Christmas 2024 : ಕ್ರಿಸ್ಮಸ್ ಹಬ್ಬಕ್ಕೆ ಮನೆಯನ್ನು ಈ ರೀತಿ ಶೃಂಗರಿಸಿ ಅಂದ ಹೆಚ್ಚಿಸಿ

ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಎಷ್ಟು ಸಮಯವಿದ್ದರೂ ಸಾಲುವುದಿಲ್ಲ. ಡಿಸೆಂಬರ್ ತಿಂಗಳಲ್ಲಿ ಬರುವ ಈ ಕ್ರಿಸ್ಮಸ್ ಹಬ್ಬದ ಪೂರ್ವತಯಾರಿಯು ಒತ್ತಡದಿಂದ ಕೂಡಿರುತ್ತದೆ. ಹೀಗಾಗಿ ಕ್ರಿಸ್ಮಸ್ ಹಬ್ಬಕ್ಕೆ ದಿನಗಳು ಇರುವಾಗಲೇ ಸಿದ್ಧತೆಗಳು ಹಾಗೂ ಮನೆಯ ಅಲಂಕಾರದ ಕಡೆಗೆ ಹೆಚ್ಚು ಗಮನ ಕೊಡುವುದು ಸೂಕ್ತ. ಹಬ್ಬದ ಸಮಯದಲ್ಲಿ ಮಾಡುವ ಅಲಂಕಾರಗಳು ಹಬ್ಬದ ಮೆರಗು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಈ ಬಾರಿ ಕ್ರಿಸ್ಮಸ್ ಹಬ್ಬಕ್ಕೆ ತಯಾರಿ ನಡೆಸಲು ಶುರು ಮಾಡಿದ್ದರೆ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ ಮನೆಯನ್ನು ಇನ್ನಷ್ಟು ಸುಂದರಗೊಳಿಸಬಹುದು.

Christmas 2024 : ಕ್ರಿಸ್ಮಸ್ ಹಬ್ಬಕ್ಕೆ ಮನೆಯನ್ನು ಈ ರೀತಿ ಶೃಂಗರಿಸಿ ಅಂದ ಹೆಚ್ಚಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 6:27 PM

ಡಿಸೆಂಬರ್ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಈ ಕ್ರಿಸ್ಮಸ್. ಈ ಹಬ್ಬವು ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಬೇಧ ಭಾವವಿಲ್ಲದೇ ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಹಬ್ಬವನ್ನು ವಿಶ್ವದಾದ್ಯಂತ ಡಿಸೆಂಬರ್ 25 ರಂದು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ ಹಬ್ಬವೂ ಹತ್ತಿರ ಬರುತ್ತಿದ್ದಂತೆ ಭರ್ಜರಿ ತಯಾರಿ ಆರಂಭವಾಗುತ್ತದೆ. ಆಹಾರ, ಅಲಂಕಾರ, ಪಾನೀಯಗಳು, ಪಾರ್ಟಿಗಳು, ಫ್ಯಾಷನ್, ಶಾಪಿಂಗ್‌ ಹೀಗೆ ತಯಾರಿಯು ಪ್ರಾರಂಭವಾಗುತ್ತದೆ. ಈ ಹಬ್ಬಕ್ಕೆ ಮನೆಯನ್ನು ಅತ್ಯದ್ಯುತವಾಗಿ ಅಲಂಕರಿಸಲು ಬಯಸಿದರೆ ಇಲ್ಲಿದೆ ಸಿಂಪಲ್ ಟಿಪ್ಸ್.

* ಮನೆಯ ಬಾಗಿಲನ್ನು ಅಲಂಕರಿಸಿ : ಮನೆಯ ಅಲಂಕಾರದಲ್ಲಿ ಪ್ರಮುಖವಾಗಿರುವುದೇ ಮನೆಯ ಮುಂಬಾಗಿಲು. ಹೌದು, ಮನೆಯ ಮುಂಭಾಗಿಲನ್ನು ಹೂವುಗಳು, ಹೂವಿನ ದಂಡೆಗಳು, ಹೂಮಾಲೆಗಳು ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹೂವುಗಳಿಂದ ಅಲಂಕರಿಸಬಹುದಾಗಿದೆ. ಇಲ್ಲದಿದ್ದರೆ ಕಾಲ್ಪನಿಕ ದೀಪಗಳಿಂದ ಮನೆಯನ್ನು ಅಲಂಕರಿಸಿದರೆ ಮನೆಯ ಸೊಬಗು ಹೆಚ್ಚುತ್ತದೆ.

* ಸ್ಯಾಟಿನ್‌ ಬಟ್ಟೆ , ಸ್ಯಾಟಿನ್‌ ರಿಬ್ಬನ್‌ನಿಂದ ಶೃಂಗರಿಸಿ : ಮನೆಯ ಮೆಟ್ಟಲನ್ನು ಅಲಂಕರಿಸಲು ವಿವಿಧ ಬಣ್ಣಗಳ ಸ್ಯಾಟಿನ್‌ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ. ಕೆಂಪು, ಬಿಳಿ ಹಾಗೂ ಗೋಲ್ಡನ್‌ ಬಣ್ಣದ ಬಟ್ಟೆಗಳು ಮನೆಗೆ ರೊಮ್ಯಾಂಟಿಕ್‌ ಹಾಗೂ ಆತ್ಯಾಕರ್ಷಕ ಲುಕ್‌ ನೀಡುತ್ತದೆ. ಇದರೊಂದಿಗೆ ಬಣ್ಣ ಬಣ್ಣಗಳ ರಿಬ್ಬನ್‌ಗಳನ್ನು ಖರೀದಿಸಿ ಮೆಟ್ಟಲಿನ ಬದಿಗೆ ಸುತ್ತಬಹುದು.

