AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Yoga Day: ಯೋಗ ಎಂದರೇನು? ಯೋಗಾಭ್ಯಾಸದ ಶ್ರೀಮಂತ ಪರಂಪರೆ, ಮಹತ್ವ ಮತ್ತು ವಿಶೇಷ ಮಾಹಿತಿ ಇಲ್ಲಿದೆ

ವಿದೇಶಿ ಆಕ್ರಮಣದಿಂದ ಚಿತ್ತಾಗಿದ್ದ ಭಾರತದಲ್ಲಿ ಜೀವನ ಕ್ರಮಗಳು ಬದಲಾಗುತ್ತ ಬಂದಂತೆ ಯೋಗದ ಪದ್ಧತಿಗಳು ಕಡಿಮೆಯಾಗುತ್ತ ಹೋಯಿತು.

International Yoga Day: ಯೋಗ ಎಂದರೇನು? ಯೋಗಾಭ್ಯಾಸದ ಶ್ರೀಮಂತ ಪರಂಪರೆ, ಮಹತ್ವ ಮತ್ತು ವಿಶೇಷ ಮಾಹಿತಿ ಇಲ್ಲಿದೆ
ಡಾ. ಹೃಷಿಕೇಶ ಪಿ
ನಯನಾ ಎಸ್​ಪಿ
|

Updated on:Jun 15, 2023 | 1:10 PM

Share

ಯೋಗ (Yoga) ಎಂಬ ಶಬ್ಧವು ‘ಯುಜಿರ್ ಯೋಗೇ’ ಮತ್ತು ‘ಯುಜ: ಸಮಾಧೌ’ ಎಂಬ ಧಾತುವಿನಿಂದ ವ್ಯುತ್ಪನ್ನವಾಗಿದೆ. ‘ಯುಜ’ ಅಂದರೆ ಸಮಾಧಿ ಅಂತಲೂ ‘ಯುಜಿರ್’ ಅಂದರೆ ಸಂಧಿ ಅಥವಾ ಕೂಡುವುದು ಎಂದು ಅರ್ಥ. ಇವೆರಡರ ಒಟ್ಟು ಭಾವವೇ ಜೀವಾತ್ಮ ಪರಮಾತ್ಮನಲ್ಲಿ ಸಂಧಿ ಅಥವಾ ಲೀನವಾಗುವುದು. ಇದನ್ನು ಮೋಕ್ಷ ಎಂದು ಕರೆಯುತ್ತಾರೆ. ಯೋಗಾಭ್ಯಾಸದ ಪರಮಲಕ್ಷ್ಯವೇ ಸಮಾಧಿಯನ್ನು ಪಡೆಯುವುದು ಮತ್ತು ತನ್ನನ್ನು ತಾನು ಅರಿತುಕೊಳ್ಳುವುದು. ಈ ಹಂತವೇ ಮನುಷ್ಯ ಪ್ರಜ್ಞೆಯ ಅತ್ಯುನ್ನತ ಸ್ಥಿತಿ.

ಯೋಗದ ಇತಿಹಾಸ :

ಭಾರತೀಯ ಶಾಸ್ತ್ರಗಳ ಪ್ರಕಾರ ಯಾವಾಗ ಭೂಮಿಯ ಉಗಮವಾಯಿತೋ ಅವಾಗಿಂದಿಂದಲೇ ಯೋಗದ ಪ್ರಾರಂಭವಾಯಿತು. ಭಾರತೀಯ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿದ್ದ ಯೋಗವು ನಾಗರೀಕತೆ ಬೆಳೆದಂತೆ ಅದಕ್ಕೆ ಗ್ರಾಂಥಿಕ ರೂಪವೂ ದೊರಕಿತು. ಯೋಗದ ಬಗ್ಗೆ ನಮ್ಮ ಇತಿಹಾಸವಾದ ರಾಮಾಯಣ ಮತ್ತು ಮತ್ತು ಮಹಾಭಾರತದಲ್ಲಿ ಉಲ್ಲೇಖವಿದೆ. ಮಹರ್ಷಿ ವಸಿಷ್ಠರು ಶ್ರೀ ರಾಮನಿಗೆ ಯೋಗ ಶಾಸ್ತ್ರವನ್ನು ಪಾಠ ಮಾಡಿದ್ದು ಯೋಗಾ ವಾಸಿಷ್ಠ ಎಂಬ ಗ್ರಂಥದ ಮೂಲಕ ಲಭ್ಯತೆಯಿದೆ. ಮಹಾಭಾರತ ಕಾಲದಲ್ಲಿ ಶ್ರೀ ಕೃಷ್ಣನೇ ಅರ್ಜುನನಿಗೆ ಯೋಗದ ಉಪದೇಶ ಮಾಡಿ ಭಾಗವದ್ಗೀತೆಯೆಂಬ ಉನ್ನತ ಸಾಹಿತ್ಯ ದೊರಕುವಂತಾಯಿತು. ಇವೆಲ್ಲ ಸುಮಾರು 5000 ವರ್ಷಗಳ ಹಿಂದೆ ನಡೆದು ಹೋದ ಇತಿಹಾಸ.

ವೇದ ಮತ್ತು ಉಪನಿಷತ್ತುಗಳು ಗ್ರಾಂಥಿಕ ರೂಪ ಪಡೆದಿದ್ದೇ ಮಹಾಭಾರತದ ಅಂತ್ಯ ಕಾಲದಲ್ಲಿ. ಇವೆಲ್ಲವುಗಳಲ್ಲಿ ಯೋಗದ ಉಲ್ಲೇಖಗಳಿವೆ ಮತ್ತು ಜನರ ಜೀವನ ಪದ್ಧತಿಯೂ ಆಗಿತ್ತು. ಆದುದರಿಂದ ಯೋಗದ ಇತಿಹಾಸವನ್ನುಕೇವಲ ೫೦೦೦ ವರ್ಷಕ್ಕೆ ಸೀಮಿತಗೊಳಿಸುವದು ಸಲ್ಲದು.

ಸುಮಾರು 3500 ವರ್ಷಗಳ ಹಿಂದೆ ಹಿಮಾಲಯದಲ್ಲಿ ನೆಲೆಸಿದ್ದ ಮಹರ್ಷಿ ಪತಂಜಲಿಯವರು ಯೋಗಕ್ಕೆ ಗ್ರಾಂಥಿಕ ರೂಪ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಯೋಗದ ಶಾಸ್ತ್ರವನ್ನು ಸೂತ್ರಗಳ ರೂಪದಲ್ಲಿ ಜೋಡಿಸಿ ಪಾತಂಜಲ ಯೋಗ ಸೂತ್ರ ಎನ್ನುವ ಗ್ರಂಥ ದೊರಕುವಂತಾಯಿತು ಮತ್ತು ಇದರಲ್ಲಿ ೧೯೬ ಸೂತ್ರಗಳಿವೆ. ಇದುವೇ ಯೋಗ ಶಾಸ್ತ್ರದ ಮತ್ತು ಯೋಗ ಸಾಧನೆಯ ಪ್ರಥಮ ಗ್ರಂಥ ಎಂದರೆ ತಪ್ಪಾಗಲಾರದೋ ಏನೋ?!. ಪಾತಂಜಲ ಯೋಗ ಸೂತ್ರಗಳಲ್ಲಿ ಯೋಗ ಸಾಧನೆಯನ್ನು ಮಾಡುವ ಬಗೆ, ಹಂತಗಳ ಬಗ್ಗೆ, ಸಿದ್ಧಿಗಳು ಮತ್ತು ಮೋಕ್ಷದ ವಿವರಣೆಯಿದೆ.

