International Yoga Day 2023: ನಿಮ್ಮ ಕೂದಲಿನ ಸಮಸ್ಯೆಗೆ ಯೋಗಾಸನದಿಂದ ಪರಿಹಾರ ಕಂಡುಕೊಳ್ಳಿ

|

Updated on: Jun 18, 2023 | 3:13 PM

ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಯೋಗ ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

International Yoga Day 2023: ನಿಮ್ಮ ಕೂದಲಿನ ಸಮಸ್ಯೆಗೆ ಯೋಗಾಸನದಿಂದ ಪರಿಹಾರ ಕಂಡುಕೊಳ್ಳಿ
International Yoga Day 2023
Follow us on

ಅಂತರರಾಷ್ಟ್ರೀಯ ಯೋಗ ದಿನಾಚರಣೆಯು (International Yoga Day 2023) ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಯೋಗ ಎಷ್ಟರ ಮಟ್ಟಿಗೆ ಪ್ರಮುಖ್ಯತೆಯನ್ನು ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ. ಯೋಗವು ಸಮಗ್ರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಯೋಗ ಆಂತರಿಕ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸಲು ಮಾತ್ರವಲ್ಲದೆ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ನಿಮ್ಮ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಹಲವಾರು ಯೋಗ ಆಸನಗಳಿವೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಚರ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ಈ ಯೋಗಾಸನಗಳು:

ಕಪಾಲಭಾತಿ:

ಕಪಾಲಭಾತಿ ಎರಡು ಸಂಸ್ಕೃತ ಪದಗಳಿಂದ ಬಂದಿದೆ: ಕಪಾಲ , ಇದರರ್ಥ “ತಲೆಬುರುಡೆ” ಮತ್ತು ಭಾತಿ, ಇದರರ್ಥ “ಬೆಳಕು”. ಈ ಉಸಿರಾಟದ ವ್ಯಾಯಾಮವು ಸಂಪೂರ್ಣ ತಲೆ ಅಥವಾ ಮುಖದ ಪ್ರದೇಶ, ಹೀಗೆ ಉತ್ತಮ ಆಮ್ಲಜನಕ ಪೂರೈಕೆಯನ್ನು ಉತ್ತೇಜಿಸುತ್ತದೆ ಮತ್ತು ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡುತ್ತದೆ, ಕೂದಲಿನ ಬೆಳವಣಿಗೆಯನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಅಧೋ ಮುಖ ಶ್ವಾನಾಸನ:

ಅಧೋ ಮುಖ ಶ್ವಾನಾಸನ ಸೂರ್ಯ ನಮಸ್ಕಾರದ ಸಮಯದಲ್ಲಿ ಅಭ್ಯಾಸ ಮಾಡುವ 12 ಭಂಗಿಗಳಲ್ಲಿ ಒಂದಾಗಿದೆ . ಇದು ಪರಿವರ್ತನೆಯ ವಿಶ್ರಾಂತಿ ಭಂಗಿಯಾಗಿದ್ದು, ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ನೆತ್ತಿಯನ್ನು ತಲುಪುವ ಆಮ್ಲಜನಕದ ಹರಿವನ್ನು ಸರಾಗಗೊಳಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಯಕೃತ್ತು ಆರೋಗ್ಯಕರ ಮತ್ತು ಬಲವಾಗಿರಲು ಪ್ರಮುಖ ಯೋಗ ಆಸನಗಳು

3. ಸರ್ವಾಂಗಾಸನ:

ಈ ಆಸನವು ನಿಮ್ಮ ತಲೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಭಂಗಿಯ ದೈನಂದಿನ ಅಭ್ಯಾಸವು ನಿಮ್ಮ ತಲೆಯ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಬೀರುತ್ತದೆ ಮತ್ತು ತೆಳ್ಳನೆಯ ಕೂದಲಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ , ಈ ಭಂಗಿಯನ್ನು ಅಭ್ಯಾಸ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

4. ಬಾಲಾಸನ:

ಈ ಭಂಗಿ ಕೂದಲು ಉದುರುವಿಕೆಗೆ ಕಾರಣವಾಗುವ ಒತ್ತಡ ಮತ್ತು ಜೀರ್ಣಕಾರಿ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಯಾವುದೇ ಹೊಟ್ಟೆ-ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸಲು ಬಾಲಸಾನವನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ ಮತ್ತು ಇದು ಆತಂಕಕ್ಕೆ ಸಹಾಯ ಮಾಡುತ್ತದೆ. ಈ ಭಂಗಿಯ ದೈನಂದಿನ ಅಭ್ಯಾಸವು ನಿಮ್ಮ ಜೀರ್ಣಕಾರಿ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: