ಮಹಿಳಾ ದಿನಾಚರಣೆಯಂದು ಈ ರೀತಿ ಶುಭಾಶಯ ತಿಳಿಸಿ

|

Updated on: Mar 07, 2024 | 6:30 PM

ಪ್ರತೀ ವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ನಿಮ್ಮ ಜೀವನದ ಪ್ರೀತಿಯ ಮಹಿಳೆಗೆ ಈ ವಿಶೇಷ ದಿನದಂದು ಈ ರೀತಿಯಾಗಿ ಶುಭಾಶಯ ತಿಳಿಸಿ.

ಮಹಿಳಾ ದಿನಾಚರಣೆಯಂದು ಈ ರೀತಿ ಶುಭಾಶಯ ತಿಳಿಸಿ
International Women's Day 2024
Image Credit source: iStock
Follow us on

ಪ್ರತಿ ವರ್ಷ, ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಇದು ಮಹಿಳೆಯರಿಗೆ ಮಾತ್ರ ಮೀಸಲಾದ ದಿನ. ಮಹಿಳಾ ದಿನಾಚರಣೆಯು ಮಹಿಳೆಯರ ಸಾಧನೆಗಳನ್ನು ಆಚರಿಸಲು, ಮಹಿಳಾ ಸಮಾನತೆ, ಲಿಂಗ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಿಸಲಾಗಿದೆ. ತಾಯಿ, ಹೆಂಡತಿ, ಸಹೋದರಿ ಅಥವಾ ಸ್ನೇಹಿತೆಯಾಗಿರಲಿ ನಮ್ಮ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದ ಮಹಿಳೆಯರನ್ನು ಗೌರವಿಸುವ ದಿನವೂ ಹೌದು. ಈ ದಿನ ಈರೀತಿಯಾಗಿ ಅವರಿಗೆ ಶುಭಾಶಯ ತಿಳಿಸಿ.

ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು ಇಲ್ಲಿವೆ:

  1. ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಹಿರಿದು. ಹಲವು ಜವಾಬ್ದಾರಿಯನ್ನು ನಿಭಾಯಿಸಿ ಕುಟುಂಬವನ್ನು ಮುನ್ನಡೆಸುವ ಶಕ್ತಿ ಮಹಿಳೆ. ಎಲ್ಲ ಮಹಿಳೆರಿಗೂ ನಿಮ್ಮ ದಿನದ ಶುಭಾಶಯಗಳು.
  2. ಪ್ರತಿಯೊಬ್ಬ ಪುರುಷನ ಜೀವನವು ಗೊಂದಲಮಯವಾಗಿರುವಾಗ ಆತನಿಗೆ ಶಕ್ತಿ ತುಂಬಲು ಒಂದು ಹೆಣ್ಣಿನ ಅಗತ್ಯವಿರುತ್ತದೆ. ಜೀವನದಲ್ಲಿ ರಾಜನನ್ನು ರಕ್ಷಿಸಲು, ರಾಣಿ ಬೇಕು. ಮಹಿಳಾ ದಿನಾಚರಣೆಯ ಶುಭಾಶಯಗಳು
  3. ಪ್ರತಿ ಮನೆ, ಪ್ರತಿ ಹೃದಯ, ಪ್ರತಿ ಭಾವನೆ, ಸಂತೋಷದ ಪ್ರತಿ ಕ್ಷಣವೂ ನೀವು ಇಲ್ಲದೆ ಅಪೂರ್ಣ. ನೀವು ಮಾತ್ರ ಈ ಜಗತ್ತನ್ನು ಪೂರ್ಣಗೊಳಿಸಬಹುದು. ಮಹಿಳಾ ದಿನಾಚರಣೆಯ ಶುಭಾಶಯಗಳು.
  4. ಮಹಿಳೆ ತ್ಯಾಗಮೂರ್ತಿ, ತನ್ನ ಬದುಕನ್ನು ಕುಟುಂಬಕ್ಕಾಗಿ ಮೀಸಲಿಡುವ ಶಕ್ತಿ. ಆಕೆಯ ಶ್ರಮ, ಪ್ರೀತಿ ಅದ್ಭುತ. ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
  5. ಅಮ್ಮನಿಂದ ಹಿಡಿದು ಮಡದಿವರೆಗೆ, ಸೋದರಿಯಿಂದ ಹಿಡಿದು ಪುತ್ರಿಯವರೆಗೆ ಪ್ರತಿಯೊಂದು ಹಂತದಲ್ಲೂ ಮಹಿಳೆ ಎಂಬ ಬಲ ಇಲ್ಲದೇ ಹೋದರೆ ಯಾರ ಜೀವನಕ್ಕೂ ಅಸ್ತಿತ್ವವೇ ಇರದು. ಮಹಿಳಾ ದಿನಾಚರಣೆಯ ಶುಭಾಶಯಗಳು
  6. ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವ ದೇವತೆ ಹೆಣ್ಣು. ಹೆಣ್ಣಾಗಿ ಹುಟ್ಟಿರುವುದಕ್ಕೆ ಸದಾ ಹೆಮ್ಮೆ ಪಡಿ. ಮಹಿಳಾ ದಿನಾಚರಣೆಯ ಶುಭಾಶಯಗಳು

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Thu, 7 March 24