ಸುಮಾರು 500-1000 ವರ್ಷಗಳ ಹಿಂದೆ ಭಕ್ತಿ ಯೋಗ, ಜ್ಞಾನಯೋಗ, ತಂತ್ರ ಯೋಗ, ಹಠ ಯೋಗವು ಹೆಚ್ಚು ಪ್ರಚಾರಕ್ಕೆ ಬಂದು ವ್ಯಾಪಕವಾಗಿ ಅನುಸರಿಸುವಂತಾಯಿತು. ಹಠ ಸಿದ್ಧಿಗಾಗಿ ಬೇರೆ ಬೇರೆ ಆಸನ ಕ್ರಮಗಳು, ಬಂಧ ಮುದ್ರೆಗಳನ್ನು ಉಲ್ಲೇಖಿಸಿ ಹಠ ಯೋಗ ಮತ್ತು ಘಠ ಯೋಗಗಳು ಪ್ರಸಿದ್ಧಿಯಾದವು.

ವಿದೇಶಿ ಆಕ್ರಮಣದಿಂದ ಚಿತ್ತಾಗಿದ್ದ ಭಾರತದಲ್ಲಿ ಜೀವನ ಕ್ರಮಗಳು ಬದಲಾಗುತ್ತ ಬಂದಂತೆ ಯೋಗದ ಪದ್ಧತಿಗಳು ಲುಪ್ತವಾಗುತ್ತ ಸಾಗಿತು. ಹೊಸ ಶಿಕ್ಷಣ ಪದ್ದತಿಗೆ ತೆರೆದುಕೊಂಡರೂ ನಮ್ಮ ಋಷಿಗಳು ಹಾಗೂ ಸಾಧಕ ಮಹಾನುಭಾವರ ಪ್ರಯತ್ನದಿಂದ ಯೋಗ ಜೀವಂತವಾಗಿ ಈಗಲೂ ಉಳಿವಂತಾಯಿತು ಮತ್ತು ಬೆಳಗುವಂತಾಯಿತು. ಇದು ನಮ್ಮ ಭಾರತೀಯ ಶಿಕ್ಷಣ ಕ್ರಮದ ಶ್ರೇಷ್ಠತೆ. 21ನೇ ಶತಮಾನದ ಸಾಧಕ ಯೋಗಿ ಎಂದು ನಾವು ನಮ್ಮ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಕರೆದರೆ ತಪ್ಪಾಗಲಾರದು. ಯಾಕೆಂದರೆ ಅವರಿಂದಾಗಿಯೇ ಜೂನ್ 21 ರ ಯೋಗ ದಿನವು ವಿಶ್ವ ಮಾನ್ಯವಾಗಲು ಕಾರಣವಾಯಿತು.

ಜೂನ್ 21 ರ ಯೋಗ ದಿನದ ಔಚಿತ್ಯ :

ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ಪ್ರತಿ ವರ್ಷ ಜೂನ್ 21ರಂದು ಆಚರಿಸಲ್ಪಡುವ ಒಂದು ವಿಶ್ವ ಆಚರಣೆ ಮತ್ತು ವಿಶ್ವದ ಹಬ್ಬ ಎಂದು ಹೇಳಿದರೂ ಅತಿಶಯೋಕ್ತಿಯಾಗಲಾರದು. ನಮ್ಮ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ ದೃಢ ಸಂಕಲ್ಪದಿಂದ 2014 ರ ಡಿಸೆಂಬರ್ ನಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ 177 ದೇಶಗಳ ಸಹಮತದೊಂದಿಗೆ ಪ್ರತಿ ವರ್ಷ ಜೂನ್ ೨೧ ರಂದು ವಿಶ್ವ ಯೋಗ ದಿನಚರಣೆಯಾಗಿ ಅಚರಿಸುವಂತಾಯಿತು. ಇದರಿಂದ ಯೋಗ ಶಾಸ್ತ್ರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಂತದ್ದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ.

ಜೂನ್ 21ರ ವಿಶೇಷತೆಯೇನು?

ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಸೂಚಿಸಲು ಬಲವಾದ ಕಾರಣವಿದೆ. ಜೂನ್ 21 ರಂದು ಉತ್ತರಾಯನ ಕಾಲದ ಅತೀ ಹೆಚ್ಚಿನ ಹಗಲು ಹೊಂದಿರುವ ದಿನ. ಈ ದಿನ ನಾವು ಅತೀ ಬೇಗ ಸೂರ್ಯೋದಯ ಮತ್ತು ಅತೀ ತಡವಾಗಿ ಸೂರ್ಯಾಸ್ತವನ್ನು ಕಾಣಬಹುದು. ಈ ದಿನವನ್ನು ಬೇಸಿಗೆ ಅಥವಾ ದಕ್ಷಿಣ ಅಯನ ಸಂಕ್ರಾಂತಿ ದಿನವೆಂದು ಕರೆಯಲಾಗುತ್ತದೆ. ಅಂದರೆ ಸೂರ್ಯನ ದಕ್ಷಿಣ ಚಲನೆಯ ಸಂಧಿ ಮತ್ತು ಆರಂಭ ಕಾಲ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.

ಈ ವರ್ಷ ನಾವು ೯ ನೇ ವಿಶ್ವ ಯೋಗ ದಿನವನ್ನು ಆಚರಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ಮಾನವತೆಗಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಯೋಗದ ಮೂಲ ಉದ್ದೇಶ ಎಲ್ಲರಿಗೂ ತಿಳಿಯುವಂತಾಗಲಿ ಮತ್ತು ಆಚರಿಸುವಂತಾಗಲಿ. ವಿಶ್ವಕ್ಕೆ ಶುಭವಾಗಲಿ.

ಲೇಖನ: ಡಾ. ಹೃಷಿಕೇಶ ಪಿ

ಇದನ್ನೂ ಓದಿ: ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯ ಮಾನವತೆಗಾಗಿ ಯೋಗ; ಇಡೀ ವಿಶ್ವವನ್ನೇ ಕುಟುಂಬ ಸಮಾನವಾಗಿಸುವಲ್ಲಿ ಯೋಗದ ಪಾತ್ರ

ಡಾ. ಹೃಷಿಕೇಶ ಪಿ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಜೆಪಿ ನಗರದಲ್ಲಿ ತ್ರಿಪುರಾ ಯೋಗ ಥೆರಪಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಯೋಗ ಚಿಕಿತ್ಸಾ ಕ್ಷೇತ್ರದಲ್ಲಿ 12+ ವರ್ಷಗಳ ಅನುಭವವನ್ನು ಹೊಂದಿರುವ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, 2018 ರಲ್ಲಿ, CD4 ಎಣಿಕೆಗಳು ಮತ್ತು HIV- ಸೋಂಕಿತರ ದೇಹದ ತೂಕದ ಮೇಲೆ ಯೋಗ ಚಿಕಿತ್ಸೆಯ ಪರಿಣಾಮದ ಅಧ್ಯಯನಕ್ಕಾಗಿ ತಮ್ಮ ಡಾಕ್ಟರೇಟ್ ಪದವಿಯನ್ನು ಪಡೆದರು.

ಈ ಹಿಂದೆ ಡಾ. ಹೃಷಿಕೇಶ ಯೋಗ ವಿಜ್ಞಾನ ಅಧ್ಯಾಪಕರಾಗಿ, ಬೆಂಗಳೂರಿನ ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್‌ನಲ್ಲಿ ಯೋಗ ಚಿಕಿತ್ಸಕರಾಗಿ ಹಾಗು ಸಿಂಗಾಪುರದಲ್ಲೂ ಯೋಗ ಶಿಕ್ಷಕರಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9113893928 ಕರೆ ಮಾಡಿ ಅಥವಾ ತ್ರಿಪುರಾ ಯೋಗ ಥೆರಪಿ, 894, 10ನೇ ಎ ಈಸ್ಟ್ ಕ್ರಾಸ್ ರೋಡ್, ಆರ್‌ಬಿಐ ಲೇಔಟ್, ಜೆಪಿ ನಗರ 7ನೇ ಹಂತ, ಬೆಂಗಳೂರು-78 ಕ್ಕೆ ಭೇಟಿ ನೀಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ; 

Published On - 6:45 am, Thu, 15 June 23

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!