸ್ಮರಿಸೋಣ. ಎಲ್ಲಾ ಪುರುಷರಿಗೂ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು.
* ನಿಮ್ಮ ದಿನದಂದು ನೀವು ಜೀವನದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಿರಿ. ನಿಮ್ಮ ಪ್ರತಿ ಹೆಜ್ಜೆಯಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ. ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಶುಭಾಶಯಗಳು.
* ಒಳ್ಳೆಯ ವ್ಯಕ್ತಿ ತನ್ನ ಬಗ್ಗೆ ಇತರರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಹೆದರುವುದಿಲ್ಲ. ಸರಿಯಾದ ಮಾರ್ಗದಲ್ಲಿ ನಡೆಯುವ ಮೂಲಕ ಕುಟುಂಬ, ಪ್ರೀತಿಪಾತ್ರರಿಗೆ ಯಾವಾಗಲೂ ಒಳ್ಳೆಯದ್ದನ್ನೇ ಮಾಡುತ್ತಾನೆ ಹಾಗೂ ಬಯಸುತ್ತಾನೆ. ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಶುಭಾಶಯಗಳು.
* ಇಂದು ನಿಮ್ಮ ದಿನ. ಜೀವನದ ಪ್ರತಿ ಸವಾಲುಗಳನ್ನು ಭಯ, ಅಂಜಿಕೆ, ಆತಂಕವಿಲ್ಲದೆ ಎದುರಿಸುವುದೇ ಶಕ್ತಿ ನಿಮಗೆ ಬರಲಿ. ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