* ಹೂವಿನ ಅಲಂಕಾರವಿರಲಿ : ಯಾವುದೇ ಹಬ್ಬ ಹರಿದಿನಗಳಿರಲಿ, ಹೂವುಗಳಿಲ್ಲದೇ ಹೋದರೆ ಹೇಗೆ ಅಲ್ಲವೇ. ಹೀಗಾಗಿ ಮನೆ ಹಾಗೂ ಮನೆಯ ಮೆಟ್ಟಿಲನ್ನು ಸಿಂಗರಿಸಲು ಕೆಂಪು, ಹಳದಿ ಅಥವಾ ಗುಲಾಬಿ ಬಣ್ಣದ ಹೂವುಗಳನ್ನು ಬಳಸಬಹುದು. ಅದಲ್ಲದೇ, ಡೇಲಿಯಾ ಮತ್ತು ಲ್ಯಾವೆಂಡರ್‌ ಗಳಂತಹ ಹೂವುಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ.

* ಟೇಬಲ್ ಅನ್ನು ಅಲಂಕರಿಸಿಕೊಳ್ಳಿ : ಕ್ರಿಸ್ಮಸ್ ಹಬ್ಬಕ್ಕೆ ವಿಶೇಷವಾದ ಅಡುಗೆಯಿರುತ್ತದೆ. ಈ ಬಾರಿಯ ಕ್ರಿಸ್‌ಮಸ್ ಹಬ್ಬದ ಭೋಜನಕ್ಕಾಗಿ ಮನೆಯ ಟೇಬಲನ್ನು ಕೆಂಪು ಮತ್ತು ಚಿನ್ನದ ಕ್ರಿಸ್‌ಮಸ್ ಬಾಲ್‌ ಗಳು ಮತ್ತು ಹೂವುಗಳಿಂದ ಅಲಂಕರಿಸಿಕೊಳ್ಳಿ. ಸುಗಂಧಭರಿತ ಕ್ಯಾಂಡಲ್‌ಗಳನ್ನು ಇರಿಸುವುದರಿಂದ ಮನೆಯ ವಾತಾವರಣವನ್ನು ಮತ್ತಷ್ಟು ಹಿತಕರವಾಗಿಸುತ್ತದೆ.

* ಕ್ರಿಸ್‌ಮಸ್‌ ಟ್ರೀ ಕಡೆಗೂ ಇರಲಿ ಗಮನ : ಕ್ರಿಸ್‌ಮಸ್‌ ಟ್ರೀ ಅಲಂಕಾರವಿಲ್ಲದೇ ಹೋದರೆ, ಕ್ರಿಸ್ಮಸ್ ಅಲಂಕಾರವು ಪೂರ್ಣಗೊಳ್ಳುವುದೇ ಇಲ್ಲ. ಹೀಗಾಗಿ ನಿಮ್ಮ ಕ್ರಿಸ್‌ಮಸ್‌ ಟ್ರೀಯನ್ನು ಸಿಂಗರಿಸಲು ಹೊಳೆಯುವ ನಕ್ಷತ್ರಗಳು, ಗಂಟೆಗಳು, ಲೋಹೀಯ ಬೆಳ್ಳಿ, ಚಿನ್ನ ಮತ್ತು ಬಿಳಿ ಪಾದರಸ ಹಾಗೂ ಗಾಜಿನ ಚೆಂಡುಗಳು, ಇತರ ವಿಂಟೇಜ್ ಆಭರಣಗಳನ್ನು ಬಳಸಿದರೆ ಉತ್ತಮ. ಇದು ಕ್ರಿಸ್‌ಮಸ್‌ ಟ್ರೀಯ ಸೊಬಗನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:

* ದೀಪಗಳು, ಕ್ಯಾಂಡಲ್ ಗಳ ಬಳಸಿ : ಹಬ್ಬವೆಂದರೆ ದೀಪಗಳು ಇರಲೇಬೇಕು, ಹೀಗಾಗಿ ಕ್ರಿಸ್ಮಸ್ ಗೆ ದೀಪಗಳು ಹಾಗೂ ಕ್ಯಾಂಡಲ್ ಗಳಿಂದ ಮನೆಯನ್ನು ಶೃಂಗರಿಸಿಕೊಳ್ಳಬಹುದು. ಕೋಣೆಗಳಲ್ಲಿ ವಿವಿಧ ವಿನ್ಯಾಸದ ದೀಪಗಳನ್ನು ಇರಿಸಿದರೆ, ಡೈನಿಂಗ್ ಟೇಬಲ್ ನಲ್ಲಿ ಕ್ಯಾಂಡಲ್ ಗಳನ್ನು ಉರಿಸಿಡುವುದನ್ನು ಮರೆಯದಿರಿ. ಅದಲ್ಲದೆ, ಬಣ್ಣ ಬಣ್ಣದ ಡಿಮ್ ಲೈಟ್ ಗಳನ್ನು ಬಳಸಿ ಮನೆಯನ್ನು ಆಕರ್ಷಕವಾಗಿರಿಸುವಂತೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್